ಕಾರಂಜಿಯಂತೆ ಚಿಮ್ಮಿದ ಮಕ್ಕಳ ಪ್ರತಿಭೆ

7

ಕಾರಂಜಿಯಂತೆ ಚಿಮ್ಮಿದ ಮಕ್ಕಳ ಪ್ರತಿಭೆ

Published:
Updated:

ಬಸವಕಲ್ಯಾಣ: ಶಿಕ್ಷಣ ಇಲಾಖೆಯಿಂದ ಡಿ. 27 ಮತ್ತು 28 ರಂದು ಇಲ್ಲಿ ಹಮ್ಮಿಕೊಂಡ ತಾಲ್ಲೂಕು ಮಟ್ಟದ ‘ಪ್ರತಿಭಾ ಕಾರಂಜಿ’ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳು ತಮ್ಮ ಪ್ರತಿಭೆ ಪ್ರದರ್ಶಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆಗೊಂಡರು.ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಮಕ್ಕಳು  ತಮ್ಮಲ್ಲಿನ ಪ್ರತಿಭೆ ಪ್ರದರ್ಶಿಸಿದರು. ನೃತ್ಯ, ನಾಟಕ, ಚಿತ್ರಕಲೆ, ಸಂಗೀತವನ್ನು ಉತ್ತಮವಾಗಿ ಸಾದರಪಡಿಸಿದರು. ಆಟ ಪಾಠದ ಜತೆಗೆ ಸಾಂಸ್ಕೃತಿಕ ಕ್ಷೇತ್ರದಲ್ಲಿಯೂ ತಾವು ಮಹತ್ವದನ್ನು ಸಾಧಿಸಬಲ್ಲೆವು ಎಂಬುದನ್ನು ತೋರಿಸಿದಂತಿತ್ತು ಈ ಸ್ಪರ್ಧೆ.ಗ್ರಾಮೀಣ ಭಾಗದ ವಿದ್ಯಾರ್ಥಿಗಳೇ ಅಧಿಕ ಸಂಖ್ಯೆಯಲ್ಲಿ ಅಂತಿಮ ಹಂತಕ್ಕೆ ತಲುಪಿದರು. ಸಾಧನ ಸೌಕರ್ಯಗಳ ಕೊರತೆಯ ಮಧ್ಯೆ ತಾವೇನು ಕಮ್ಮಿಯಿಲ್ಲ ಎಂಬುದನ್ನು ತೋರಿಸಿದರು.ಮಕ್ಕಳಲ್ಲಿನ ಪ್ರತಿಭೆ  ದೈಹಿಕ ಮತ್ತು ಮಾನಸಿಕ ಬಲವನ್ನು ಹೆಚ್ಚಿಸಿದ್ದರ ಹಿಂದೆ ಆಯಾ ಶಾಲೆಯ ಶಿಕ್ಷಕರ ಮತ್ತು ಪಾಲಕರ ಶ್ರಮ ಅಡಗಿರುವುದನ್ನು ಕಾರ್ಯಕ್ರಮ ಬಿಂಬಿಸಿತು.ಮೊದಲು ಕ್ಲಸ್ಟರ್ ಮಟ್ಟದಲ್ಲಿ ನಡೆದ ಸ್ಪರ್ಧೆಯಲ್ಲಿ ಆಯ್ಕೆಗೊಂಡ ಮಕ್ಕಳು ತಾಲ್ಲೂಕು ಮಟ್ಟದಲ್ಲಿ ಪಾಲ್ಗೊಂಡಿದ್ದರು. ಒಂದರಿಂದ 4 ನೇ ತರಗತಿ ವರೆಗಿನ ಮಕ್ಕಳಿಗಾಗಿ 17 ಪ್ರಕಾರದ ಸ್ಪರ್ಧೆ ನಡೆದರೆ, 5 ರಿಂದ 7 ನೇ ತರಗತಿಯ ವಿದ್ಯಾರ್ಥಿಗಳಿಗೆ 18, ಮತ್ತು 8 ರಿಂದ 10 ನೇ ವರೆಗಿನವರಿಗಾಗಿ 28 ಪ್ರಕಾರದ ಸ್ಪರ್ಧೆ ಏರ್ಪಡಿಸಿ ಪ್ರಥಮ ಸ್ಥಾನ ಪಡೆದವರನ್ನು ಜಿಲ್ಲಾಮಟ್ಟಕ್ಕೆ ಆಯ್ಕೆ ಮಾಡಲಾಯಿತು ಎಂದು ಬಿ.ಆರ್.ಸಿ ಸಮನ್ವಯಾಧಿಕಾರಿ ಸಂಜೀವ ಕಾಂಗೆ ಹೇಳಿದರು.ಜಿಲ್ಲಾ ಮಟ್ಟಕ್ಕೆ ಹಲವು ಶಾಲೆಗಳ ಪ್ರೌಢಶಾಲಾ ಮಟ್ಟದ ವಿದ್ಯಾರ್ಥಿಗಳು ಆಯ್ಕೆಗೊಂಡರು. ವಾಣಿ ದಾಸಿಮಯ್ಯ, ಕಿತ್ತೂರ ರಾಣಿ ಚೆನ್ನಮ್ಮ ಪ್ರೌಢಶಾಲೆ ಬಸವಕಲ್ಯಾಣ (ಕನ್ನಡ ಭಾಷಣ), ಪರಮೇಶ್ವರಿ ಧನರಾಜ, ಕಿತ್ತೂರರಾಣಿ ಚೆನ್ನಮ್ಮ ಪ್ರೌಢಶಾಲೆ ಬಸವಕಲ್ಯಾಣ (ಇಂಗ್ಲಿಷ್‌ ಭಾಷಣ), ಸನಾ ಫಾತಿಮಾ, ಸರ್ಕಾರಿ ಕನ್ಯಾ ಪ್ರೌಢಶಾಲೆ ರಾಜೇಶ್ವರ (ಉರ್ದು ಭಾಷಣ), ಆರ್.ಅಶ್ವಿನಿ, ಸರ್ಕಾರಿ ಪ್ರೌಢಶಾಲೆ ಚಿಕ್ಕನಾಗಾಂವ (ಹಿಂದಿ ಭಾಷಣ), ಹರ್ಷಲ ಪ್ರಶಾಂತ, ಸರ್ಕಾರಿ ಪ್ರೌಢಶಾಲೆ ಚಂಡಿಕಾಪುರ (ಮರಾಠಿ ಭಾಷಣ), ಮನೋಜ ಸುದರ್ಶನ, ಸತ್ಯಾಶ್ರಯ ಪ್ರೌಢಶಾಲೆ ರಾಜೇಶ್ವರ (ಸಂಸ್ಕೃತ ಪಠಣ), ಸನಾ ತಹಸೀನಅಲಿ, ಜಿಕ್ರಾ ಪ್ರೌಢಶಾಲೆ ಬಸವಕಲ್ಯಾಣ (ಅರೇಬಿಕ್‌ ಧಾರ್ಮಿಕ ಪಠಣ),ಅನಸೂಯಾ ದಿಲೀಪಕುಮಾರ, ಕೆ.ಜಿ.ಬಿ.ವಿ. ಪ್ರೌಢಶಾಲೆ ಕಿಟ್ಟಾ (ಯೋಗಾಸನ), ವಿಶಾಖಾ ದೇವೇಂದ್ರ, ಜೀಜಾಮಾತಾ ಪ್ರೌಢಶಾಲೆ ಬಸವಕಲ್ಯಾಣ (ಸಂಗೀತ), ಸಂದೀಪ, ಮೊರಾರ್ಜಿ ದೇಸಾಯಿ ವಸತಿ ಶಾಲೆ ಬೆಟಬಾಲ್ಕುಂದಾ (ಹಿಂದೂಸ್ತಾನಿ ಸಂಗೀತ), ಸುಧಾರಾಣಿ, ಸರ್ಕಾರಿ ಪ್ರೌಢಶಾಲೆ ಏಕಲೂರ (ಜಾನ­ಪದಗೀತೆ), ಗುರುಶಾಂತ ರಾಮ­ಲಿಂಗಯ್ಯ, ಕಿತ್ತೂರರಾಣಿ ಚೆನ್ನಮ್ಮ ಪ್ರೌಢಶಾಲೆ ರಾಜೇಶ್ವರ (ಭಾವಗೀತೆ), ಶ್ವೇತಾ, ಮೊರಾರ್ಜಿ ದೇಸಾಯಿ ವಸತಿ ಶಾಲೆ ಬೆಟಬಾಲ್ಕುಂದಾ  (ಭರತ­ನಾಟ್ಯ), ಜಯಶ್ರೀ ಮಹಾದೇವ, ಸರ್ಕಾರಿ ಪ್ರೌಢಶಾಲೆ ಚಿಟ್ಟಾ (ಛದ್ಮವೇಷ), ನಾಗರಾಜ, ಆದರ್ಶ ವಿದ್ಯಾಲಯ ರಾಜೋಳಾ (ಕ್ಲೇ ಮಾಡಲಿಂಗ್), ಪ್ರೀತಿ ಚಂದ್ರಕಾಂತ, ಮೊರಾರ್ಜಿ ದೇಸಾಯಿ ವಸತಿ ಶಾಲೆ ಬೆಟಬಾಲ್ಕುಂದಾ  (ಆಶುಭಾಷಣ), ಹರೀಶರೆಡ್ಡಿ ವಿಠ್ಠಲರೆಡ್ಡಿ, ಆದರ್ಶ ವಿದ್ಯಾಲಯ ರಾಜೋಳಾ (ಮಿಮಿಕ್ರಿ), ದೀಪಕ ಶಿವರಾಜ, ಸರ್ಕಾರಿ ಪ್ರೌಢಶಾಲೆ ಯರಂಡಗಿ (ಪ್ರಬಂಧ), ಕನ್ಯಾಕುಮಾರಿ, ಕಿತ್ತೂರಚೆನ್ನಮ್ಮ ಶಾಲೆ ರಾಜೇಶ್ವರ (ಚರ್ಚಾಸ್ಪರ್ಧೆ),ಶಾಂತೇಶ್ವರಿ ರಾಜಶೇಖರ, ಸರ್ಕಾರಿ ಪ್ರೌಢಶಾಲೆ ಧನ್ನೂರ (ಚಿತ್ರಕಲೆ), ಶಿಲ್ಪಾ ಶಿವರಾಜ, ರಾಮಲಿಂಗಯ್ಯ ಪ್ರೌಢಶಾಲೆ ಸಸ್ತಾಪುರ (ರಂಗೋಲಿ), ಕಾಶಿಬಾಯಿ ಮಾಣಿಕ, ಕೆ.ಜಿ.ಬಿ.ವಿ.ಕಿಟ್ಟಾ (ಗಝಲ್), ಕಾವೇರಿ ಮತ್ತು ಸಂಗಡಿಗರು, ಕಿತ್ತೂರ ರಾಣಿ ಚೆನ್ನಮ್ಮ ಶಾಲೆ ಬಸವಕಲ್ಯಾಣ (ನಾಟಕ), ಸೋಹೆಲ್, ಲಿಟ್ಲಫ್ಲಾವರ್ ಪ್ರೌಢಶಾಲೆ ಬಸವಕಲ್ಯಾಣ (ರಸಪ್ರಶ್ನೆ), ಶ್ರೀನಾಥ, ಸರ್ಕಾರಿ ಪ್ರೌಢಶಾಲೆ ಆಲಗೂಡ (ಕವ್ವಾಲಿ), ರಾಧಿಕಾ, ಸರ್ಕಾರಿ ಕನ್ಯಾ ಪ್ರೌಢಶಾಲೆ ರಾಜೇಶ್ವರ (ಜಾನಪದ ನೃತ್ಯ), ಶ್ರುತಿ, ಮೊರಾರ್ಜಿ ಪ್ರೌಢಶಾಲೆ ಬೆಟಬಾಲ್ಕುಂದಾ (ಕೋಲಾಟ), ಭಾಗ್ಯಶ್ರೀ, ಆದರ್ಶ ಪ್ರೌಢಶಾಲೆ ರಾಜೋಳಾ (ವಿಜ್ಞಾನ ಮಾದರಿ ತಯಾರಿಕೆ)ಯಲ್ಲಿ ಸಾಧನೆಗೈದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry