ಶನಿವಾರ, ಫೆಬ್ರವರಿ 27, 2021
23 °C

ಕಾರ್ಕಳ: ರಥೋತ್ಸವ ಸಂಭ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾರ್ಕಳ: ರಥೋತ್ಸವ ಸಂಭ್ರಮ

ಕಾರ್ಕಳ: ಇಲ್ಲಿನ ಪಡುತಿರುಪತಿ ಖ್ಯಾತಿಯ ವೆಂಕಟರಮಣ ದೇವ ಸ್ಥಾನದ ರಥೋತ್ಸವವು ಭಾನುವಾರ ಸಂಜೆ ನಡೆಯಿತು. ದೇವಸ್ಥಾನದಲ್ಲಿ ಮಧ್ಯಾಹ್ನ ಪೂಜೆಯ ತರುವಾಯ ದೇವರನ್ನು ಉತ್ಸವದಲ್ಲಿ ಯಜ್ಞ ಶಾಲೆಗೆ ಕರೆತಂದು ಯಜ್ಞಕಾರ್ಯ ನಡೆಯಿತು.ದೇವಳದಲ್ಲಿ ಸುತ್ತುಬಲಿ, ಚಕ್ರ ಉತ್ಸವ ನಡೆದ ಬಳಿಕ ಸಂಜೆ ರಥಾರೋಹಣ ನಡೆಯಿತು. ರಥಾರೋಹಣ ಕಾರ್ಯಕ್ರಮದಲ್ಲಿ ಊರ ಪರವೂರಿನ ಸಾವಿರಾರು ಮಂದಿ ಭಾಗವಹಿಸಿದರು. ರಥಾರೋ ಹಣದ ತರುವಾಯ ಸಾವಿರಾರು ಮಂದಿ ದೇವರಿಗೆ ಸಲ್ಲಿಸುವ ಹೂವು ಹಣ್ಣುಕಾಯಿ ಕೈಯಲ್ಲಿ ಹಿಡಿದು ಸಾಲಿ ನಲ್ಲಿ ಸಾಗಿದರು.

ರಥದಲ್ಲಿ ಆಸೀನ ದೇವರ ದರ್ಶನ ಪಡೆದ ತರುವಾಯ ಮುಡಿಗಂಧ ಪ್ರಸಾದ ಸ್ವೀಕರಿ ಸುತ್ತಿದ್ದರು. ಪರ್ಯಾಯ ಅರ್ಚಕ ರವೀಂದ್ರ ಭಟ್, ನಾಗೇಶ ಭಟ್, ವಸುಧೇಂದ್ರ ಭಟ್ ಧಾರ್ಮಿಕ ವಿಧಿ ವಿಧಾನಗಳಲ್ಲಿ ಭಾಗವಹಿಸಿದರು. ದೇವಸ್ಥಾನದಲ್ಲಿ ತಡರಾತ್ರಿ ಫಲಾವಳಿ ಮತ್ತು ರಥ ಹೊರಡುವ ಕಾರ್ಯಕ್ರಮಗಳು ನಡೆದವು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.