ಶನಿವಾರ, ಜೂಲೈ 11, 2020
29 °C

ಕಾಯಕಲ್ಪದ ನಿರೀಕ್ಷೆಯಲ್ಲಿ ಪ್ರಜಾರಾಜ್ಯದ ಕನಸು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗಣರಾಜ್ಯ, ಪ್ರಜಾರಾಜ್ಯ ನಮ್ಮ ದೇಶದಲ್ಲಿ 1952 ರಿಂದ ಅಸ್ತಿತ್ವದಲ್ಲಿ ಬಂದು ಆರನೇ ದಶಮಾನೋತ್ಸವವನ್ನು ಆಚರಿಸುವ ಹಂತವನ್ನು ತಲುಪುತ್ತಿದ್ದೇವೆ. ಪ್ರಜಾರಾಜ್ಯದಲ್ಲಿ ಪ್ರಜೆಗಳ ಬದಲಿಗೆ ಅವರ ಪರವಾಗಿ ಪ್ರಜಾ ಪ್ರತಿನಿಧಿಗಳು ಪ್ರಜಾರಾಜ್ಯವನ್ನು ಆಳುತ್ತಿದ್ದರೆ ಗ್ರಾಮ ಪಂಚಾಯಿತಿ, ಗ್ರಾಮ ಸಹಕಾರ ಸಂಘ, ಶಾಲಾ ಸುಧಾರಣಾ ಸಮಿತಿ, ದೇವಸ್ಥಾನ ಸಮಿತಿ, ಪಟ್ಟಣ ಪಂಚಾಯತಿ, ಪುರಸಭೆ, ನಗರಸಭೆ, ನಗರಪಾಲಿಕೆ, ತಾಲೂಕ ಪಂಚಾಯಿತಿ, ಜಿಲ್ಲಾ ಪಂಚಾಯಿತಿ ವಿವಿಧ ಎಲ್ಲಾ ಮಟ್ಟದ ಸಹಕಾರ ಸಂಘಗಳು, ವಿವಿಧ ಸಂಘ ಸಂಸ್ಥೆ, ಸಮಿತಿ, ನಿಗಮ, ಮಂಡಳಿ, ವಿಶ್ವವಿದ್ಯಾಲಯ, ವಿಧಾನ ಸಭೆ, ಲೋಕಸಭೆ ಇತ್ಯಾದಿ ಪ್ರಜಾ ಪ್ರತಿನಿಧಿಗಳ ಘಟಕಗಳ ಆಡಳಿತ ದೇಶದಾದ್ಯಂತ ನಡೆಯುತ್ತಲೇ ಇದೆ.ಈ ಎಲ್ಲಾ ಪ್ರಜಾಪ್ರತಿನಿಧಿಗಳ ಆಡಳಿತ ಬಹುಮಟ್ಟಿಗೆ ಶ್ಲಾಘನೀಯವಾಗಿದೆ, ಅಭಿ ನಂದನೀಯವಾಗಿದೆ. ದೇಶದ ಸರ್ವಾಂಗೀಣ ಸಾಮಾಜಿಕ, ಸಾಮಾನ್ಯ ಹಾಗೂ ಆರ್ಥಿಕ ಅಭಿವೃದ್ಧಿಗೆ ಹಾಗೂ ಉನ್ನತ ಆಡಳಿತಕ್ಕೆ ತಾರಕ ಹಾಗೂ ಪೂರಕವಾಗಿರುವುದು. ಇದು ನಮ್ಮ ದೇಶದಲ್ಲಿ ಪ್ರಜಾತಂತ್ರ ವ್ಯವಸ್ಥೆ ಬಂದಿ ರುವುದು ಬಹುಮಟ್ಟಿಗೆ ಸಾರ್ಥಕವಾಗಿದೆ. ಈ ಎಲ್ಲಾ ಹಂತದ ಪ್ರಜಾಪ್ರತಿನಿಧಿಗಳ ಆಡಳಿತ ಬಹುಮಟ್ಟಿಗೆ ಸಾರ್ಥಕವಾಗಿದೆ. ಭ್ರಷ್ಟಾ ಚಾರರಹಿತವಾಗಿದೆ. ಸ್ವಾರ್ಥರಹಿತವಾಗಿದೆ. ರಾಗದ್ವೇಷರಹಿತವಾಗಿದೆ. ಸ್ವಜನಪಕ್ಷಪಾತ-ಪಕ್ಷಪಾತರಹಿತವಾಗಿದೆ. ಅಧಿಕಾರ ದುರುಪ ಯೋಗರಹಿತವಾಗಿದೆ. ದುರಾಡಳಿತರಹಿತವಾಗಿದೆ. ಜಾತ್ಯತೀತವಾಗಿದೆ. ಇವರೆಲ್ಲರಿಂದ ಪ್ರಜಾ ರಾಜ್ಯಕ್ಕೆ ಮೆರುಗು ಹಾಗೂ ಕೀರ್ತಿ ಬಂದಿದೆ.ಇದಕ್ಕೆ ವ್ಯತಿರಿಕ್ತವಾಗಿ ದೇಶದಾದ್ಯಂತ ಅನೇಕ ಪ್ರಜಾಪ್ರತಿನಿಧಿಗಳು ಅವರು ಯಾವುದೇ ಹುದ್ದೆಯಲ್ಲಿರಲಿ ಅವರು ಭ್ರಷ್ಟರಾಗಿದ್ದಾರೆ. ರಾಗದ್ವೇಷ ಉಳ್ಳವರಾಗದ್ದಾರೆ. ಪಕ್ಷಪಾತಿ ಗಳಾಗಿದ್ದಾರೆ. ಸ್ವಜನಪಕ್ಷಪಾತಿಗಳಾಗಿದ್ದಾರೆ. ಅಧಿಕಾರ ದುರುಪಯೋಗ ಮಾಡುವವರಿದ್ದಾರೆ. ದುರಾಡಳಿತ ಮಾಡುವವರಿದ್ದಾರೆ. ವಿವಿಧ ಅಪ ರಾಧ ಮನೋವೃತ್ತಿಯವರಿದ್ದಾರೆ. ಪ್ರಜಾ ತಂತ್ರದ ವ್ಯವಸ್ಥೆಗೆ ಕಳಂಕ ಹಾಗೂ ಮಾರಕರಾ ಗಿದ್ದಾರೆ. ಇಂತಹ ಅನೇಕರು ಶಿಕ್ಷೆಗಳಿಗೂ ಒಳ ಪಟ್ಟಿದ್ದಾರೆ.ಇಂತಹವರನ್ನು ಪರಿಣಾಮಕಾರಿ ಯಾಗಿ ಶಿಕ್ಷಿಸಲು ಲೋಕಾಯುಕ್ತ ಕಾಯ್ದೆ, ಭ್ರಷ್ಟಾಚಾರ ನಿರ್ಮೂಲನ ಕಾಯ್ದೆ, ಇಂಡಿ ಯನ್ ಪೀನಲ್ ಕೋಡ್, ಪೊಲೀಸ್ ಕಾಯ್ದೆ ಮೊದಲಾದವು ಬಹುಮಟ್ಟಿಗೆ ನಿಷ್ಕ್ರಿಯವಾ ಗಿರುವುದು. ಹಗರಣದಲ್ಲಿ ಸಿಕ್ಕುಬಿದ್ದಿರುವ ರಾಷ್ಟ್ರದ ಅತ್ಯುನ್ನತ ಪ್ರಜಾಪ್ರತಿನಿಧಿ ಎ. ರಾಜಾ, ಲಲಿತಮೋದಿ, ಸುರೇಶ ಕಲ್ಮಾಡಿ, ಅಶೋಕ ಚವ್ಹಾಣ ಮೊದಲಾದ ಮಂತ್ರಿಗಳು ಸಂಸದರು, ಶಾಸಕರು, ಐಎಎಸ್., ಐಪಿಎಸ್., ಐಎಫ್ ಎಸ್ ಮೊದಲಾದ ಅಧಿಕಾರಿಗಳು ಪ್ರಜಾರಾಜ್ಯ ದಲ್ಲಿ ಗಂಡಾಂತರಕಾರಿಗಳಾಗಿದ್ದಾರೆ. ಹೀಗಾ ದರೆ ನಮಗೆ ಪ್ರಜಾ ರಾಜ್ಯ ಬೇಕೇಕೆ? ಪಾಳೇಗಾರ ರಾಜ್ಯ, ಪರಕೀಯರ ರಾಜ್ಯಭಾರ ಗಳನ್ನೇಕೆ ಕಿತ್ತೊಗೆಯಬೇಕಿತ್ತು? ಗೊಂದಲಗಳ ಗೂಡಾಗಿರುವ ಸಂಸತ್ತು ಶಾಸಕಾಂಗ ಏಕೆ ಬೇಕು? ಇದು ಪ್ರಜಾರಾಜ್ಯದ ದುರ್ದೈವ ಹಾಗೂ ಪ್ರಜಾ ರಾಜ್ಯದ ಸಂಪೂರ್ಣ ಯಶಸ್ಸಿಗೆ ಅಡಚಣೆಯಾಗಿದೆ.ಪ್ರಜಾರಾಜ್ಯದ ಯಶಸ್ವಿಯಾಗಿ ಬಹು ಮಟ್ಟಗೆ ಕಾರಣರಾಗಿರುವ ದಿನ ಪತ್ರಿಕೆ, ವಾರ ಪತ್ರಿಕೆ, ಪಾಕ್ಷಿಕ ಪತ್ರಿಕೆ, ಮಾಸ ಪತ್ರಿಕೆ, ದೂರದರ್ಶನ ಮೊದಲಾದವುಗಳು ಆಡಳಿತ ಅಭಿವೃದ್ಧಿಯಲ್ಲಿ ಕಂಡು ಬರುವ ಲೋಪ ದೋಷ, ಆಕ್ರಮಣ, ಅವ್ಯವಹಾರ, ಭ್ರಷ್ಟಾ ಚಾರ, ಪಕ್ಷಪಾತ, ಸ್ವಜನಪಕ್ಷಪಾತ, ಅಧಿಕಾರ ದುರುಪಯೋಗ, ದುರಾಡಳಿತ, ಡೊನೇಶನ್ ಹಾವಳಿ, ಜಾತೀಯತೆ ಮೊದಲಾದ ನಿಯಮ  ನೀತಿಬಾಹಿರ ಕ್ರಮಗಳನ್ನು ಹಾಗೂ ಹಗರಣಗ ಳನ್ನು ದಿನನಿತ್ಯ ಎತ್ತಿ ತೋರಿಸುತ್ತಿದ್ದರೂ ಅನೇಕ ಸರ್ಕಾರಗಳು, ಪ್ರಜಾ ಪ್ರತಿನಿಧಿಗಳು ಹಾಗೂ ಸರ್ಕಾರಿ ಅಧಿಕಾರಿಗಳು, ಲೋಕಸಭೆ, ವಿಧಾನ ಸಭೆ ಕಂಡೂ ಕಾಣದವರಂತೆ ಉದಾಸೀನರಾಗಿ ಯಾವುದೇ ಕ್ರಮ ತೆಗೆದುಕೊಳ್ಳದೆ ಅಪರಾಧಿ ಗಳನ್ನು ರಕ್ಷಿಸುತ್ತಿರುವುದು ಪ್ರಜಾತಂತ್ರ ವ್ಯವ ಸ್ಥೆಗೆ ಗಂಡಾಂತರಕಾರಿಯಾಗಿದೆ.ಇಲಾಖಾ ವರದಿ, ಲೆಕ್ಕ ಪರಿಶೋಧನಾ ವರದಿ, ವಿಶೇಷ ಲೆಕ್ಕ ಪರಿಶೋಧನಾ ವರದಿ, ಸಿಎಜಿ ವರದಿ ಇವೆಲ್ಲಾ ಅನೇಕ ಅಕ್ರಮ ಅವ್ಯವಹಾರ ಹಣ ದುರುಪಯೋಗ, ಪೇಟೆಯ ಮಾರಾಟ ದರ ಕ್ಕಿಂತ ಹತ್ತು ಪಟ್ಟು ಹೆಚ್ಚಿನ ಬೆಲೆಗೆ ಸಾಮಾನುಗಳು ಅಕ್ರಮವಾಗಿ ಖರೀದಿ ಮಾಡಿದ ಬಗ್ಗೆ ಸುಸ್ಪಷ್ಟ ಉದಾಹರಣೆಗಳಿದ್ದರೂ ಮೇಲಧಿಕಾರಿಗಳು ಯಾವುದೇ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳದೇ ಇರುವ ಪರಿಸ್ಥಿತಿ ದೇಶದಾದ್ಯಂತ ಇದೆ.ಇತ್ತೀಚಿನ ಪತ್ರಿಕೆಯಲ್ಲಿ ಬಂದ ಒಂದು ವರದಿ ಪ್ರಕಾರ ಮಾರುಕಟ್ಟೆ ದರ 20 ರಿಂದ 30 ರೂ. ಇದ್ದರೂ ಕಸದ ಪೊರಕೆಗೆ 250 ರೂ. ಗಳಿಗೆ ಖರೀದಿ ಮಾಡಿರುವುದು, ಮಾರುಕಟ್ಟೆ ದರ 100 ರಿಂದ 120 ರೂಪಾಯಿ ಇದ್ದರೆ ಬಾಂಡ್ಲಿಗಳಿಗೆ 625 ರೂ. ಗಳಿಗೆ ಖರೀದಿ ಮಾಡಿರುವುದು, ಮಾರುಕಟ್ಟೆ ದರ 150 ರಿಂದ 175 ರೂ. ಇದ್ದರೂ ಮೆಟಲ್ ಪ್ಲೇಟ್‌ಗಳನ್ನು 650 ರೂ. ಗಳಿಗೆ ಖರೀದಿ ಮಾಡಿರುವುದು, ಮಾರುಕಟ್ಟೆ ದರ 1500 ರಿಂದ 2000 ರೂಪಾಯಿಗಳಿದ್ದರೂ ಕಸ ಸಾಗಿಸುವ ಗಾಡಿಗಳನ್ನು 15650 ರೂ. ಗಳಿಗೆ ಖರೀದಿ ಮಾಡಿರುವುದು, ಮಾರುಕಟ್ಟೆ ದರ 10 ರಿಂದ 15 ಸಾವಿರ ರೂಪಾಯಿಗಳಿದ್ದರೆ ಸೋಲಾರ್ ಯುಪಿಎಸ್‌ಗಳನ್ನು 56 ಸಾವಿರ ರೂ. ಗಳಿಗೆ ಖರೀದಿ ಮಾಡಿರುವುದು ಬೆಳಕಿಗೆ ಬಂದಿದೆ.ಈ ಬಗ್ಗೆ ಮಂಡ್ಯ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯದರ್ಶಿ (ಸಿಇಒ) ಅವರು ಗ್ರಾಮೀಣಾಭಿ ವೃದ್ಧಿ ಪಂಚಾಯತ್ ರಾಜ್ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ ಅಪರಾಧಿಗಳ ಮೇಲೆ ಸೂಕ್ತ ಕ್ರಮಕ್ಕಾಗಿ ವರದಿ ಕಳುಹಿ ಸಿದ್ದರೂ ಇನ್ನೂ ಯಾವುದೇ ಕ್ರಮ ತೆಗೆದುಕೊ ಳ್ಳದಿರುವುದು ನಾಚಿಕೆಗೇಡಲ್ಲವೆ? ತಾಲೂಕು ಪಂಚಾಯತಿ ಏಳು ಜನ ಕಾರ್ಯನಿರ್ವಾಹಕ ಗೆಜೆಟೆಡ್ ಅಧಿಕಾರಿಗಳನ್ನು ರಕ್ಷಿಸುವ ಉದ್ದೇಶ ಸರ್ಕಾರಕ್ಕೆ ಇದೆಯೇ ಎಂದು ಪ್ರಶ್ನಿಸಬೇಕಾ ಗುತ್ತದೆ. ಇಂತಹ  ಹಗರಣಗಳು ರಾಜ್ಯದಾದ್ಯಂತ ದೇಶದಾದ್ಯಂತ ಸಹಸ್ರಾರು, ಅಲ್ಲ, ಲಕ್ಷಾಂತರ ಇರುವುದನ್ನು ಪತ್ರಿಕೆ ಹಾಗೂ ಇತರ ಮಾಧ್ಯಮಗಳು 1952 ರಿಂದ ಇಲ್ಲಿಯವರೆಗೆ ಬೆಳಕಿಗೆ ತಂದು ಸರ್ಕಾರಗಳ ಗಮನ ಸೆಳೆಯುತ್ತಿದ್ದರೂ ಪರಿಣಾಮ ಶೂನ್ಯವಾಗಿದೆ. ಇದು ಪ್ರಜಾತಂತ್ರ ವ್ಯವಸ್ಥೆಗೆ ಭೂಷಣವೇ?ಅಭಿವೃದ್ಧಿ ಕೆಲಸಗಳಾಗದೆಯೇ ‘ಆಗಿದೆ’ ಎಂದು ಹಣ ಖರ್ಚು ಹಾಕಿ ಎತ್ತಿ ಹೊಡೆದ ಅಧಿಕಾರಿಗಳನ್ನು ರಕ್ಷಣೆ ಮಾಡಲು ಸರ್ಕಾರಕ್ಕೆ ವರದಿ ಮಾಡುವ ಅಸಿಸ್ಟೆಂಟ್ ಕಮೀಷನರ್, ಜಿಲ್ಲಾಧಿಕಾರಿ, ಐ.ಎ.ಎಸ್. ಅಧಿಕಾರಿಗಳು ಹಾಗೂ ಇತರ ಅನೇಕ ಅಧಿಕಾರಿಗಳು ನಮ್ಮ ರಾಜ್ಯದಲ್ಲಿದ್ದಾರೆ. ಈ ಅಧಿಕಾರಿಗಳು ಸುಳ್ಳು ವರದಿ ಕಳುಹಿಸಿದ್ದಾರೆಂದು ತಿಳಿದ ಮೇಲೆ ಮತ್ತೆ ಚೌಕಾಸಿ ಮಾಡಿ ತಪ್ಪಿತಸ್ಥ ತಹಶೀಲ್ದಾರರನ್ನು ವಜಾ ಮಾಡಿದ ರಾಜ್ಯ ಸರ್ಕಾರದ ಸೂಕ್ತ ಕ್ರಮವೂ ಇತಿಹಾಸ ಪುಟಗಳಲ್ಲಿ ಸೇರಿದೆ. ಕಳಪೆ ಕಾಮಗಾರಿ ಮಾಡಿದ ಒಂದೇ ಕೆಲಸಕ್ಕೆ ಎರಡು ಸಾರಿ ಖರ್ಚು ಹಾಕಿದ,ಟೆಂಡರ್ ಕರೆಯದೇ ಬೇಕಾದವರಿಗೆ ಕಾಮಗಾರಿ ಗುತ್ತಿಗೆ ಕೊಟ್ಟಿ ರುವ, ಟೆಂಡರ್ ಕರೆಯದೆ ಬೇಕಾದವರಿಗೆ ವಸ್ತುಗಳನ್ನು ಖರೀದಿ ಮಾಡಿರುವ, ತಮಗೆ ಬೇಕಾದವರಿಗೆ ಕಾಮಗಾರಿ ಗುತ್ತಿಗೆಗೆ ಕೊಟ್ಟ ಉದಾಹರಣೆಗಳು ನಮ್ಮ ರಾಜ್ಯದಲ್ಲಿ ಪತ್ರಿಕೆಗಳ ಹಾಗೂ ಮಾಧ್ಯಮಗಳ ಮುಖಾಂತರ ಬಹಿರಂಗಗೊಂಡಿವೆ. ಅನೇಕ ಪ್ರಜಾಪ್ರತಿನಿಧಿ ಗಳು ತಮ್ಮ ಸಂಬಂಧಿಕರ ಹೆಸರಿಗೆ ಕಾಮಗಾರಿ ಗಳ ಕಾಂಟ್ರ್ಯಾಕ್ಟ್ ಕೊಟ್ಟ ಉದಾಹರಣೆಗಳು ಕೂಡಾ ಸಾಕಷ್ಟು ಇವೆ. ಕೆಲವು ಪ್ರಜಾ ಪ್ರತಿನಿಧಿಗಳು ತಾವು ಮಾಡಿದ ತಪ್ಪಿಗೆ, ತಪ್ಪು ಮಾಡಿದವರನ್ನು ರಕ್ಷಿಸಲು ಮುಂದಾಗಿದ್ದಕ್ಕೆ ದಾಕ್ಷಿಣಪರರಾಗಿದ್ದಕ್ಕೆ, ನ್ಯಾಯನಿಷ್ಠುರರಾಗಿ ದ್ದಕ್ಕೆ, ಉತ್ತಮ ನಾಯಕತ್ವ ಪಡೆಯದೇ ಇರು ವುದಕ್ಕೆ ಪ್ರಾಮಾಣಿಕರಾಗಿರದೇ ಇರುವುದಕ್ಕೆ ಜಾತೀಯವಾದಿಗಳಾಗಿರುವುದರಿಂದ, ಪಕ್ಷಪಾತಿಗಳಾಗಿರುವುದರಿಂದ, ಅಧಿಕಾರ ದುರುಪಯೋಗ ಮಾಡುತ್ತಿರುವುದರಿಂದ, ದುರಾಡಳಿತ ಮಾಡುತ್ತಿರುವುದರಿಂದ ಪ್ರಜಾ ರಾಜ್ಯ ರಾಮರಾಜ್ಯದತ್ತ ಸಾಗದೇ ಕುಂಟುತ್ತಾ ಸಾಗಿದೆ.ಪ್ರಜಾತಂತ್ರ ವ್ಯವಸ್ಥೆ 1952 ರಿಂದ ಪ್ರಾರಂಭವಾಗಿದ್ದರೂ ಅಲ್ಲಿಂದ ಇಲ್ಲಿಯವ ರೆಗೂ ಪ್ರತಿವರ್ಷ ರಾಜ್ಯಗಳಲ್ಲಿ ಸಹಸ್ರಾರು ಕೋಟಿ, ರಾಷ್ಟ್ರದಲ್ಲಿ ಆಡಳಿತ ಅಭಿವೃದ್ಧಿಗಾಗಿ ಲಕ್ಷಾಂತರ ಕೋಟಿ ಹಣ ವೆಚ್ಚ ಮಾಡಿದ್ದರೂ ಆಡಳಿತ ಹಾಗೂ ಅಭಿವೃದ್ಧಿ ಕಳಪೆಯಾಗಿರು ವುದು ಬಜೆಟ್ ಹಣದ ಭಾರಿ ದುರ್ಬಳಕೆ, ನಿರ್ಬಳಕೆಯಾಗು ತ್ತಿರುವುದು ಹಾಗೂ ಪ್ರಜಾ ರಾಜ್ಯ- ರಾಮ ರಾಜ್ಯ-ಸುಖಿರಾಜ್ಯದ ಕನಸು ನನಸಾಗದೆ ಕನಸಾಗಿಯೆ ಸಾಗಿರುವುದು ಪಾಳೇಗಾರಿಕೆ ರಾಜ್ಯ ಹಾಗೂ ಪರಕೀಯ ರಾಜ್ಯಗಳನ್ನು ತೊರೆದು ಪ್ರಜಾರಾಜ್ಯ ಗಣರಾಜ್ಯವಾಗಿ ಸಮರ್ಪಕ ಸಾಧನೆ ಸಾಧಿಸದಿರುವುದು ಇದೊಂದು ದುರಂತ.1952 ರಿಂದ ಪ್ರಜಾರಾಜ್ಯ ಅಸ್ತಿತ್ವಕ್ಕೆ ಬಂದ ಮೇಲೆ ರಾಷ್ಟ್ರ ಹಾಗೂ ರಾಜ್ಯ ಸರ್ಕಾ ರಗಳು ಪ್ರತಿ ವರ್ಷ ವೆಚ್ಚ ಮಾಡಿದ ಹಣವೆಷ್ಟು, ರೂಪಿಸಿದ ಯೋಜನೆಗಳೆಷ್ಟು, ಅದೆಷ್ಟು ಯೋಜನೆಗಳು ಕಾರ್ಯಗತ ವಾಗಿಲ್ಲ, ಎಷ್ಟು ಯೋಜನೆಗಳು ನಿಂತು ಹೋಗಿವೆ, ಎಷ್ಟು ಯೋಜನೆಗಳು ಕುಂಟುತ್ತಾ ನಡೆದಿವೆ ಎಂಬು ದನ್ನು, ಪ್ರಜೆಗಳು ಆಶಿಸಿದ ನಿರೀಕ್ಷಿಸಿದ, ಅಪೇಕ್ಷಿ ಸಿದ ಯೋಜನೆಗಳು 1975ರಲ್ಲಿ ಜಾರಿಗೆ ಬಂದ 20 ಅಂಶಗಳ ಅಭಿ ವೃದ್ಧಿ ಕಾರ್ಯಗಳ ಪರಿಸ್ಥಿತಿ ಏನಾಗಿದೆ ಎಂಬು ದನ್ನು, ಇಷ್ಟೊಂದು ಸುದೀರ್ಘ ಅವಧಿಯಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ‘ಪ್ರಜಾರಾಜ್ಯ ರಾಮರಾಜ್ಯ’ ವಾಗಬೇ ಕೆಂಬುದು ನನಸಾಗಿದೆಯೋ ಎಂಬು ದನ್ನು ಪ್ರಜಾಪ್ರಭುಗಳು ಹಾಗೂ ವಿವಿಧ ಪ್ರಜಾ ಪ್ರತಿನಿಧಿಗಳು ಚಿಂತನ ಮಂಥನ ಮಾಡುವುದು ಒಳ್ಳೆಯದು. ಗಣರಾಜ್ಯ; ಗಣ್ಯರ ರಾಜ್ಯವಾಗುವುದು ಅಗತ್ಯ.

(ಲೇಖಕರು ವಿಧಾನಸಭೆಯ ಮಾಜಿ ಸ್ಪೀಕರ್)

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.