ಕಾರಟಗಿ: ಬತ್ತ ಬೆಳೆ ಕ್ಷೇತ್ರೋತ್ಸವ

7

ಕಾರಟಗಿ: ಬತ್ತ ಬೆಳೆ ಕ್ಷೇತ್ರೋತ್ಸವ

Published:
Updated:

ಕಾರಟಗಿ: ಸಮೀಪದ ಸೋಮನಾಳ ಗ್ರಾಮದಲ್ಲಿ ಗಂಗಾವತಿಯ ಕೃಷಿ ಸಂಶೋಧನಾ ಕೇಂದ್ರ ಹಾಗೂ ಅಖಿಲ ಭಾರತ ಸಂಯೋಜಿತ ಬತ್ತ ಅಭಿವೃದ್ಧಿ ಯೋಜನೆಯ ವಿಜ್ಞಾನಿಗಳ ಸಹಕಾರದೊಂದಿಗೆ ಡಿ. ಆರ್. ಆರ್. ಎಚ್- 3 ಹೈಬ್ರಿಡ್ ತಳಿಯ ಬತ್ತದ ಬೆಳೆಯ ಕ್ಷೇತ್ರೋತ್ಸವ ಸೋಮವಾರ ನಡೆಯಿತು.ಪ್ರಗತಿಪರ ರೈತ ಬಸವರಾಜ್ ಪೊಲೀಸ್ ಪಾಟೀಲ್ ಅವರ 10 ಎಕರೆ ಭೂಮಿಯಲ್ಲಿ ಪ್ರಾತ್ಯಕ್ಷಿಕೆಯಾಗಿ ಡಿ. ಆರ್. ಆರ್. ಎಚ್- 3 ತಳಿಯ ಬೆಳೆಯನ್ನು ಬೆಳೆಸಲಾಗಿತ್ತು.ನೂತನ ತಳಿಯ ಕುರಿತು ಪ್ರಗತಿಪರ ರೈತ ಬಸವರಾಜ್ ಪೊಲೀಸ್ ಪಾಟೀಲ್ ಬೆಳೆಯ ಬಗೆಗೆ ತೃಪ್ತಿ ವ್ಯಕ್ತಪಡಿಸಿದರು. ಬೆಂಕಿರೋಗ, ಕೀಟ ಹಾವಳಿ ಈ ಬೆಳೆಗೆ ಕಡಿಮೆ. ಒಂದು ಕ್ವಿಂಟಲ್ ಗೊಬ್ಬರ, 2 ಸಾರಿ ಕೀಟ ನಾಶಕ ಸಿಂಪಡಿಸುವುದರಿಂದ ಹಣ ಉಳಿದಿದೆ. ಸೋನಾಮಸೂರಿ ಬೆಳೆಗಿಂತ ಮೂರ‌್ನಾಲ್ಕು ಕ್ವಿಂಟಲ್ ಅಧಿಕ ಇಳುವರಿ ಬಂದಿದೆ ಎಂದರು.ಹಿರಿಯ ತಳಿ ವಿಜ್ಞಾನಿ ಪ್ರೊ. ಮೊಹಮ್ಮದ್ ಇಬ್ರಾಹಿಂ ಸವಳು ಮಣ್ಣಿನ ಸುಧಾರಣೆ, ಬತ್ತದ ಹುಲ್ಲನ್ನು ಸುಡುವುದರಿಂದ ಪರಿಸರದ ಮೇಲೆ ಹಾಗೂ ಭೂಮಿಯ ಫಲವತ್ತತೆಯ ಮೇಲಾಗುವ ದುಷ್ಪರಿಣಾಮಗಳ ಬಗೆಗೆ ವಿವರಿಸಿದರು.ತಳಿ ವಿಜ್ಞಾನಿ ಡಾ. ಮಹಾಂತ ಶಿವಯೋಗಯ್ಯ ಹೈಬ್ರಿಡ್ ತಳಿಯ ವಿಶೇಷತೆಯ ಬಗ್ಗೆ ವಿವರಿಸಿದರು.

ರೋಗ ಶಾಸ್ತ್ರಜ್ಞ ಡಾ. ಪ್ರಮೇಶ್ ಭತ್ತದ ಬೆಳೆಗೆ ತಲುವ ರೋಗಗಳು, ಅದರ ನಿಯಂತ್ರಣ ಕುರಿತು ವಿವರಿಸಿದರು.ಇನ್ನೂ ಹೆಚ್ಚಿನ ಪ್ರಾತ್ಯಕ್ಷಿಕೆಗಳನ್ನು ಮುಂದಿನ ಹಂಗಾಮಿನಲ್ಲಿ ಮಾಡಲಾಗುವುದು ಎಂದು ಭಾಗವಹಿಸಿದ್ದ ವಿಜ್ಞಾನಿಗಳು ರೈತರಿಗೆ ತಿಳಿಸಿದರು. ಬೆಳೆಯ ಬಗೆಗೆ ರೈತರೊಂದಿಗೆ ಸಂವಾದ ನಡೆಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry