ಭಾನುವಾರ, ಆಗಸ್ಟ್ 25, 2019
28 °C

ಕಾರು ಉರುಳಿ ನಾಲ್ವರ ದುರ್ಮರಣ

Published:
Updated:

ಕಮಲಾಪುರ: ಬೀದರ್- ಶ್ರೀರಂಗಪಟ್ಟಣ ರಾಷ್ಟ್ರೀಯ ಹೆದ್ದಾರಿ 218 ರಲ್ಲಿ ಬರುವ ಗುಲ್ಬರ್ಗ ತಾಲ್ಲೂಕಿನ ಕಮಲಾಪುರ ಸಮೀಪದ ಭೀಮನಾಳ ಕ್ರಾಸ್‌ನ ಕುದುರೆಮುಖ ತಿರುವಿನಲ್ಲಿ ಶನಿವಾರ ರಾತ್ರಿ ಕಾರು ಉರುಳಿ ಬಿದ್ದು ನಾಲ್ವರು ಮೃತಪಟ್ಟಿದ್ದಾರೆ.ಗುಲ್ಬರ್ಗದ ಶಕ್ತಿನಗರದ ವೇಂಕಟೇಶ ಸುರೇಶ (20), ಬಸವ ನಗರದ ಅನಿಲ ಲಕ್ಷ್ಮಣ (27), ಕಾರು ಚಾಲಕ ಗಜೇಂದ್ರ ಗುರುರಾಜ ಮತ್ತಿಮೂಡ (23), ಮಲ್ಲಿನಾಥ ದೇವೀಂದ್ರಪ್ಪ ಕಟ್ಟಿಮನಿ (21) ಮೃತಪಟ್ಟವರು. ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಇವರು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆಯೇ ಮೃತಪಟ್ಟರು.ಹಳೆ ಜೇವರ್ಗಿ ರಸ್ತೆ ರಾಮ ಮಂದಿರ ಬಳಿಯ ಆನಂದ ಚಂದಪ್ಪ ಎಂಬವರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಸ್ಥಿತಿ ಗಂಭೀರವಾಗಿದೆ. ಐವರೂ ಗುಲ್ಬರ್ಗ ನಿವಾಸಿಗಳು.ಹುಮನಾಬಾದ್‌ನಿಂದ ಗುಲ್ಬರ್ಗಕ್ಕೆ ತೆರಳುವ ಮಾರ್ಗ ಮಧ್ಯೆ ಈ ಅಪಘಾತ ನಡೆದಿದೆ. ಕಮಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Post Comments (+)