ಸೋಮವಾರ, ಜೂನ್ 21, 2021
21 °C

ಕಾರ್ಗಲ್ ಸಂತೇ ಮಾರುಕಟ್ಟೆ ತಡೆಗೋಡೆ ಕುಸಿತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾರ್ಗಲ್: ಇಲ್ಲಿನ ಪಟ್ಟಣ ಪಂಚಾಯ್ತಿ ಆಡಳಿತಕ್ಕೊಳಪಟ್ಟ ಸಂತೆ ಮಾರುಕಟ್ಟೆಯ ಸುತ್ತ ನಿರ್ಮಾಣ ಮಾಡುತ್ತಿದ್ದ ಕಾಂಕ್ರೀಟ್ ತಡೆಗೋಡೆ  ನಿರ್ಮಾಣ ಹಂತದಲ್ಲಿಯೇ ಕುಸಿದು ಬಿದ್ದಿರುವ ಘಟನೆ ಮಂಗಳವಾರ ಸಂಜೆ ನಡೆದಿದೆ.ಸುಮಾರು 15ಮೀ. ಉದ್ದಕ್ಕೆ ಕುಸಿದಿರುವ ತಡೆಗೋಡೆ 12 ಅಡಿ ಎತ್ತರವಿದ್ದು, ಕುಸಿತದ ಸಂದರ್ಭದಲ್ಲಿ ಸ್ಥಳದಲ್ಲಿದ್ದ ಜೆಸಿಬಿ ಯಂತ್ರದ ಮೂಲಕ ಸಂಬಂಧಪಟ್ಟ ಕಾಮಗಾರಿಗೆ ಆವಶ್ಯಕವಾಗಿದ್ದ ಮಣ್ಣು ತುಂಬುವಾಗ ಈ ಘಟನೆ ಸಂಭವಿಸಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಪಟ್ಟಣ ಪಂಚಾಯ್ತಿಯ ಅಧಿಕಾರಿಗಳು ಮತ್ತು ಉನ್ನತಮಟ್ಟದ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಮುಂದಿನ ಅಗತ್ಯ ಕ್ರಮ ಕೈಗೊಳ್ಳುವ ಬಗ್ಗೆ ಭರವಸೆ ನೀಡಿದ್ದಾರೆ.ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಸಾಮಾಜಿಕ ಸಮಾನತೆ ಮತ್ತು ಮಹಿಳೆಯರ ಸಮಾನತೆಗಾಗಿ ನಡೆದ ಹೋರಾಟದಲ್ಲಿ ಅಂಬೇಡ್ಕರ್ ಪಾತ್ರ ಪ್ರಮುಖವಾದದ್ದು ಎಂದು ಕೆಪಿಸಿ ಮುಖ್ಯ ಎಂಜಿನಿಯರ್ ರಾಜಮುಡಿ ಅಭಿಪ್ರಾಯಪಟ್ಟರು.ಇಲ್ಲಿನ ಕೆಪಿಸಿ ಮಹಿಳಾ ಉದ್ಯೋಗಿಗಳ ಬಳಗದವರು ಕಾರ್ಗಲ್ಲಿನ ಶರಾವತಿ ರಂಗಮಂದಿರದ ಒಳಾಂಗಣದಲ್ಲಿ ಏರ್ಪಡಿಸಿದ್ದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಮತ್ತು ಬಳಗದ ವಾರ್ಷಿಕೋತ್ಸವ ಸಮಾರಂಭದ ಉದ್ಘಾಟಿಸಿ ಅವರು ಮಾತನಾಡಿದರು.ಡಾ.ಬಿ.ಆರ್. ಅಂಬೇಡ್ಕರ್ ಅವರು ಸಂವಿಧಾನದಲ್ಲಿ ಮಹಿಳೆಯರ ಸಮಾನತೆಗಾಗಿ ಹೋರಾಡಿದ್ದನ್ನು ಪ್ರತಿಯೊಬ್ಬ ಮಹಿಳೆಯರು ನೆನಪಿನಲ್ಲಿ ಇಟ್ಟುಕೊಳ್ಳಬೇಕಾದ ಅಗತ್ಯವಿದೆ ಎಂದು ನುಡಿದರು.ಕೆಪಿಸಿ ವಿದ್ಯುತ್ ವಿಭಾಗದ ಮುಖ್ಯ ಎಂಜಿನಿಯರ್ ಜಿ. ಹನುಮಂತಪ್ಪ ಮಾತನಾಡಿ, ಹೆಣ್ಣಿಗೆ ಹೆಣ್ಣೇ ಶತ್ರು. ಹಾಗಾಗಿ, ಹೆಣ್ಣು ಹೆಣ್ಣನ್ನು ಗೌರವಯುತವಾಗಿ ನೋಡುವಂಥ ಸ್ಥಿತಿ ಸಮಾಜದಲ್ಲಿ ಮೊದಲು ನಿರ್ಮಾಣ ಆಗಬೇಕು ಎಂದು ತಿಳಿಸಿದರು.ಸಂಪನ್ಮೂಲ ವ್ಯಕ್ತಿಗಳಾಗಿ ಮಾತನಾಡಿದ ಡಾ.ಡಿ.ಟಿ. ಕೃಷ್ಣಮೂರ್ತಿ ಮನೆಯೇ ಮೊದಲ ಪಾಠ ಶಾಲೆ, ಜನನಿ ತಾ ಮೊದಲ ಗುರು ಎನ್ನುವಂತೆ ತಾಯಿ ಯಾವ ಸಮಾಜದ ನಿರ್ಮಾಣಕ್ಕೆ ಕಾರಣಳಾಗಿದ್ದಾಳೆ ಎಂಬುದನ್ನು ದೃಷ್ಟಾಂತದ ಮೂಲಕ ಮಹಿಳೆಯರಿಗೆ ತಿಳಿವಳಿಕೆ ನೀಡಿದರು.ಕಾರ್ಗಲ್ ಪೊಲೀಸ್ ಠಾಣೆಯ ಎಎಸ್‌ಐ ಪುಷ್ಪಾ ಮತ್ತು ಬಳಗದ ಅಧ್ಯಕ್ಷೆ ಡಾ.ಉಷಾ ಜಿ. ಬೆನ್ಹಾಳ್ ಉಪಸ್ಥಿತರಿದ್ದರು.ಕೆಪಿಸಿ ಉದ್ಯೋಗಿಗಳಾದ ವಸಂತಕುಮಾರಿ ಪ್ರಾರ್ಥಿಸಿ, ಗಂಗೂ ಐ. ಹೆಗಡೆ ಸ್ವಾಗತಿಸಿದರು. ಎ ರೋಡ್ರಿಗೆಸ್, ವಿ. ಗೌರಮ್ಮ ನಿರೂಪಿಸಿದರು. ಮೋನಿಕಾ ಎಂ. ಪಿಂಟೋ ವಂದಿಸಿದರು.ಕಾರ್ಯಕ್ರಮದ ಕೊನೆಯಲ್ಲಿ ಸಿದ್ದಾಪುರದ ನಾಗರಾಜ್ ಡೋಂಗ್ರೆ ಅವರಿಂದ ಅಣುಕು ಪ್ರದರ್ಶನ ಕಾರ್ಯಕ್ರಮ ನಡೆಯಿತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.