ಕಾಯುವ ಕಷ್ಟವು...

7

ಕಾಯುವ ಕಷ್ಟವು...

Published:
Updated:
ಕಾಯುವ ಕಷ್ಟವು...

ಹುರುಪಿನಿಂದ ಸೈಕಲ್‌ಗಳ ಮೇಲೆ ವಿದ್ಯಾರ್ಥಿಗಳು ಬಂದಾಗ ಸೂರ್ಯನ ಕಾವಿನ್ನೂ ಏರಿರಲಿಲ್ಲ. ಸೋಮವಾರದ ಟ್ರಾಫಿಕ್ ಜಂಜಡವನ್ನೂ ಲೆಕ್ಕಿಸದೆ ಅವರೆಲ್ಲಾ `ಸೈಕಲ್ ಹಾಗೂ ಕಾಲ್ನಡಿಗೆ ಜಾಥಾ~ ಕಾರ್ಯಕ್ರಮದ ಉದ್ಘಾಟನೆಯ ಭಾಗವಾಗಲು ಬಂದಿದ್ದರು.ಮುಖ್ಯಮಂತ್ರಿಯವರ ಗೃಹ ಕಚೇರಿ `ಅನುಗ್ರಹ~ದ ಮುಂದೆ ನೆರೆದ ಅವರೆಲ್ಲರ ಉತ್ಸಾಹ ನಿಧನಿಧಾನವಾಗಿ ಕುಂದತೊಡಗಿತು. ತಾಸು ಒಂದು ದಾಟಿದರೂ ಮುಖ್ಯಮಂತ್ರಿ ಬರಲೇ ಇಲ್ಲ. ಕೈಲಿ ಹೂದಾನಿಗಳನ್ನು ಹಿಡಿದಿದ್ದ ಯುವತಿಯರಿಗೆ ಅವು ಬಾಡಿಹೋಗುತ್ತಿವೆಯಲ್ಲ ಎಂಬ ಆತಂಕ.ಸೈಕಲ್ ಮೇಲೆ ಕೂತ ಕೆಲವರ ಮುಖದ ಮೇಲೆ ಬೆವರಿಳಿಯತೊಡಗಿತು. ತೊಟ್ಟ ಟೋಪಿಗಳು ಕೈಗೆ ಬಂದವು. ಇನ್ನು ಕೆಲವರು ಪಕ್ಕದ ಫುಟ್‌ಪಾತ್ ಮೇಲೆ ಕೂತು ಮಾತಿಗೆ ಶುರುವಿಟ್ಟರು. ಕೊನೆಗೂ ಮುಖ್ಯಮಂತ್ರಿ ಬಂದರು. ತಾಸು ಎರಡಾಗಿತ್ತು. ಗಂಟೆಗಟ್ಟಲೆ ಕಾದು ಬಿಸಿಲಲ್ಲಿ ಹೈರಾಣಾದ ವಿದ್ಯಾರ್ಥಿಗಳ ಚಿತ್ರಗಳಿವು.ಚಿತ್ರಗಳು: ವಿಶ್ವನಾಥ ಸುವರ್ಣ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry