ಕಾರಿನಲ್ಲಿ ಸ್ಪೋಟಕ ಪತ್ತೆ: ತಪ್ಪಿದ ಅನಾಹುತ

7

ಕಾರಿನಲ್ಲಿ ಸ್ಪೋಟಕ ಪತ್ತೆ: ತಪ್ಪಿದ ಅನಾಹುತ

Published:
Updated:

 

ಅಂಬಾಲಾ (ಹರಿಯಾಣಾ): ಇಲ್ಲಿನ ಕಂಟೋನ್ಮೆಂಟ್ ರೈಲು ನಿಲ್ದಾಣದ ಬಳಿ ನಿಲ್ಲಿಸಿದ್ದ ಕಾರೊಂದರಲ್ಲಿ ಇರಿಸಿದ್ದ 5 ಕಿಲೋಗಿಂತ ಹೆಚ್ಚಿದ್ದ ಸ್ಫೋಟಕವನ್ನು ಪತ್ತೆ ಮಾಡಿದ್ದು, ದೀಪಾವಳಿ ಹಬ್ಬಕ್ಕೆ ನಾಲ್ಕಾರು ದಿನಗಳಿರುವ ಮೊದಲೇ ಸಂಭವಿಸಬಹುದಾಗಿದ್ದ ಮಾರಕ ಸ್ಪೋಟ ಮತ್ತು ಅದರಿಂದಾಗಬಹುದಾಗಿದ್ದ ಅನಾಹುತಗಳನ್ನು ತಪ್ಪಿಸಿದಂತಾಗಿದೆ ಎಂದು ಗುರುವಾರ ಬೆಳಿಗ್ಗೆ ಪೊಲೀಸರು ತಿಳಿಸಿದ್ದಾರೆ.

ತಮಗೆ ಲಭಿಸಿದ ಸುಳಿವನ್ನಾಧರಿಸಿ ಜಂಟಿ ಕಾರ್ಯಾಚರಣೆ ನಡೆಸಿದ ದೆಹಲಿ ಮತ್ತು ಹರಿಯಾಣಾ ಪೊಲೀಸರು, ಬುಧವಾರ ಸಂಜೆ ಇಲ್ಲಿನ ಕಂಟೋನ್ಮೆಂಟ್ ರೈಲು ನಿಲ್ದಾಣದ ಬಳಿಯಲ್ಲಿ ನಿಲ್ಲಿಸಿದ್ದ ನೀಲಿ ಇಂಡಿಕಾ ಕಾರಿನಲ್ಲಿ ದಾಸ್ತಾನು ಮಾಡಲಾಗಿದ್ದ 5 ಕಿಲೋಗೂ ಅಧಿಕ ಭಾರದ ಸ್ಫೋಟಕ ಸಾಮಗ್ರಿ ಮತ್ತು ಅದನ್ನು ಸ್ಪೋಟಿಸಲು ಬಳಸುವ ಸಾಧನಗಳನ್ನು ವಶಪಡಿಸಿಕೊಂಡಿದ್ದಾರೆ.

ಜಮ್ಮು ಬಾರಿ ಬ್ರಮ್ಮನ ಪ್ರದೇಶದ ಅಂಗಡಿಯೊಂದರಿಂದ ಕೊಂಡ ಸಿಹಿ ತಿಂಡಿಯ ಪೊಟ್ಟಣ ಹಾಗೂ ಜಮ್ಮು ಕಾಶ್ಮೀರದ ಎರಡು ಸುದ್ದಿ ಪತ್ರಿಕೆಗಳೂ ಸಹ ಕಾರಿನಲ್ಲಿ ಪತ್ತೆಯಾಗಿವೆ. ಕಾರಿನ ನಂಬರ್ ಹರಿಯಾಣ ಮೂಲದ್ದು ಎನ್ನುವಂತಿದ್ದರೂ ಅದು ನಕಲಿ ಎಂದಿರುವ ಪೊಲೀಸರು ದುಷ್ಖರ್ಮಿಗಳು ಈ ಕಾರನ್ನು ಕಳುವು ಮಾಡಿರಬಹುದು ಎಂದು ಶಂಕಿಸಿದ್ದಾರೆ.

ಕಂಟೋನ್ಮೆಂಟ್ ರೈಲು ನಿಲ್ದಾಣ ಸೇನಾ ನೆಲೆಗೆ ಹತ್ತಿರದಲ್ಲಿದ್ದು, ದುಷ್ಕರ್ಮಿಗಳು ಸೇನಾ ನೆಲೆಯ ಹತ್ತಿರ ಸ್ಪೋಟಿಸಲು  ಸಂಚು ನಡೆಸಿದ್ದರೆಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. ಸ್ಪೋಟಕಗಳನ್ನು ನಿಷ್ಕ್ರಿಯಗೊಳಿಸುವ ತಂಡಗಳು ಸ್ಥಳಕ್ಕೆ ಧಾವಿಸಿವೆ. ತನಿಖೆ ಮುಂದುವರೆದಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry