ಕಾಯ್ದಿಟ್ಟ ಕುರ್ಚಿಗಳು...

ಧಾರವಾಡ: ಸಾಹಿತ್ಯ ಸಂಭ್ರಮದ ಎರಡನೆಯ ದಿನವಾದ ಶನಿವಾರ ಗೋಷ್ಠಿ ಆರಂಭಕ್ಕೂ ಒಂದು ಗಂಟೆ ಮೊದಲೇ ಸಭಾಂಗಣದ ಕುರ್ಚಿಗಳು ಪತ್ರಿಕೆಗಳು, ಚೀಲಗಳು, ಶಾಲುಗಳಿಂದ ಭರ್ತಿಯಾಗಿ ದ್ದುದು ಕಂಡುಬಂತು!
ಇದಕ್ಕೆ ಕಾರಣ ಇಷ್ಟೆ. ಹಿಂದಿನ ದಿನ ಕೆಲವರಿಗೆ ಸುಖಾಸೀನ ಕುರ್ಚಿಗಳು ಸಿಕ್ಕಿರಲಿಲ್ಲ. ಕೆಲವರಿಗೆ ಅವರ ಇಷ್ಟದ ಸಾಲಿನಲ್ಲಿ ಇಷ್ಟದ ಸೀಟು ಸಿಕ್ಕಿರಲಿಲ್ಲ. ತಡವಾಗಿ ಬಂದ ಪ್ರತಿನಿಧಿಗಳಿಗೆ ಹಿಂದೆ ಹಾಕಿದ್ದ ಪ್ಲಾಸ್ಟಿಕ್ ಕುರ್ಚಿಗಳೇ ಸಿಕ್ಕಿದ್ದು. ಹಾಗಾಗಿ ಅವರಿಗೆ ಮರುದಿನವಾದರೂ ಸುಖಾಸೀನ ಕುರ್ಚಿ ಬೇಕು ಎಂಬ ಆಸೆ. ಅದಕ್ಕಾಗಿ ಒಂದು ಗಂಟೆ ಮುಂಚೆಯೇ ಬಂದು ಸೀಟು ಕಾಯ್ದಿರಿಸಿ ತಿಂಡಿಗೆ ಹೋಗಿ ಬರುತ್ತಿದ್ದ ದೃಶ್ಯ ಹತ್ತು ಗಂಟೆಯವರೆಗೂ ಕಂಡು ಬಂತು.
ಸ್ನೇಹಿತರೆಲ್ಲ ಸೇರಿ ಒಂದಿಡೀ ಸಾಲನ್ನೇ ಕಾಯ್ದಿಸಿದ್ದರು. ಕೆಲವರು ಪತ್ರಿಕೆಗಳು, ಚೀಲಗಳು ಮುಂತಾದ ವಸ್ತುಗಳನ್ನು ಇಟ್ಟು ಹೋದರೆ, ಇನ್ನು ಕೆಲವರು ಪಕ್ಕದಲ್ಲಿ ಕೂತವರನ್ನು ‘ಇಲ್ಲಿ ಯಾರಿಗೂ ಬಿಡಬೇಡಿ’ ಎಂದು ಕಾವಲಿ ರಿಸಿ ಹೋಗುತ್ತಿದ್ದರು. ಕೆಲ ಸ್ನೇಹಿತರು ಒಬ್ಬೊಬ್ಬರಾಗಿ ಸರತಿಯಲ್ಲಿ ಕಾವಲು ನಿಲ್ಲುತ್ತಾ, ಒಬ್ಬೊಬ್ಬರೇ ತಿಂಡಿಗೆ ಹೋಗಿ ಬರುತ್ತಿದ್ದರು.
ಕೆಲವರಿಗೆ ನಿನ್ನೆ ಕುಳಿತಿದ್ದ ಕುರ್ಚಿಯಲ್ಲಿಯೇ ಇಂದೂ, ನಾಳೆಯೂ ಆಸೀನರಾಗಬೇಕು ಎಂಬ ತುಡಿತ. ಇನ್ನು ಕೆಲವರಿಗೆ ಹಿರಿಯ ಸಾಹಿತಿಗಳ ಪಕ್ಕದಲ್ಲಿ ಅಥವಾ ಎರಡು ಸಾಲು ಹಿಂದೆಯಾ ದರೂ ಕುಳಿತುಕೊಳ್ಳುವ ಆಸೆ. ಕೆಲ ಸಾಹಿ ತಿಗಳ ಅಭಿಮಾನಿಗಳು ಪಕ್ಕದ ಕುರ್ಚಿ ಯನ್ನು ಕಾಯ್ದಿರಿಸಿ ತಮ್ಮಿಷ್ಟದ ಸಾಹಿತಿ ಗಳನ್ನು ಕರೆದು ಕೂರಿಸಿಕೊಳ್ಳುತ್ತಿದ್ದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.