ಕಾರ್ಕಳ: ಗುಡುಗು ಸಹಿತ ಮಳೆ- ನಾಲ್ವರಿಗೆ ಗಾಯ

ಸೋಮವಾರ, ಜೂಲೈ 22, 2019
27 °C

ಕಾರ್ಕಳ: ಗುಡುಗು ಸಹಿತ ಮಳೆ- ನಾಲ್ವರಿಗೆ ಗಾಯ

Published:
Updated:

ಕಾರ್ಕಳ: ತಾಲ್ಲೂಕಿನ ಹೆಚ್ಚಿನ ಕಡೆಗಳಲ್ಲಿ ಮಂಗಳವಾರ ರಾತ್ರಿ ಮಳೆ ಸಿಡಿಲಿನ ಆರ್ಭಟಕ್ಕೆ ಹಲವಾರು ಕಡೆ ಹಾನಿ ಸಂಭವಿಸಿದ್ದು, ನಾಲ್ವರು ಗಾಯಗೊಂಡಿದ್ದಾರೆ.

ತಾಲ್ಲೂಕಿನ ಶಿರ್ಲಾಲು ಗ್ರಾಮದ ಕೆರ್ವಾಶೆ ಅಂಕೋತಿಮಾರು ಮನೆಯ ಜನ್ನ ಗುಡಿಗಾರ (50), ವಿನೋದಾ (46), ಲೀಲಾ (22) ಮತ್ತು ಸೌಮ್ಯ (10) ಗಾಯಗೊಂಡಿದ್ದು, ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಮನೆಗೂ ಹಾನಿ ಉಂಟಾಗಿದೆ.  ನಿಂಜೂರು ಗ್ರಾಮದ ನಿವಾಸಿಗಳಾದ ಕಿಟ್ಟಿ ಸಫಳಿಗ ಎಂಬವರ ಮನೆಗೆ ಸಿಡಿಲು ಬಡಿದು ರೂ 4 ಸಾವಿರ ಮೌಲ್ಯದ ಸ್ವತ್ತು ಹಾನಿಗೊಳಗಾಗಿದೆ. ಅದೇ ಗ್ರಾಮದ  ಯಶೋದಾ ಶೆಟ್ಟಿ ಎಂಬವರ ಮನೆಗೆ ಸಿಡಿಲು ಬಡಿದು ರೂ 3.5 ಸಾವಿರ ಮೌಲ್ಯದ ಸ್ವತ್ತು ಹಾಗೂ ಐರಿನ್ ಎಂಬವರ ಮನೆಗೆ ಸಿಡಿಲು ಬಡಿದು ರೂ 5 ಸಾವಿರ ಮೌಲ್ಯದ ಸ್ವತ್ತು ಹಾನಿಗೊಳಗಾಗಿದೆ.   ಕಾರ್ಕಳದ ಲೀಲಾವತಿ ಎಂಬವರ ಮನೆಗೆ ಸಿಡಿಲು ಬಡಿದು ರೂ 15 ಸಾವಿರ ಮೌಲ್ಯದ ಸ್ವತ್ತು ಹಾನಿಗೊಂಡಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry