ಸೋಮವಾರ, ಮೇ 23, 2022
20 °C

ಕಾರೇಹಳ್ಳಿ ಬ್ರಹ್ಮರಥೋತ್ಸವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಳಿಯಾರು: ಹೋಬಳಿಯ ಪ್ರಸಿದ್ಧ ಕಾರೇಹಳ್ಳಿ ರಂಗನಾಥಸ್ವಾಮಿ ದನಗಳ ಜಾತ್ರಾ ಮಹೋತ್ಸವದ ಅಂಗವಾಗಿ ನಡೆಯುವ ಬ್ರಹ್ಮರಥೋತ್ಸವ ಗುರುವಾರ ಮಧ್ಯಾಹ್ನ ಸಾವಿರಾರು ಭಕ್ತರ ಸಮ್ಮುಖದಲ್ಲಿ ನಡೆಯಿತು. ಪ್ರತಿ ಭಾರಿಯಂತೆ ಸ್ವಾಮಿಯ ರಥೋತ್ಸವಕ್ಕೆ ದೇವತೆಗಳಾದ ಹೊಯ್ಸಳಕಟ್ಟೆ ಕರಿಯಮ್ಮ ಹಾಗೂ ಎರೆಹಳ್ಳಿ ಅಮ್ಮನವರು ಆಗಮಿಸಿ ಮೆರಗು ನೀಡಿದವು. ಮೂಲ ದೇವಾಲಯ ಬೊರನಕಣಿವೆ ಜಲಾಶಯದ ನೀರಿನಿಂದ ಜಲಾವೃತಗೊಂಡಿರುವುದರಿಂದ ಪೂಜಾ ವಿಧಿವಿಧಾನಗಳು ಮೇಲಿನ ದೇವಾಲಯದಲ್ಲಿ ನಡೆಯಿತು.ಅಲ್ಲಿಂದ ಮೆರವಣಿಗೆಯಲ್ಲಿ ಸ್ವಾಮಿ ನಡೆದು ನಂತರ ರಥ ಬೀದಿಗೆ ಆಗಮಿಸಿದವು. ಸುಮಾರು 12.55ರ ವೇಳೆಗೆ ಸ್ವಾಮಿ ಸಾವಿರಾರು ಭಕ್ತರ ಸಮ್ಮಖದಲ್ಲಿ ರಥವನ್ನು ಏರಿದಾಗ ಭಕ್ತರಿಂದ ಘೋಷಗಳ ಸುರಿಮಳೆಯಾಯಿತು. ನಂತರ ವಿಶೇಷವಾಗಿ ಅಲಂಕೃತಗೊಂಡ ಭವ್ಯ ರಥವನ್ನು ಸಾವಿರಾರು ಭಕ್ತರು ಎಳೆದು ಪಾವನರಾದರು. ಅಲ್ಲದೆ ಕಳಶಕ್ಕೆ ಬಾಳೆಹಣ್ಣು ಎಸೆದು ತಮ್ಮ ಧಾರ್ಮಿಕ ಭಾವ ಮೆರೆದರು.ದೇವಾಸ್ಥಾನದ ಧರ್ಮದರ್ಶಿ ಕಮಿಟಿಯ ಆರ್.ರಂಗಸ್ವಾಮಿ, ಜಿ.ಎಂ.ನೀಲಕಂಠಯ್ಯ, ಜಿ.ಸಿ.ದೊಡ್ಡಯ್ಯ, ಗ.ಕರಿಯಪ್ಪ, ಹಾಗೂ ದೇವಾಲಯ ಅಭಿವೃದ್ಧಿ ಸಮಿತಿಯ ವೆಂಕಟಾಚಲಪತಿಶೆಟ್ಟಿ, ಪ.ಮುದ್ದರಂಗಪ್ಪ, ಜಿ.ಎಸ್.ಸಿದ್ದರಾಮಯ್ಯ ಇತರರಿದ್ದರು. ದೇವಾಲಯದ ಅಭಿವೃದ್ಧಿಗಾಗಿ ರಥಕ್ಕೆ ಹಾಕಲಾಗಿದ್ದ ಹೂವಿನಹಾರಗಳನ್ನು ಇದೇ ಮೊದಲಬಾರಿಗೆ ಹರಾಜು ಮಾಡಲಾಗಿ ದಸೂಡಿಯ ಚಿದಾನಂದ ಅವರು ಹಾರವೊಂದನ್ನು 25 ಸಾವಿರ ರೂಪಾಯಿ ಹರಾಜು ಕೂಗಿ ಕೊಂಡರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.