ಕಾರ್ಗಿಲ್ ಬಗ್ಗೆ ನವಾಜ್ ಷರೀಫ್ ತಪ್ಪು ಮಾಹಿತಿ

ಮಂಗಳವಾರ, ಜೂಲೈ 23, 2019
24 °C

ಕಾರ್ಗಿಲ್ ಬಗ್ಗೆ ನವಾಜ್ ಷರೀಫ್ ತಪ್ಪು ಮಾಹಿತಿ

Published:
Updated:

ಲಾಹೋರ್ (ಪಿಟಿಐ): ಕಾರ್ಗಿಲ್ ಯುದ್ಧಕ್ಕೆ ಪಾಕ್‌ನ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ ಅವರೇ ಕಾರಣ ಎನ್ನುವ ಹೇಳಿಕೆ ನೀಡುವ ಮೂಲಕ ಪಿಎಂಎಲ್-ಎನ್ ಮುಖ್ಯಸ್ಥ ಹಾಗೂ ಮಾಜಿ ಪ್ರಧಾನಿ ನವಾಜ್ ಷರೀಫ್ ಅವರು ಜನರನ್ನು ತಪ್ಪು ದಾರಿಗೆ ಎಳೆಯುತ್ತಿದ್ದಾರೆ ಎಂದು ಆರೋಪಿಸಿರುವ ಮುಷರಫ್, ಇನ್ನು ಮುಂದೆ ಷರೀಪ್ ಅವರು ಇಂತಹ ಹೇಳಿಕೆ ನೀಡುವುದನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದ್ದಾರೆ.

ಕಾಶ್ಮೀರ ಮತ್ತು ಕಾರ್ಗಿಲ್ ವಿಷಯಕ್ಕೆ ಸಂಬಂಧಿಸಿದಂತೆ ಷರೀಫ್ ಜನರಿಗೆ ತಪ್ಪು ಮಾಹಿತಿ ನೀಡುತ್ತಿದ್ದಾರೆ ಎಂದಿರುವ ಮುಷರಫ್, ಅಂದಿನ ಭಾರತದ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರೊಂದಿಗೆ 1999ರಲ್ಲಿ ಕಾಶ್ಮೀರಕ್ಕೆ ಸಂಬಂಧಿಸಿದಂತೆ ಸಹಮತದೊಂದಿಗೆ ಸಮಸ್ಯೆಯನ್ನು ಬಗೆಹರಿಸಿಕೊಳ್ಳಲಾಗಿದೆ ಎಂದು ಸುಳ್ಳು ಹೇಳುತ್ತಿದ್ದಾರೆ. ಕಾರ್ಗಿಲ್ ಯುದ್ಧಕ್ಕೆ ಸಂಬಂಧಿಸಿದಂತೆಯೂ ಅವರು (ಷರೀಫ್) ಸತ್ಯವನ್ನು ಹೇಳುತ್ತಿಲ್ಲ ಎಂದಿದ್ದಾರೆ.

ಶನಿವಾರ ರಾತ್ರಿ ಆಲ್ ಪಾಕಿಸ್ತಾನ್ ಮುಸ್ಲಿಮ್ ಲೀಗ್ (ಎಪಿಎಂಎಲ್) ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿದ ಮುಷರಫ್, ಷರೀಫ್ ಜನರನ್ನು ತಪ್ಪು ದಾರಿಗೆ ಎಳೆಯುವುದು ಬೇಡ ಎಂದಿದ್ದಾರೆ.

`ಕಾರ್ಗಿಲ್ ಯುದ್ಧದ ಪರಿಣಾಮ ಏನಾಗುತ್ತಿತ್ತು ಎನ್ನುವ ಪೂರ್ಣ ತಿಳಿವಳಿಕೆ ಷರೀಪ್ ಅವರಿಗೆ ಇದೆ. ಆದರೆ ಈ ಪ್ರಕರಣದಲ್ಲಿ ತಮಗೇನು ತಿಳಿದಿಲ್ಲ ಎನ್ನುವಂತೆ ಮಾತನಾಡುತ್ತಿದ್ದಾರೆ~ ಎಂದು ಮುಷರಫ್ ಆರೋಪಿಸಿದರು.

ಲಾಹೋರ್ ಘೋಷಣೆಯಲ್ಲಿ ಕಾಶ್ಮೀರದ ಬಗ್ಗೆ ಪ್ರಸ್ತಾಪವೇ ಇಲ್ಲ. ಆದರೂ ಸಮಸ್ಯೆ ನಿವಾರಣೆಗೆ ಯತ್ನಿಸಿದ್ದಾಗಿ ಷರೀಫ್ ಹೇಳಿಕೊಳ್ಳುತ್ತಿದ್ದಾರೆ ಎಂದು ತಿರುಗೇಟು ನೀಡಿದರು. ಪತ್ರಕರ್ತ ಸೈಯದ್ ಸಲೀಂ ಶಾಜಾದ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ವತಂತ್ರ ತನಿಖೆಯ ಅಗತ್ಯ ಇದೆ ಎಂದೂ ಅವರು ಒತ್ತಾಯಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry