ಶುಕ್ರವಾರ, ನವೆಂಬರ್ 15, 2019
20 °C

ಕಾಯಕಲ್ಪಕ್ಕೆ ಕಾದಿದೆ ಹಾಳು ಕೊಂಪೆ ಉದ್ಯಾನ

Published:
Updated:

ಚಿತ್ರದುರ್ಗ: ನಗರದ ಯೂನಿಯನ್ ಉದ್ಯಾನವನ ಹಾಳು ಕೊಂಪೆಯಾಗಿದೆ. ಕಸದ ತೊಟ್ಟಿಯಾಗಿರುವ ಈ ಉದ್ಯಾನವನ ಮಲಮೂತ್ರ ವಿಸರ್ಜನೆಯ ತಾಣವಾಗಿ ಪರಿವರ್ತನೆಯಗೊಂಡಿದೆ.ಜಾನುವಾರುಗಳ ಆಶ್ರಯ ತಾಣವೂ ಇದಾಗಿದೆ. ಮಕ್ಕಳ ಆಟಕ್ಕೆ ಇಲ್ಲಿ ಕೆಲವು ಸೌಲಭ್ಯಗಳನ್ನು ಕಲ್ಪಿಸಿದ್ದರೂ ಪ್ರಯೋಜನಕ್ಕೆ ಬರುತ್ತಿಲ್ಲ. ಹಲವು ಆಟದ ಸಾಮಗ್ರಿಗಳು ಹಾಳಾಗಿವೆ.ಅಲ್ಲಲ್ಲಿ ಕಸದ ರಾಶಿ, ಕಟ್ಟಡಗಳ ಅವೇಶಷಗಳು ಕೊಳೆತು ದುರ್ನಾತ ಬೀರುತ್ತಿವೆ. ಉದ್ಯಾನದ ಒಳಗಿರುವ ನಲ್ಲಿಯಿಂದ ಒಂದೇ ಸಮನೆ ನೀರು ಹರಿಯುವ ಕಾರಣ ಕೊಳಚೆ ಪ್ರದೇಶವಾಗಿದೆ. ಈ ಸ್ಥಳ ಹಂದಿ, ನಾಯಿ, ದನಗಳ ಗೂಡಾಗಿಪ್ರಾಣಿಗಳ ವಾಸಸ್ಥಾನವಾಗಿ ಮಾರ್ಪಟ್ಟಿವೆ.ಉದ್ಯಾನ ಮುಂಭಾಗದಲ್ಲಿಇರುವ ಚರಂಡಿಗೂ ಕಾಯಕಲ್ಪ ದೊರೆತಿಲ್ಲ. ಈ ಚರಂಡಿಯನ್ನು ಸ್ವಚ್ಛಗೊಳಿಸುವ ಕಾರ್ಯಕ್ಕೆ ಇದುವರೆಗೆ ನಗರಸಭೆ ಮುಂದಾಗಿಲ್ಲ. ಇದರಿಂದ ಸೊಳ್ಳೆಗಳ ತಾಣವಾಗಿ ಸಾಂಕ್ರಾಮಿಕ ರೋಗಗಳು ಹರಡಲು ಕಾರಣವಾಗಿದೆ.ಇನ್ನೂ ಕೆಲವು ಸಂಘಟನೆಗಳು ಉದ್ಯಾನದಲ್ಲಿ ಅಡುಗೆ ಮಾಡಿ ಕಾರ್ಯಕರ್ತರಿಗೆ ತಿಂಡಿ, ಊಟ ಮಾಡಿಸುವ ವ್ಯವಸ್ಥೆಯನ್ನು ರೂಢಿಸಿಕೊಂಡಿದ್ದಾರೆ. ಆದರೆ, ಈ ಸಂಘಟನೆಗಳು ಇಲ್ಲಿ ಸ್ವಚ್ಛತೆ ಕಾಪಾಡುವ ಬಗ್ಗೆ ಗಮನಹರಿಸುವುದಿಲ್ಲ. ಊಟದ ಎಲೆಗಳು, ತಟ್ಟೆಗಳು ಇಲ್ಲಿ ಸದಾ ಬಿದ್ದಿರುತ್ತವೆ.`ಈ ಉದ್ಯಾನದಲ್ಲಿ ಸ್ವಚ್ಛತೆ ಕಾಪಾಡಬೇಕು ಮತ್ತು ಎಲ್ಲೆಡೆ ಹಸಿರು ಕಾಣುವಂತೆ ಗಿಡಮರಗಳನ್ನು ಮತ್ತಷ್ಟು ಬೆಳೆಸಬೇಕು. ಜತೆಗೆ ಅಲಂಕಾರಿಕ ಗಿಡಗಳನ್ನು ನೆಡಬೇಕು. ಉದ್ಯಾನದಲ್ಲಿ ಇತರ ಚಟುವಟಿಕೆಗಳನ್ನು ನಡೆಯದಂತೆ ನಿರ್ಬಂಧಿಸಬೇಕು ಎಂದು ಇಲ್ಲಿನ ಸ್ಥಳೀಯರು ಆಗ್ರಹಿಸುತ್ತಾರೆ.

ಪ್ರತಿಕ್ರಿಯಿಸಿ (+)