ಬುಧವಾರ, ನವೆಂಬರ್ 20, 2019
27 °C

ಕಾರ್ಕಳದಲ್ಲಿ ಬಿಜೆಪಿ ಮಹಾ ಅಭಿಯಾನ

Published:
Updated:

ಕಾರ್ಕಳ: ಇಲ್ಲಿನ ವಿಧಾನ ಸಭಾ ಕ್ಷೇತ್ರದ ಚುನಾವಣೆಯ ಹಿನ್ನೆಲೆಯಲ್ಲಿ ಬಿಜೆಪಿ ವತಿಯಿಂದ ಮಹಾ ಅಭಿಯಾನದಲ್ಲಿ ಕಾರ್ಯಕರ್ತರು ಮನೆ ಮನೆಗೆ ತೆರಳಿ ಬಿಜೆಪಿ ಅಭ್ಯರ್ಥಿ ವಿ.ಸುನಿಲ್ ಕುಮಾರ್ ಪರ  ಮತಯಾಚಿಸಿದರು.ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿ.ಸುನಿಲ್ ಕುಮಾರ್ ಮನೆ ಮನೆಗೆ ತೆರಳಿ ಮತಯಾಚನೆ ಮಾಡುವ ಮೂಲಕ ಮಹಾ ಅಭಿಯಾನಕ್ಕೆ ಚಾಲನೆ ನೀಡಿ ದರು. ಕ್ಷೇತ್ರದ ಎಲ್ಲಾ 187 ಬೂತ್‌ಗಳಲ್ಲಿ ಮಹಾ ಅಭಿಯಾನ ಸಂಪರ್ಕ ನಡೆಯಿತು.ಈ ಸಂದರ್ಭದಲ್ಲಿ ಎಂ.ಕೆ.ವಿಜಯ ಕುಮಾರ್, ವಿಜಯ ಶೆಟ್ಟಿ, ಬಿಜೆಪಿ ನಗರ ಪ್ರಧಾನ ಕಾರ್ಯದರ್ಶಿ  ಪ್ರಕಾಶ್ ರಾವ್, ಪುರಸಭಾ ಸದಸ್ಯರಾದ ಅನಿತಾ ಆರ್. ಅಂಚನ್, ಜಗದೀಶ ಆಚಾರ್ಯ ಮುಂತಾದವರು ಉಪಸ್ಥಿತರಿದ್ದರು.ತಾಲ್ಲೂಕಿನ ನಿಟ್ಟೆ ಗ್ರಾಮದ ಗುಂಡ್ಯಡ್ಕದಲ್ಲಿ ಪಕ್ಷದ ಹಿರಿಯರಾದ ಬೋಳ ಪ್ರಭಾಕರ ಕಾಮತ್ ಮಹಾ ಅಭಿಯಾನಕ್ಕೆ ಚಾಲನೆ ನೀಡಿದರು. ನಂತರ ಮನೆ ಮನೆಗೆ ತೆರಳಿ  ಸುನಿಲ್ ಕುಮಾರ್ ಪರ ಮತಯಾಚಿಸಿದರು.ಪ್ರತಿ ಬೂತ್‌ಗಳಲ್ಲಿ ನೂರಾರು ಬಿಜೆಪಿ ಕಾರ್ಯಕರ್ತರು ಮನೆ ಮನೆಗೆ ತೆರಳಿ ಮತಯಾಚನೆ ಮಾಡಿದರು. ಬಿಜೆಪಿ ಪ್ರಮುಖರಾದ ಸತೀಶ್ ಪೈ, ಗುರುದಾಸ ಶೆಣೈ, ಸುಧಾಕರ ಹೆಗ್ಡೆ, ತಾಲ್ಲೂಕು ಪಂಚಾಯಿತಿ ಸದಸ್ಯರಾದ ಚಂದ್ರಶೇಖರ ಶೆಟ್ಟಿ, ಮಮತಾ ನಾಯ್ಕ, ಶಿವಪುರ ಗ್ರಾಮ ಪಂಚಾಯಿತಿ ಅಧ್ಯಕ್ಷ ಸುರೇಶ ಶೆಟ್ಟಿ, ಹೆಬ್ರಿ ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಡಿ.ಜಿ.ರಘು, ನಾರಾಯಣ ಪೂಜಾರಿ, ಶೋಧನ್ ಮತಯಾಚಿಸಿದರು.

ಪ್ರತಿಕ್ರಿಯಿಸಿ (+)