ಶನಿವಾರ, ಮಾರ್ಚ್ 6, 2021
21 °C
ಮೊದಲ ಓದು

ಕಾಮ್ರೇಡ್‌ ಕೆ.ಎಂ. ಶ್ರೀನಿವಾಸ್‌ (ಅಭಿನಂದನಾ ಗ್ರಂಥ)

ಸಂ: ಕೆ.ಆರ್‌. ದಯಾನಂದ,ಡಾ. ಬಿ. ಗಣಪತಿ ಉತ್ತುಂಗ Updated:

ಅಕ್ಷರ ಗಾತ್ರ : | |

ಕಾಮ್ರೇಡ್‌ ಕೆ.ಎಂ. ಶ್ರೀನಿವಾಸ್‌ (ಅಭಿನಂದನಾ ಗ್ರಂಥ)

ಕಾಮ್ರೇಡ್‌ ಕೆ.ಎಂ. ಶ್ರೀನಿವಾಸ್‌ (ಅಭಿನಂದನಾ ಗ್ರಂಥ)

ಸಂ: ಕೆ.ಆರ್‌. ದಯಾನಂದ, ಡಾ. ಬಿ. ಗಣಪತಿ ಉತ್ತುಂಗ,  ಪ್ರ: ಕಾಳಮ್ಮನಗುಡಿ ಕೆ.ಎಂ. ಶ್ರೀನಿವಾಸ್‌ ಅಭಿನಂದನಾ ಸಮಿತಿ, ತೀರ್ಥಹಳ್ಳಿ– 577 432, ಶಿವಮೊಗ್ಗ ಜಿಲ್ಲೆ

ಪು:180

ರೂ.300

ತೀರ್ಥಹಳ್ಳಿ ತಾಲ್ಲೂಕಿನ ಕಾಳಮ್ಮನಗುಡಿ ಗ್ರಾಮದವರಾದ ಕೆ.ಎಂ. ಶ್ರೀನಿವಾಸ್‌ ಕಮ್ಯುನಿಸ್ಟರು, ಜನಪರ ಹೋರಾಟಗಾರರು. ಅವರಿಗೀಗ 86 ವರ್ಷ. ಭೂಮಾಲೀಕರ ವಿರುದ್ಧ ನಡೆಸಿದ ರೈತ ಹೋರಾಟ, ವರಾಹಿ ಮುಳುಗಡೆ, ಬೀಡಿ ಕಾರ್ಮಿಕರ ಹೋರಾಟಗಳೂ ಸೇರಿದಂತೆ ಇನ್ನೂ ಅನೇಕ ಜನಪರ ಹೋರಾಟಗಳಲ್ಲಿ ಮುಂಚೂಣಿಯಲ್ಲಿದ್ದ ಮುಖಂಡ ಅವರು.

ಸಮಾಜವಾದಿ ನೆಲವಾದ ಶಿವಮೊಗ್ಗ ಜಿಲ್ಲೆಯಲ್ಲಿ ಅಪ್ಪಟ ಕಮ್ಯುನಿಸ್ಟ್‌ರಾಗಿ ಗುರುತಿಸಿಕೊಂಡಿದ್ದ, ಸಮಾಜವಾದಿ ರಾಜಕಾರಣಿ ಶಾಂತವೇರಿ ಗೋಪಾಲ ಗೌಡರ ಒಡನಾಡಿ ಕಾಳಮ್ಮನಗುಡಿ ಶ್ರೀನಿವಾಸರನ್ನು ಅವರ ಅಭಿಮಾನಿಗಳು, ಸ್ನೇಹಿತರು, ಆತ್ಮೀಯರು ಅವರ ಕೆಲಸ ಹಾಗೂ ವ್ಯಕ್ತಿತ್ವವನ್ನು ಇಲ್ಲಿ ನೆನಪಿಸಿಕೊಂಡಿದ್ದಾರೆ.ಸ್ವತಃ ಶ್ರೀನಿವಾಸರು ತಮ್ಮ ಬದುಕಿನ ಬಗ್ಗೆ ‘ನನ್ನ ಬದುಕು–ಬಗ್ಗಡದಾಳದ ತಿಳಿನೀರು’ (ನಿರೂಪಣೆ : ಬಿ.ಎಸ್‌. ನಾಗೇಶ್‌) ಎಂಬ ಅಧ್ಯಾಯದಲ್ಲಿ ಮಾತನಾಡಿದ್ದಾರೆ. ಅವರ ನೆನಪುಗಳಲ್ಲಿ ಅವರ ಬದುಕು ಹಾಗೂ ತೀರ್ಥಹಳ್ಳಿಯ ಸಮಾಜವಾದಿ ಹೋರಾಟ, ಆಗಿನ ರಾಜಕೀಯದ ದಟ್ಟ ನೆನಪುಗಳಿವೆ, ಅದರ ನಿಷ್ಠುರ ಚಿತ್ರಣವಿದೆ. ಇದಲ್ಲದೆ ಅವರ ಮಗಳು ವೀಣಾ, ಡಿ.ಬಿ. ಚಂದ್ರೇಗೌಡ, ನೆಂಪೆ ದೇವರಾಜ್‌, ಕಿಮ್ಮನೆ ರತ್ನಾಕರ ಇಲ್ಲಿ ಅವರ ಬಗ್ಗೆ ಬರೆದಿದ್ದಾರೆ.ಬದುಕಿನ ನಿರ್ವಹಣೆಗೆ ಕೃಷಿಕರಾಗಿ ಬದುಕು ಸಾಗಿಸಿದ, ಅನ್ಯಾಯದ ವಿರುದ್ಧ ಹೋರಾಡಿದ ಪ್ರಾಮಾಣಿಕ ಹೋರಾಟಗಾರನೊಬ್ಬನ ಬಗ್ಗೆ ಕೊಂಚ ತಡವಾಗಿಯಾದರೂ ಒಂದು ಪುಸ್ತಕ ಬಂದಿದೆ. ಮನುಷ್ಯ ಹೋರಾಟವನ್ನು ದಾಖಲಿಸುವುದು, ಆ ನೆನಪನ್ನು ಜೀವಂತವಾಗಿ ಇಡುವುದು ಇಂಥ ಪುಸ್ತಕಗಳೇ ಆದ್ದರಿಂದ ಈ ಅಭಿನಂದನ ಗ್ರಂಥ ಸಕಾಲಿಕವಾಗಿದೆ; ತೀರ್ಥಹಳ್ಳಿಯ ಜನರು ಅವರಿಗೆ ಸಲ್ಲಿಸಿದ ಗೌರವವೂ ಆಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.