ಗುರುವಾರ , ನವೆಂಬರ್ 21, 2019
20 °C

ಕಾರು ಮಾರಾಟ ಶೇ35 ವೃದ್ಧಿ: ವೋಲ್ವೊ ವಿಶ್ವಾಸ

Published:
Updated:

ಬೆಂಗಳೂರು: ಭಾರತದಲ್ಲಿ 2013 - 14ನೇ ಸಾಲಿನಲ್ಲಿ 1100 ಕಾರುಗಳ ಮಾರಾಟ ಗುರಿ ಇದೆ ಎಂದು ಸ್ವೀಡನ್ ಮೂಲದ ಐಶಾರಾಮಿ ಕಾರು ಕಂಪೆನಿ `ವೋಲ್ವೊ ಆಟೊ ಇಂಡಿಯ'ದ ವ್ಯವಸ್ಥಾಪಕ ನಿರ್ದೇಶಕ ಥಾಮಸ್ ಎರ್ನ್‌ಬರ್ಗ್ ಹೇಳಿದರು.


ಇಲ್ಲಿ ವೊಲ್ವೊ ಕಾರುಗಳ ರಾಜ್ಯದ ಮೊದಲ ಷೋರೂಂ ಉದ್ಘಾಟಿಸಿ ಸುದ್ದಿಗೋಷ್ಠಿ ನಡೆಸಿದ ಅವರು, `2012ರಲ್ಲಿ 821 ಕಾರು ಮಾರಿದ್ದು, ಶೇ 150ರಷ್ಟು ಪ್ರಗತಿಯಾಗಿದೆ. ಈ ವರ್ಷ ಶೇ 35ರಷ್ಟು ಬೆಳವಣಿಗೆಯ ವಿಶ್ವಾಸವಿದೆ ಎಂದರು.`ಮಾರ್ಷಿಯಲ್ ಮೋಟಾರ್ಸ್' ಮಾಲೀಕ ಸಾಕೇತ್ ತಲ್ವಾರ್, ದಕ್ಷಿಣ ಭಾರತ ವೊಲ್ವೊ ಕಾರುಗಳಿಗೆ ಮುಖ್ಯ ಮಾರುಕಟ್ಟೆ ಎಂದರು. ಪಾಲುದಾರ ರಿತೇಶ್ ರೆಡ್ಡಿ ಇದ್ದರು.

ಪ್ರತಿಕ್ರಿಯಿಸಿ (+)