ಕಾರಟಗಿ:ಅಕ್ರಮ ಸಂಪರ್ಕ- ಕಣ್ಮುಚ್ಚಿದ ಇಲಾಖೆ

ಬುಧವಾರ, ಜೂಲೈ 17, 2019
28 °C

ಕಾರಟಗಿ:ಅಕ್ರಮ ಸಂಪರ್ಕ- ಕಣ್ಮುಚ್ಚಿದ ಇಲಾಖೆ

Published:
Updated:

ಕಾರಟಗಿ: ವಿದ್ಯುತ್ ದರ ಏರಿಸುವುದಕ್ಕೆ ಮೀನಮೇಷ ಮಾಡದ ವಿದ್ಯುತ್ ಪ್ರಸರಣಾ ಇಲಾಖೆಯು ಇನ್ನೊಂದೆಡೆ ವಿದ್ಯುತ್ ಸೋರಿಕೆ ತಡೆಯಲು ವಿಫಲವಾಗಿರುವ ಉದಾಹರಣೆಯೊಂದು ಸಮೀಪದ ತೊಂಡಿಹಾಳ ಗ್ರಾಮದಲ್ಲಿ ಭಾನುವಾರ ಕಂಡುಬಂತು.ಸುಮಾರು ಅರ್ಧ ಕಿಮೀವರೆಗೆ ಕಂಬ, ಮರಗಳಿಗೆ ಮೇನ್ ವಾಯರ್ ಹಾಕಿ ನಾಲೆಯೊಂದರ ನೀರು ಪಡೆಯಲು ಸಂಪರ್ಕ ಪಡೆದಿರುವುದು ಕಂಡುಬಂತು.ಇಂಥಹ ವಿದ್ಯುತ್ ಸೋರಿಕೆ ಸಾಮಾನ್ಯ. ಅನೇಕ ಗ್ರಾಮಗಳಲ್ಲಿ ಇಂಥಹ ಪರಿಸ್ಥಿತಿ ಇದೆ. ಪವರ್ ಇರುವುದಕ್ಕಿಂತ ಅಧಿಕ ವಿದ್ಯುತ್ ಬಳಸಿದರೂ ಅಪರಾಧ ಎಂಬಂತೆ ದಂಡ ವಿಧಿಸುವ ಇಲಾಖೆಯು ಸಾಕಷ್ಟು ಪ್ರಕಾಣದಲ್ಲಿ ವಿದ್ಯುತ್ ಸೋರಿಕೆಯಾಗುವುದನ್ನು ತಡೆಯಲು ವಿಫಲವಾಗಿದೆ. ಇಲಾಖೆ ತನ್ನ ವೈಫಲ್ಯ ಮರೆಮಾಚಲು ನಷ್ಟದ ನೆಪದಲ್ಲಿ ಮೇಲಿಂದ ಮೇಲೆ ದರ ಏರಿಸುವುದರಲ್ಲೆ ನಿರತವಾಗಿದೆ ಎಂದು ಗ್ರಾಮದ ಯುವಕರು ಪ್ರತಿಕ್ರಿಯಿಸಿದರು.ಮುಂಗಾರು ಸಮಯದಲ್ಲೂ ವಿದ್ಯುತ್ ಕಡಿತ ಮಾಡುವ ಇಲಾಖೆ, ಇಲಾಖೆಯ ಆದಾಯ ಹೆಚ್ಚಿಸಿಕೊಳ್ಳುವಲ್ಲಿ ವಿಫಲವಾಗಿದೆ ಎಂದು ರೈತರೊಬ್ಬರು ದೂರಿದರು.ಅನೇಕ ಕಡೆ ಇಂಥಹ ಅಕ್ರಮ ಸಂಪರ್ಕಗಳಿರುವುದನ್ನು ತಡೆಯಲು ಇಲಾಖೆ ಇನ್ನಾದರೂ ಮುಂದಾಗುವುದೇ? ಎಂಬುದು ಜನರ ಪ್ರಶ್ನೆಯಾಗಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry