`ಕಾರಾಗೃಹಗಳ ಸರ್ವತೋಮುಖ ಅಭಿವೃದ್ಧಿಗೆ ಒತ್ತು'

7

`ಕಾರಾಗೃಹಗಳ ಸರ್ವತೋಮುಖ ಅಭಿವೃದ್ಧಿಗೆ ಒತ್ತು'

Published:
Updated:

ಮೈಸೂರು: `ರಾಜ್ಯದ ಕಾರಾಗೃಹಗಳ ಅಭಿವೃ ದ್ಧಿಗೆ ಪ್ರಸಕ್ತ ಬಜೆಟ್‌ನಲ್ಲಿ ಬಿಡುಗಡೆಯಾದ ರೂ.88 ಕೋಟಿ ಸದ್ಬಳಕೆ ಮಾಡಿಕೊಳ್ಳಲಾ ಗುತ್ತಿದೆ' ಎಂದು ರಾಜ್ಯ ಕಾರಾಗೃಹಗಳ ಮಹಾನಿರೀಕ್ಷಕ ಕೆ.ವಿ.ಗಗನ್‌ದೀಪ್ ತಿಳಿಸಿದರು.ನಗರದ ಕೇಂದ್ರ ಕಾರಾಗೃಹ ಕವಾಯತು ಮೈದಾನದಲ್ಲಿ ಬುಧವಾರ ನಡೆದ 40 ನೇ ತಂಡದ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥ ಸಂಚಲನದಲ್ಲಿ ಭಾಗವಹಿಸಿ ಮಾತನಾಡಿದರು.`ಈ ವರ್ಷದಲ್ಲಿ 417 ಮಂದಿ ವಾರ್ಡರ್ಸ್‌, 27 ಮಂದಿ ಜೈಲರ್‌ಗಳು, 14 ಮಂದಿ ಇನ್ಸ್‌ಸ್ಟ್ರಕ್ಟರ್‌ಗಳನ್ನು ನೇಮಕಾತಿ ಮಾಡಲಾ ಗಿದೆ. ಇಲಾಖೆಗೆ ಅತಿ ಹೆಚ್ಚು ಹುದ್ದೆಗಳನ್ನು ಭರ್ತಿ ಮಾಡಿರುವುದು ಇತಿಹಾಸ. ಇಲಾಖೆಯಲ್ಲಿ ವಿವಿಧ ವಿಭಾಗಗಳಲ್ಲಿ ಸೇವೆ ಸಲ್ಲಿಸುತ್ತಿರುವ 212 ಮಂದಿಗೆ ಬಡ್ತಿ ನೀಡಲಾಗಿದೆ' ಎಂದರು.500 ಸಿಬ್ಬಂದಿ ಕೊರತೆ: `ಇಲಾಖೆಗೆ ಈ ವರ್ಷ ಹೆಚ್ಚು ಸಿಬ್ಬಂದಿ ನೇಮಕಾತಿ ಮಾಡಿದ್ದರೂ ಸಿಬ್ಬಂದಿ ಕೊರತೆ ನೀಗಿಲ್ಲ. ರಾಜ್ಯದಲ್ಲಿ ಒಟ್ಟು 515 ಸಿಬ್ಬಂದಿ ಕೊರತೆ ಇದೆ. ಹಂತ ಹಂತವಾಗಿ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲಾಗುವುದು' ಎಂದು ತಿಳಿಸಿದರು.`ಮೈಸೂರು ಬೆಳಗಾವಿಯ ಕಾರಾಗೃಹಗಳಲ್ಲಿ ಬೇಕರಿ ಉತ್ಪನ್ನಗಳಿಂದ ಈ ವರ್ಷ ರೂ.20 ಲಕ್ಷ ಆದಾಯ ಬಂದಿದೆ. ಬೆಂಗಳೂರು ಕೇಂದ್ರ ಕಾರಾಗೃಹದಲ್ಲಿ ಸಿಹಿ ತಿನಿಸುಗಳು ಹಾಗೂ ಸಿದ್ಧ ಉಡುಪು ತಯಾರಿಸಲಾಗುತ್ತಿದೆ. ವಿಧಾನಸೌಧ ಮತ್ತು ರಾಜಭವನದಲ್ಲಿ ಮಳಿಗೆ ತೆರೆಯಲಾ ಗಿದ್ದು, ಅಲ್ಲಿ ಕೈದಿಗಳು ತಯಾರಿಸಿದ ವಸ್ತುಗಳನ್ನು ಮಾರಲಾಗುತ್ತಿದೆ' ಎಂದು ಹೇಳಿದರು.`ರೂ.4 ಕೋಟಿ ವೆಚ್ಚದಲ್ಲಿ ಬೆಂಗಳೂರಿನಲ್ಲಿ ಕರ್ನಾಟಕ ಕಾರಾಗೃಹ ಅಕಾಡೆಮಿ ಸ್ಥಾಪಿಸಲಾ ಗುತ್ತಿದೆ. ಇದಕ್ಕೆ ಈಗಾಗಲೇ ರೂ.2 ಕೋಟಿ ಹಣ ಬಿಡುಗಡೆಯಾಗಿದೆ. ಬೆಳಗಾವಿ ಕಾರಾಗೃಹ ದಲ್ಲಿ ಮೊಬೈಲ್ ಜಾಮರ್ ಅಳವಡಿಸಲಾಗಿದೆ. ತಿಹಾರ್ ಜೈಲಿನ ಮಾದರಿಯಲ್ಲಿ ಕಾರಾಗೃಹ ಗಳಿಗೆ ದೂರವಾಣಿ ವ್ಯವಸ್ಥೆ, ಟೆಲಿ ಮೆಡಿಸಿನ್ ವ್ಯವಸ್ಥೆ ಜಾರಿಗೊಳಿಸಲಾಗುತ್ತಿದೆ' ಎಂದರು.`ಕಾರಾಗೃಹಗಳಲ್ಲಿ ಆಗಾಗ್ಗೆ ಕೈದಿಗಳ ಆರೋಗ್ಯ ತಪಾಸಣೆ ನಡೆಸಲಾಗುತ್ತಿದೆ. ಆದರೆ ಇಲಾಖೆಗೆ ವೈದ್ಯರ ಕೊರತೆ ಇದೆ. ಕಾರಾಗೃಹ ಸಿಬ್ಬಂದಿಗೆ ಶೇ 15 ರ ವಿಶೇಷ ವೇತನವನ್ನು ಸರ್ಕಾರದ ಹಂತದಲ್ಲಿ ಬಾಕಿ ಇದೆ. ರೂ.5 ಕೋಟಿ ವೆಚ್ಚದಲ್ಲಿ ವಸತಿ ಸಮುಚ್ಚಯ ನಿರ್ಮಾಣ ಮತ್ತು ರಿಪೇರಿ ನಡೆಸಲಾಗುತ್ತಿದೆ. ಕಾರಾಗೃಹಗಳಲ್ಲಿ ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ರೂ.3 ಕೋಟಿ ವೆಚ್ಚದಲ್ಲಿ ಶೌಚಾಲಯಗಳನ್ನು ನಿರ್ಮಾಣ ಮಾಡಲಾಗುತ್ತಿದೆ' ಎಂದರು.ಡಿಐಜಿ (ಹೆಡ್‌ಕ್ವಾಟ್ರರ್ಸ್) ವಿ.ಎಸ್.ರಾಜ, ಕಾರಾಗೃಹಗಳ ಉಪ ಮಹಾ ನಿರೀಕ್ಷಕ ಎಂ.ಸಿ.ವಿಶ್ವನಾಥಯ್ಯ, ನಗರ ಕೇಂದ್ರ ಕಾರಾಗೃಹ ಮುಖ್ಯ ಅಧೀಕ್ಷಕ ಜಯಸಿಂಹ, ಸಹಾಯಕ ಅಧೀಕ್ಷಕ ಮಹೇಶ್‌ಕುಮಾರ್, ಜೈಲರ್‌ಗಳಾದ ಮರೀಗೌಡ, ಸುನಿಲ್, ಸುರೇಶ್ ಉಪಸ್ಥಿತ ರಿದ್ದರು. ಕಾರಾಗೃಹ ಅಧೀಕ್ಷಕಿ ಕೆ.ಸಿ.ದಿವ್ಯಶ್ರೀ ಸಿಬ್ಬಂದಿ ತರಬೇತಿ ಕುರಿತು ವರದಿ ವಾಚಿಸಿದರು.ಇದಕ್ಕೂ ಮುನ್ನ ಕಾರಾಗೃಹ ಸಿಬ್ಬಂದಿ ಆಕರ್ಷಕ ಪಥ ಸಂಚಲನ ನಡೆಸಿದರು. ತರಬೇತಿ ಅವಧಿ ಯಲ್ಲಿ ಹೊರಾಂಗಣ ಮತ್ತು ಒಳಾಂಗಣ ವಿಷಯಗಳಲ್ಲಿ ಹೆಚ್ಚು ಅಂಕ ಗಳಿಸಿದವರಿಗೆ ಬಹುಮಾನ ವಿತರಿಸಲಾಯಿತು. ಸರ್ವೋತ್ತಮ ಪ್ರಶಸ್ತಿ-ಆರ್.ಪ್ರದೀಪ್, ಎಡಿಜಿಪಿ ಐಜಿ ಪ್ರಶಸ್ತಿ ರಾಜೇಶ್ ನಾಯಕ್, ಹೊರಾಂಗಣ ವಿಭಾಗ: ರಾಜೇಶ್ ನಾಯಕ (ಪ್ರಥಮ),ಪಿ.ವಿ.ಕಾಂಬ್ಳೆ (ದ್ವಿತೀಯ),ಎಸ್. ವಿ. ಜಕಾತಿ (ತೃತೀಯ).ಒಳಾಂಗಣ ವಿಭಾಗ:ವಿನೋದಕುಮಾರ್ (ಪ್ರ), ಎಂ.ಸಂತೋಷ್ (ದ್ವಿ), ಕೆ.ಲಕ್ಷ್ಮಯ್ಯ (ತೃ). ಫೈರಿಂಗ್ ವಿಭಾಗ: ಎನ್.ದೇವ ಮತ್ತು ಎಂ.ಡಿ. ಬಡಿಗೇರ (ಪ್ರ), ಮಹೇಶ್ ಬಿ. ಗನಬಸಪ್ಪನವರ (ದ್ವಿ), ಕೆ.ಲಕ್ಷ್ಮಯ್ಯ (ತೃ). ಕರ್ನಾಟಕ ಕಾರಾ ಗೃಹಗಳ ಕೈಪಿಡಿ ಉತ್ತಮ- ಎಸ್.ಎಸ್. ಪುರುಷೋತ್ತಮ, ಕರ್ನಾಟಕ ಕಾರಾಗೃಹಗಳ ನಿಯಮಾವಳಿ ಮತ್ತು ಲಘು ವಾಹನ- ಆರ್. ಪ್ರದೀಪ್, ಭಾರತ ದಂಡ ಸಂಹಿತೆ ಮತ್ತು ಅಪ ರಾಧ ಪ್ರಕ್ರಿಯಾ ಸಂಹಿತೆ- ವಿನೋದ ಕುಮಾರ್, ಸಮಾಜಶಾಸ್ತ್ರ, ಮನಃಶಾಸ್ತ್ರ, ಅಪರಾಧ ಶಾಸ್ತ್ರ ಮತ್ತು ಭಾರತ ಸಂವಿಧಾನ- ವಿ.ಮುತ್ತಪ್ಪ, ವಸತಿ ನಿಲಯದ ಕೊಠಡಿ ನಿರ್ವಹಣೆ -ರಾಘ ವೇಂದ್ರ ಈಶ್ವರಗೌಡ, ಸಿದ್ದಪ್ಪ ಹಲಕರ್ಣಿ, ಬಸವರಾಜ ಕಮತರ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry