ಕಾರಂತರ ನೆನಪಿನ ನಾಟಕೋತ್ಸವ

7

ಕಾರಂತರ ನೆನಪಿನ ನಾಟಕೋತ್ಸವ

Published:
Updated:
ಕಾರಂತರ ನೆನಪಿನ ನಾಟಕೋತ್ಸವ

ಬೆಂಗಳೂರು: `ಮುಗ್ಧ ಮನಸ್ಸಿನ ಕಾರಂತರು ನೀಡಿದ ಪ್ರೋತ್ಸಾಹದಿಂದಲೇ ರಂಗಭೂಮಿಯಲ್ಲಿ ಹಲವು ಪ್ರತಿಭೆಗಳು ಸೃಷ್ಟಿಯಾಗಿವೆ~ ಎಂದು ಸಂಸದೆ ಬಿ. ಜಯಶ್ರೀ ತಿಳಿಸಿದರು.  ಪ್ರತಿಮಾ ರಂಗಸಂಶೋಧನಾ ಪ್ರತಿಷ್ಠಾನವು ನಗರದ ಸಂಸ ಬಯಲು ರಂಗ ಮಂದಿರದಲ್ಲಿ ಮಂಗಳವಾರ ಆಯೋಜಿಸಿದ್ದ ಬಿ.ವಿ.ಕಾರಂತರ ನೆನಪಿನ ನಾಟಕೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.`ಸಹಜ ಅಭಿನಯ ಮತ್ತು ನಡವಳಿಕೆಯಿಂದಲೇ ಕಾರಂತರು ಕಲಾವಿದರನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿದ್ದರು. ಮಾತು ಸಹಜವಾಗಿದ್ದರೂ ಅರ್ಥಗರ್ಭಿತವಾಗಿರುತ್ತಿತ್ತು. ಹೊಸ ಪ್ರಯೋಗಗಳ ಮೂಲಕ ರಂಗಭೂಮಿಯನ್ನು ಜೀವಂತವಾಗಿರಿಸಿದ ಅದಮ್ಯ ಚೇತನ ಕಾರಂತ~ ಎಂದು ಶ್ಲಾಘಿಸಿದರು.`ವಿಭಿನ್ನ ಪ್ರಯೋಗಗಳ ಮೂಲಕ ಕಾರಂತರ ನಾಟಕಗಳಿಗಿರುವ ವಿಶೇಷತೆಯನ್ನು ಸಾದರಪಡಿಸಬೇಕಿದ್ದು, ಈ ನಿಟ್ಟಿನಲ್ಲಿ ರಂಗಭೂಮಿ ಕಲಾವಿದರು  ಪ್ರಯತ್ನಿಸೋಣ~ ಎಂದು ಕರೆ ನೀಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಯುಕ್ತ ಕೆ.ಆರ್. ರಾಮಕೃಷ್ಣ, `ಕಾರಂತರು ಬಳಸುತ್ತಿದ್ದ ರಂಗಪರಿಕರಗಳನ್ನು ಸಂರಕ್ಷಿಸುವ ಅಗತ್ಯವಿದ್ದು, ಈ ದಿಸೆಯಲ್ಲಿ ಕಾರಂತರ ಶಿಷ್ಯವೃಂದ ಮತ್ತು ರಂಗಭೂಮಿ ಕಲಾವಿದರೂ ಯೋಜನೆಯೊಂದನ್ನು ರೂಪಿಸಬೇಕು~ ಎಂದು ಸಲಹೆ ನೀಡಿದರು. ವಿಮರ್ಶಕ ಡಾ. ಕೆ. ಮರುಳಸಿದ್ಧಪ್ಪ, ಲೇಖಕ ಡಾ. ಡಿ.ಕೆ. ಚೌಟ, ಕಿರುತೆರೆ ನಿರ್ದೇಶಕ ಟಿ.ಎನ್. ಸೀತಾರಾಂ, ರಂಗನಿರ್ದೇಶಕ ಪ್ರಕಾಶ್ ಬೆಳವಾಡಿ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry