ಕಾರ್ಟೂನ್ ನೆಟ್‌ವರ್ಕ್‌ನ ಹೊಸ ರಂಜನೆ

7

ಕಾರ್ಟೂನ್ ನೆಟ್‌ವರ್ಕ್‌ನ ಹೊಸ ರಂಜನೆ

Published:
Updated:
ಕಾರ್ಟೂನ್ ನೆಟ್‌ವರ್ಕ್‌ನ ಹೊಸ ರಂಜನೆ

ಮಕ್ಕಳ ಅಚ್ಚುಮೆಚ್ಚಿನ ಕಾರ್ಟೂನ್ ಚಾನೆಲ್ `ಕಾರ್ಟೂನ್ ನೆಟ್‌ವರ್ಕ್' ಮಕ್ಕಳನ್ನು ಮತ್ತಷ್ಟು ರಂಜಿಸಲು ಈಗ ಹೊಸ ಕಾರ್ಯಕ್ರಮದೊಂದಿಗೆ ಸಜ್ಜಾಗಿದೆ. ಮೈನವಿರೇಳಿಸುವ ಸಾಹಸ, ಮಿತಿಯಿಲ್ಲದ ಹಾಸ್ಯ, ಅದ್ಬುತ ಫ್ಯಾಂಟಸಿ ಈ ಕಾರ್ಯಕ್ರಮದ ವಿಶೇಷತೆ.`ಡ್ರೀಂ ವರ್ಕ್ಸ್ ಡ್ರಾಗನ್ಸ್: ರೈಡರ್ಸ್‌ ಆಫ್ ಬರ್ಕ್' ಕಾರ್ಯಕ್ರಮವು ಜಾಗತಿಕವಾಗಿ ಜನಪ್ರಿಯತೆ ಗಳಿಸಿದ `ಹೌ ಟು ಟ್ರೈನ್ ಯುವರ್ ಡ್ರ್ಯಾಗನ್' ಕಾರ್ಯಕ್ರಮದಿಂದ ಸ್ಫೂರ್ತಿ ಪಡೆದಿದ್ದು. `ಡ್ರೀಂ ವರ್ಕ್ಸ್ ಡ್ರಾಗನ್ಸ್: ರೈಡರ್ಸ್ ಆಫ್ ಬರ್ಕ್' ಸರಣಿಯಲ್ಲಿ ಮೂಡಿಬರುವ ಅನಿಮೇಟೆಡ್ ಪಾತ್ರಧಾರಿಗಳು ಆಕಾಶದಲ್ಲಿ ಮೈನವಿರೇಳಿಸುವ ಸಾಹಸ ಮಾಡಲಿದ್ದಾರಂತೆ. ಅಂದಹಾಗೆ, ಈ ಕಾರ್ಯಕ್ರಮವನ್ನು ಡ್ರೀಂ ವರ್ಕ್ಸ್ ಅನಿಮೇಷನ್ ಎಸ್‌ಕೆಜಿ ನಿರ್ಮಿಸಿದೆ. ವಾರಕ್ಕೊಮ್ಮೆ ಪ್ರಸಾರಗೊಳ್ಳುವ ಈ ಕಾರ್ಯಕ್ರಮ ಇದೇ 24ರಂದು ಭಾನುವಾರ ಸಂಜೆ 4ಕ್ಕೆ ಪ್ರಸಾರಗೊಳ್ಳಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry