ಶುಕ್ರವಾರ, ಜನವರಿ 24, 2020
28 °C

ಕಾರು, ದ್ವಿಚಕ್ರ ವಾಹನ ಮಾರಾಟ ಕುಸಿತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾರು, ದ್ವಿಚಕ್ರ ವಾಹನ ಮಾರಾಟ ಕುಸಿತ

ನವದೆಹಲಿ(ಪಿಟಿಐ): ಹಬ್ಬಗಳು ಮುಗಿದು ಬೇಡಿಕೆ ಕ್ಷೀಣಿಸಿದ ಹಿನ್ನೆಲೆ­ಯಲ್ಲಿ ಕಾರು ಮಾರಾಟ ನವೆಂಬರ್‌­ನಲ್ಲಿ ಶೇ 8.15ರಷ್ಟು ಕುಸಿತ ಕಂಡಿದೆ. ಒಟ್ಟು 1,42,849 ಕಾರು­ಗಳು ಮಾರಾಟವಾಗಿವೆ. ಕಳೆದ ವರ್ಷದ ಇದೇ ಅವಧಿಯಲ್ಲಿ 1,55,­535 ಕಾರುಗಳು ಮಾರಾಟವಾಗಿದ್ದವು ಎಂದು ಭಾರತೀಯ ವಾಹನ ತಯಾ­ರಿಕಾ ಸಂಸ್ಥೆ ಗಳ ಒಕ್ಕೂಟ (ಎಸ್‌ಐಎಎಂ) ಮಂಗಳ ವಾರ ಅಂಕಿ ಅಂಶ ಪ್ರಕಟಿಸಿದೆ.‘ಸದ್ಯದ ಮಾರುಕಟ್ಟೆ ಪರಿಸ್ಥಿತಿ ಸವಾಲಿ­ನದಾಗಿದೆ. ಇನ್ನೇನಿದ್ದರೂ ಲೋಕಸಭೆ ಚುನಾ­ವಣೆ­ ನಡೆದು ಹೊಸ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಮಾರುಕಟ್ಟೆ ಚೇತರಿ­ಸಿಕೊ­ಳ್ಳಬಹುದು. ಹಣಕಾಸು ಮಾರುಕಟ್ಟೆ ಅಸ್ಥಿರತೆ  ಮತ್ತು ಬಡ್ಡಿ ದರ ಏರಿಕೆಯಿಂದ ಹಬ್ಬಗಳ ಸಂದರ್ಭ­ದಲ್ಲೂ ನಿರೀಕ್ಷಿತ ಪ್ರಮಾಣದಲ್ಲಿ ಮಾರಾಟ ನಡೆ ದಿಲ್ಲ’ ಎಂದು ‘ಎಸ್‌ಐಎಎಂ’ನ ಸಹಾ ಯಕ ಪ್ರಧಾನ ನಿರ್ದೇಶಕ ಸುಗತೊ ಸೆನ್‌್ ಸುದ್ದಿಗಾರರಿಗೆ ತಿಳಿಸಿದರು.ಮಾರುತಿ ಸುಜುಕಿ ಇಂಡಿಯಾ ನವೆಂ­ಬರ್‌ನಲ್ಲಿ ಕಾರು ಮಾರಾಟದಲ್ಲಿ ಶೇ 4.22ರಷ್ಟು ಕುಸಿತ ಕಂಡಿದೆ. ಒಟ್ಟು 71,649 ಕಾರು­ಗಳನ್ನು ಮಾರಾಟ ಮಾಡಿದೆ. ಹುಂಡೈ ಮೋಟಾರ್‌ ಶೇ 3.66ರಷ್ಟು ಇಳಿಕೆ ದಾಖಲಿಸಿದೆ. ಒಟ್ಟು 33,427 ಕಾರು ಮಾರಾಟವಾಗಿವೆ. ಟಾಟಾ ಕಾರುಗಳ ಮಾರಾಟ ಶೇ 41.57ರ­ಷ್ಟು ಭಾರಿ ಪ್ರಮಾಣದಲ್ಲಿ ಕುಸಿತ ಕಂಡಿದೆ. ಕೇವಲ 7,910 ಕಾರು­ಗಳು ಮಾರಾ­ಟವಾಗಿವೆ. ‘ಸೆಡಾನ್‌ ಅಮೇಜ್‌’ ಮಾದರಿಗೆ ಹೆಚ್ಚಿನ ಬೇಡಿಕೆ ವ್ಯಕ್ತವಾಗಿರುವುದರಿಂದ ಹೋಂಡಾ ಕಾರ್ಸ್ ಇಂಡಿಯಾ ಶೇ 150.87ರಷ್ಟು ಪ್ರಗತಿ ದಾಖಲಿಸಿದೆ. ಮಹೀಂದ್ರಾ ಅಂಡ್‌ ಮಹೀಂದ್ರಾ ಶೇ 30.46ರಷ್ಟು  ಕುಸಿತ ಕಂಡಿದೆ.ದ್ವಿಚಕ್ರ ವಾಹನ

ನವೆಂಬರ್‌ನಲ್ಲಿ ಒಟ್ಟು 8,80,015 ದ್ವಿಚಕ್ರವಾಹನಗಳು ಮಾರಾಟ­ವಾಗಿದ್ದು  ಶೇ 1.44ರಷ್ಟು ಪ್ರಗತಿ ಕಂಡಿದೆ. ಹೀರೋ ಮೋಟೊ ಕಾರ್ಪ್‌ ಶೇ 5, ಹೋಂಡಾ ಶೇ 44.1ರಷ್ಟು ಏರಿಕೆ ದಾಖಲಿಸಿವೆ. ಬಜಾಜ್‌ ಆಟೊ ಶೇ 28.42ರಷ್ಟು ಕುಸಿತ ಕಂಡಿದೆ.ಗಣಿಗಾರಿಕೆ ಮತ್ತು ಮೂಲ­ಸೌಕರ್ಯ ವಲಯಗಳ ಪ್ರಗತಿ ಸ್ಥಗಿತಗೊಂ­ಡಿರುವು ದರಿಂದ ವಾಣಿಜ್ಯ ಬಳಕೆಯ ವಾಹನಗ ಳಿಗೆ ಬೇಡಿಕೆ ತಗ್ಗಿದೆ ಎಂದು ‘ಎಸ್‌ಐಎ ಎಂ’ ಹೇಳಿದೆ.

ಪ್ರತಿಕ್ರಿಯಿಸಿ (+)