ಭಾನುವಾರ, ಮೇ 9, 2021
26 °C

ಕಾರಹುಣ್ಣಿಮೆ ಸಂಭ್ರಮ ಇಂದು

ಪ್ರಜಾವಾಣಿ ವಾರ್ತೆ/ಜಗದೀಶ ಗಾಣಿಗೇರ Updated:

ಅಕ್ಷರ ಗಾತ್ರ : | |

ಬಾಗಲಕೋಟೆ: ರೈತರ ಹಬ್ಬವೆಂದೇ ಕರೆಯಲ್ಪಡುವ `ಕಾರಹುಣ್ಣಿಮೆ'ಯನ್ನು ಇದೇ 23ರಂದು ಜಿಲ್ಲೆಯಾದ್ಯಂತ ಸಂಭ್ರಮದಿಂದ ಆಚರಿಸಲು ರೈತ ಸಮುದಾಯ ಅಣಿಯಾಗಿದೆ. ಕಾರಹುಣ್ಣಿಮೆ ಅಂಗವಾಗಿ ರೈತರು ತಮ್ಮ ಜಾನುವಾರುಗಳ ಶೃಂಗಾರದಲ್ಲಿ ತಡೊಗಿದ್ದ ದೃಶ್ಯ ಶನಿವಾರ ಕಂಡುಬಂದಿತು.ಗ್ರಾಮೀಣ ಪ್ರದೇಶದಲ್ಲಿ ಕಾರಹುಣ್ಣಿಮೆಯನ್ನು ವೈಶಿಷ್ಟ್ಯಪೂರ್ಣವಾಗಿ ಆಚರಿಸಿಕೊಂಡು ಬರಲಾಗುತ್ತಿದೆ. ಎತ್ತುಗಳನ್ನು ಶೃಂಗಾರ ಮಾಡಲು ಹಗ್ಗ, ಹನಿಕಟ್ಟು, ಗೊಂಡೆ, ಕೊಳಕಣ್ಣಿ, ಮೂಗುದಾರ, ಮಗಡಾ, ಗೆಜ್ಜೆ ಸರ ಸೇರಿದಂತೆ ಮತ್ತಿತರ ಸಾಮಾಗ್ರಿಗಳನ್ನು ಮಾರುಕಟ್ಟೆಯಲ್ಲಿ ಶನಿವಾರ ರೈತರು ಖರೀದಿಸುತ್ತಿರುವುದು ಸಾಮಾನ್ಯವಾಗಿತ್ತು.ನಗರದ ವಲ್ಲಭಭಾಯಿ ವೃತ್ತ ಹಾಗೂ ಹಳೆ ಅಂಚೆ ಕಚೇರಿಯ ಆವರಣದಲ್ಲಿ ಎತ್ತುಗಳ ಕೊಂಬಿಗೆ ವಿವಿಧ ನಮೂನೆಯ ಬಣ್ಣಗಳಿಂದ ಶೃಂಗಾರ ಮಾಡುತ್ತಿದ್ದರು. `ಒಂದು ಜೋಡಿ ಕೊಂಬಿಗೆ ಬಣ್ಣ ಹಚ್ಚಲು ್ಙ300 ರಿಂದ ್ಙ400 ವರೆಗೆ  ಖರ್ಚಾಗಲಿದೆ' ಎಂದು ಪೇಂಟರ್ ಸಂಜು ಪೇಟಕರ್ ತಿಳಿಸಿದರು.ಗ್ರಾಮದ ಅಗಸಿ ಮುಂಭಾಗದಿಂದ ಓಡಿಸುವ ಸ್ಪರ್ಧೆಯಲ್ಲಿ ಮೊದಲು ಬರುವ ಎತ್ತುಗಳಿಗೆ ಬಹುಮಾನ ನೀಡಲಾಗುತ್ತದೆ. ಇದೇ ಸಂದರ್ಭದಲ್ಲಿ ಮಳೆ ಬೆಳೆ ಬಗ್ಗೆ ರೈತರು ಲೆಕ್ಕಹಾಕುವುದು ರೂಢಿಯಲ್ಲಿದೆ. ಕಾರಹುಣ್ಣಿಮೆ ಕರಿ ಹರಿಯುವ ದೃಶ್ಯವನ್ನು ಜನರು ರಸ್ತೆಯ ಇಕ್ಕೆಲಗಳಲ್ಲಿ ನಿಂತು ಕಣ್ತುಂಬಿಕೊಳ್ಳುತ್ತಾರೆ. ಪ್ರತಿ ವರ್ಷವೂ ಮಕ್ಕಳೊಂದಿಗೆ ನೋಡಿ ಖುಷಿಪಡುತ್ತಾರೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.