ಗುರುವಾರ , ಏಪ್ರಿಲ್ 22, 2021
30 °C

ಕಾಯಕನಿಷ್ಠೆ ಮೂಡಲಿ: ಪಂಡಿತಾರಾಧ್ಯ ಶ್ರೀ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿತ್ರದುರ್ಗ: ಹನ್ನೆರಡನೆ ಶತಮಾನದ ಯಾವುದೇ ಶರಣ, ಶರಣೆಯರು ನುಡಿ ಜಾಣರಷ್ಟೇ ಅಲ್ಲ; ನಡೆ ಧೀರರಾಗಿದ್ದವರು. ಸತ್ಯಶುದ್ಧ ಕಾಯಕದಿಂದ ಬಂದ ಆದಾಯದಲ್ಲಿ ಜೀವನ ನಡೆಸುತ್ತಿದ್ದರು. ತಮ್ಮ   ಕಾಯಕಕ್ಕೆ ಎಂದೂ ಚ್ಯುತಿಯಾಗದಂತೆ ನೋಡಿಕೊಂಡವರು. ಇಂಥ ಕಾಯಕನಿಷ್ಠೆ ನಾಡಿನ ರಾಜಕಾರಣಿಗಳಿಗೆ, ಧಾರ್ಮಿಕ ನೇತಾರರಿಗೆ, ಅಧಿಕಾರಿಗಳಿಗೆ, ಜನಸಾಮಾನ್ಯರಿಗೆ ಬಂದಲ್ಲಿ ನಾಡು ಸುಭೀಕ್ಷೆಯಿಂದ ಕೂಡಿರುತ್ತದೆ ಎಂದು ಸಾಣೇಹಳ್ಳಿಯ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯಪಟ್ಟರು.ಸಾಣೇಹಳ್ಳಿಯಲ್ಲಿ ನಡೆಯುತ್ತಿರುವ ರಾಷ್ಟ್ರೀಯ ನಾಟಕೋತ್ಸವದ ಕೊನೆಯ ದಿನವಾದ ಗುರುವಾರ ಬೆಳಗಿನ ಚಿಂತನ ಗೋಷ್ಠಿಯಲ್ಲಿ ಅವರು ಮಾತನಾಡಿದರು. ಬಸವಾದಿ ಶರಣರ ವಚನಗಳನ್ನು ಅಧ್ಯಯನ ಮಾಡುವುದರಿಂದ, ಕೇಳುವುದರಿಂದ, ಕೇಳಿದುದನ್ನು ಮನನ ಮಾಡುವುದರಿಂದ, ಮನನ ಮಾಡಿರುವುದನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದರಿಂದ ಜಾಡ್ಯ ದೂರವಾಗಿ, ಜಂಗಮತ್ವ ಅಳವಡುತ್ತದೆ ಎಂದು ಹೇಳಿದರು.ಹೊಸದುರ್ಗ ಕ್ಷೇತ್ರಶಿಕ್ಷಣಾಧಿಕಾರಿ ಸಿ.ಎಂ. ತಿಪ್ಪೇಸ್ವಾಮಿ ಮಾತನಾಡಿ, ಚದುರಿ ಹಂಚಿಹೋಗಿದ್ದ ನಮ್ಮ ದೇಶವನ್ನು ಚಂದ್ರಗುಪ್ತಮೌರ್ಯನಿಗೆ ಒಂದು ವಿಶಾಲ ಸಾಮ್ರೋಜ್ಯ ಸ್ಥಾಪನೆಗೆ ತನ್ನ ಗುರು ಚಾಣಕ್ಯನಿಂದ. ಅಕ್ಕ, ಬುಕ್ಕರಿಗೆ ವಿಶಾಲ ವಿಜಯ ನಗರ ಸಾಮ್ಯೋಜ್ಯ ಸ್ಥಾಪನೆಗೆ ಗುರು ವಿದ್ಯಾರಣ್ಯರಿಂದ, ಶಿವಾಜಿಗೆ ವಿಶಾಲ ಮರಾಠ ಸಾಮ್ರೋಜ್ಯ ಸ್ಥಾಪನೆಗೆ ತಾಯಿ ಜೀಜಾಬಾಯಿ ಮತ್ತು ಗುರು ದಾದಾಜಿಕೊಂಡದೇವರು ಕಾರಣರು. ಹೀಗೆ ಒಂದು ಮಹತ್ತರ ಗುರಿಯನ್ನು ಸಾಧಿಸಬೇಕಾದರೆ `ಮುಂದೆ ಗುರಿ ಹಿಂದೆ ಗುರು  ಇರಬೇಕು.

ಅಷ್ಟೇ ಅಲ್ಲ ಮಾರ್ಗದರ್ಶನ ನೀಡುವ ಗುರು ಮತ್ತು ಗುರಿಯಲ್ಲಿ ದೃಢವಾದ ನಂಬಿಕೆ ಇರಬೇಕಾದುದೂ ಅಷ್ಟೇ ಮುಖ್ಯ. ನಮ್ಮ ಹಿರಿಯರು ಇಂಥ ನಂಬಿಕೆಯನ್ನು ಯಾವತ್ತೂ ಕಳೆದುಕೊಂಡಿರಲಿಲ್ಲ. ಇದರಿಂದಾಗಿಯೇ ಅವರು ಜೀವನದಲ್ಲಿ ಎಂಥದ್ದೇ ಸಂದರ್ಭ ಬಂದರೂ ಧೃತಿಗೆಡದೆ ಧೈರ್ಯದಿಂದ ಬದುಕು ಸಾಗಿಸುತ್ತಿದ್ದರು ಎಂದು ವಿವರಿಸಿದರು.ನಾವು ಇಟ್ಟುಕೊಳ್ಳುವ ಗುರಿಯಲ್ಲಿ ನಮಗೆ ಗೊಂದಲ ಇರಬಾರದು. ಮೊದಲು ಸಣ್ಣ-ಸಣ್ಣ ಗುರಿಗಳನ್ನು ಸಾಧಿಸುತ್ತ, ಸಾಧಿಸುತ್ತ ಸಾಗುವುದರಿಂದ ಗೆಲುವುಗಳ ಸರಣಿಯೇ ನಮ್ಮ ಕೈವಶವಾಗುತ್ತದೆ. ವಿದ್ಯಾರ್ಥಿ ಎಂದರೆ ಗೌರವಾನ್ವಿತ ತಪಸ್ವಿ. ಆ ತಪಸ್ವಿಗೆ ಗುರಿ ಮತ್ತು ಗುರು ಎರಡೂ ಬಹಳ ಮುಖ್ಯ ಎಂದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.