ಕಾರು ಚಾಲಕನ ಕೊಲೆ: ಇಬ್ಬರು ಆರೋಪಿಗಳ ಬಂಧನ

7

ಕಾರು ಚಾಲಕನ ಕೊಲೆ: ಇಬ್ಬರು ಆರೋಪಿಗಳ ಬಂಧನ

Published:
Updated:

ಮಂಗಳೂರು: ಒಂದೂವರೆ ತಿಂಗಳ ಹಿಂದೆ ಇಲ್ಲಿನ ಬಿಜೈ ಕಾರ್ ಪಾರ್ಕಿಂಗ್ ಸ್ಥಳದಿಂದ ಬಾಡಿಗೆಗೆ ಕಾರನ್ನು ಕೊಂಡೊಯ್ದು, ಚಾಲಕ ಗೋವರ್ಧನ್ ಅವರನ್ನು ಕಾರ್ಕಳ ಬಳಿ ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ನಗರ ಪೊಲೀಸರು ಬಂಧಿಸಿದ್ದಾರೆ.ಬಂಧಿತರಾದ ಮಹಾಂತೇಶ ಹೊನ್ನಪ್ಪ ಅಣ್ಣಿಗೇರಿ (26) ಹಾವೇರಿ ಜಿಲ್ಲೆ ಸವಣೂರು ತಾಲ್ಲೂಕಿನ  ಹೊಸ ನೀರಳಗಿಯ ನಂದಿಹಳ್ಳಿ ಗ್ರಾಮದವನಾಗಿದ್ದರೆ, ಸೋಮಶೇಖರ್ (29) ಚಿತ್ರದುರ್ಗ ಜಿಲ್ಲೆ, ಹೊಸದುರ್ಗ ತಾಲ್ಲೂಕಿನ ಬುರುಡಕಟ್ಟೆ ಗ್ರಾಮದವರು.ಇವರಿಬ್ಬರೂ ಟಿಪ್ಪರ್ ಚಾಲಕರಾಗಿದ್ದು, ಸದ್ಯ ಕೆಲಸ ಕಳೆದುಕೊಂಡಿದ್ದರು. ಇಬ್ಬರೂ ಮಂಗಳೂರಿನಲ್ಲಿ ವಾಸವಾಗಿದ್ದರು. ಹೇಗಾದರೂ ಮಾಡಿ ಹಣ ಮಾಡಬೇಕು ಎಂಬ ಒಂದೇ ಒಂದು ಕಾರಣಕ್ಕೆ ಅವರು ಟ್ಯಾಕ್ಸಿ ಚಾಲಕನನ್ನು ಕರೆದೊಯ್ದು ಈ ಕೃತ್ಯ ಎಸಗಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತ ಸೀಮಾಂತ ಕುಮಾರ್ ಸಿಂಗ್ ಗುರುವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry