ಸೋಮವಾರ, ಮಾರ್ಚ್ 8, 2021
22 °C

ಕಾರ್ಖಾನೆ ಅಭಿವೃದ್ಧಿಗೆ ಕೇಂದ್ರದಿಂದ ನೆರವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾರ್ಖಾನೆ ಅಭಿವೃದ್ಧಿಗೆ ಕೇಂದ್ರದಿಂದ ನೆರವು

ಭದ್ರಾವತಿ: ‘ಭಾರತೀಯ ಉಕ್ಕು ಪ್ರಾಧಿಕಾರದ ವಿಐಎಸ್ಎಸ್ ಕಾರ್ಖಾನೆ ಅಭಿವೃದ್ಧಿಗೆ ಕೇಂದ್ರದ ನೆರವನ್ನು ಕೊಡಿಸಲು ನಾನು, ಹಿರಿಯರಾದ ಬಿ.ಎಸ್.ಯಡಿಯೂರಪ್ಪ ಸಿದ್ಧರಿದ್ದೇವೆ’ ಎಂದು ಸಂಸದ ಆಯನೂರು ಮಂಜುನಾಥ್ ಹೇಳಿದರು.ವಿಐಎಸ್ಎಲ್ ಉತ್ಸವ ನಿಮಿತ್ತ ಸೋಮವಾರ ಜರುಗಿದ ಸಂಸ್ಥಾಪಕರ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಜಿಲ್ಲೆಯಲ್ಲಿ ಇರುವ ಎರಡು ಪ್ರಮುಖ ಕಾರ್ಖಾನೆಗಳು ಇದೇ ನಗರದಲ್ಲಿದ್ದು ಇವುಗಳ ಅಭಿವೃದ್ಧಿಯಿಂದ ಜಿಲ್ಲೆಯ ಆರ್ಥಿಕ ಶಕ್ತಿಯು ಸಹ ಹೆಚ್ಚಲಿದೆ ಎಂದರು.ಕಾರ್ಖಾನೆಗೆ ಅವಶ್ಯ ಇರುವ ಗಣಿ ಒದಗಿಸುವಲ್ಲಿ ರಾಜ್ಯ ಸರ್ಕಾರ ಮುಂದಾಗಿದೆ. ಆದರೆ, ಮತ್ತೊಂದು ಗಣಿಗಾಗಿ ಸೈಲ್ ಆಡಳಿತ ಅರ್ಜಿ ಸಲ್ಲಿಕೆ ಮಾಡಿದ್ದು ಅದನ್ನು ಒದಗಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮುಂದಾದಲ್ಲಿ ವಿಐಎಸ್ಎಲ್ ಅಭಿವೃದ್ಧಿ ಮತ್ತಷ್ಟು ವೃದ್ಧಿಸಲಿದೆ ಎಂದು ಹೇಳಿದರು.ಕಾರ್ಖಾನೆ ಅಧಿಕಾರ ಹೊಣೆ ಹೊತ್ತವರು ಅದರ ರಕ್ಷಣೆಗೆ ಮನಸ್ಸು ಮಾಡಿದರೆ ಯಾವುದೇ ರೀತಿಯಲ್ಲಿ ಅದನ್ನು ಮುನ್ನಡೆಸಬಹುದು ಎಂಬುದಕ್ಕೆ ವಿಐಎಸ್ಎಲ್ ಕಾರ್ಯಪಾಲಕ ನಿರ್ದೇಶಕ ಎಂ. ರವಿ ಉತ್ತಮ ಉದಾಹರಣೆ ಎಂದ ಅವರು ಅವರ ಕಾರ್ಯಕ್ಷಮತೆಯ ಪ್ರಶಂಸೆ ಮಾಡಿದರು.ಅಧೋಗತಿ ರೂವಾರಿ: ಎಂಪಿಎಂ ಕಾರ್ಖಾನೆ ಹಾಗೂ ಕಾರ್ಮಿಕರ ವಿಷಯದಲ್ಲಿ ಕಠಿಣ ನಿಲುವು ತಾಳುವ ಮೂಲಕ ವ್ಯವಸ್ಥಾಪಕ ನಿರ್ದೇಶಕ ಹರ್ಷಗುಪ್ತ ಅದರ ಅಧೋಗತಿಗೆ ಕಾರಣರಾಗಿದ್ದಾರೆ ಎಂದು ಇದೇ ಸಂದರ್ಭದಲ್ಲಿ ದೂರಿದರು.‘ನಮ್ಮೂರಿನ ಎರಡು ಕಾರ್ಖಾನೆಗಳು ಸುಸ್ಥಿತಿಯಲ್ಲಿದ್ದರೆ ಇಲ್ಲಿನ ಜನರ ಬದುಕು ಖುಷಿಯಿಂದ ಕೂಡಿರುತ್ತದೆ. ಇದರ ಅಭಿವೃದ್ಧಿಗೆ ಮುಂದಾಗುವ ಯಾವುದೇ ಪಕ್ಷದ ನಾಯಕರನ್ನು ನಾನು ಕ್ಷೇತ್ರದ ಶಾಸಕನಾಗಿ ಗೌರವಿಸುತ್ತೇನೆ. ಈ ವಿಚಾರದಲ್ಲಿ ರಾಜಕೀಯ ಬೇಡ, ಬದಲಿಗೆ ನಮ್ಮೂರಿನ ಹಿತ ಕಾಪಾಡುವ ಯಾರ ಜತೆಗಾದರೂ ನಾನು ಸಹಕರಿಸಲು ಸಿದ್ಧನಿದ್ದೇನೆ’ ಎಂದು ಘೋಷಿಸಿದರು.ವೇದಿಕೆಯಲ್ಲಿ ಅಧಿಕಾರಿಗಳ  ಸಂಘದ ಅಧ್ಯಕ್ಷ ಬಿ.ಎಂ. ರವಿಶಂಕರ್, ಕಾರ್ಮಿಕ ಸಂಘದ ಅಧ್ಯಕ್ಷ ಜೆ.ಎನ್. ಚಂದ್ರಹಾಸ, ಕಾರ್ಯಪಾಲಕ ನಿರ್ದೇಶಕ ಎಂ. ರವಿ ಉಪಸ್ಥಿತರಿದ್ದು ಮಾತನಾಡಿದರು.ಜ. 23 ಎಂಪಿಎಂ ಸಭೆ:  ಜಿಲ್ಲೆಯ ಚುನಾಯಿತ ಪ್ರತಿನಿಧಿಗಳನ್ನು ಒಳಗೊಂಡ ಅಧಿಕಾರಿಗಳು ಹಾಗೂ ಮಂತ್ರಿಗಳ ನೇತೃತ್ವದ ಸಭೆ ಜ. 23 ಶನಿವಾರ ಬೆಳಿಗ್ಗೆ 11 ಗಂಟೆಗೆ ಬೆಂಗಳೂರಿನಲ್ಲಿ ನಡೆಯಲಿದೆ ಎಂದು ಸಂಸದ ಆಯನೂರು ಮಂಜುನಾಥ್ ತಿಳಿಸಿದರು.ವಿಐಎಸ್ಎಲ್ ಉತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದನಂತರ ಪತ್ರಕರ್ತರ ಜತೆ ಮಾತನಾಡಿದ ಅವರು ಜ. 21 ಗುರುವಾರ ಸಭೆ ನಿಗದಿಯಾಗಿತ್ತು. ಆದರೆ ಈಗ ಅದು 23ಕ್ಕೆ ಮುಂದೂಡಿರುವ ವಿಚಾರ ತಿಳಿಯಿತು ಸಭೆಯಲ್ಲಿ ಮುಖ್ಯಮಂತ್ರಿ ಇರುತ್ತಾರೋ ಇಲ್ಲವೋ ಗೊತ್ತಿಲ್ಲ . ಆದರೆ ಬಿ.ಎಸ್. ಯಡಿಯೂರಪ್ಪ ಅವರನ್ನು ಸಭೆಗೆ ಕರೆತರುವ ನಿಟ್ಟಿನಲ್ಲಿ ಪ್ರಯತ್ನ ನಡೆದಿದೆ ಎಂದು ಹೇಳಿದರು.ಶಾಸಕ ಎಂ.ಜೆ. ಅಪ್ಪಾಜಿ ಸಹ ಸಭೆಗೆ ಆಹ್ವಾನ ಇರುವುದಾಗಿ ದೃಢಪಡಿಸಿದರು. ಸಭೆಯಲ್ಲಿ ಯಾರು ಇರುತ್ತಾರೆ ಎಂಬ ಬಗ್ಗೆ ಮಾಹಿತಿ ಇಲ್ಲ. ಆದರೆ ಸಭೆ ನಡೆಯಲಿದೆ ಎಂದು ದೃಢಪಡಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.