ಭಾನುವಾರ, ಜನವರಿ 19, 2020
20 °C

ಕಾರ್ತಿಕೋತ್ಸವ: ಗಮನ ಸೆಳೆದ ವೀರಗಾಸೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬನಹಟ್ಟಿ: ಸ್ಥಳೀಯ ವೀರಭದ್ರೇಶ್ವರ ಕಾರ್ತಿಕೋತ್ಸವ ಬುಧವಾರ ಸಂಭ್ರಮದಿಂದ ನಡೆಯಿತು. ಈ ಸಂದರ್ಭದಲ್ಲಿ ದೇವಸ್ಥಾನದಲ್ಲಿ ಬುತ್ತಿ ಪೂಜೆಯಲ್ಲಿ ವೀರಭದ್ರೇಶ್ವರ ಮೂರ್ತಿಯನ್ನು ಮಾಡಿದ್ದರು. ದೇವಸ್ಥಾನದ ಮುಂಭಾಗದಲ್ಲಿ ಅಗ್ಗಿಯನ್ನು ಮಾಡಲಾಗಿತ್ತು.ಮಧ್ಯಾಹ್ನ ಮೆರವಣಿಗೆಯಲ್ಲಿ ಬಂದ ಪುರವಂತರು ಪಾಲಕಿಯ ಸಮೇತ ಅಗ್ಗಿಯನ್ನು ಪ್ರವೇಶ ಮಾಡಿದ ನಂತರ ಮಹಿಳೆ ಮತ್ತು ಪುರುಷರು ಅಗ್ಗಿಯನ್ನು ಹಾಯ್ದರು.ನಂತರ ಸಂಜೆ ಪುರವಂತರ ವೀರಗಾಸೆ ಕಲೆಯನ್ನು ಈಶ್ವರಲಿಂಗ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿತ್ತು. ಐವತ್ತಕ್ಕೂ ಹೆಚ್ಚು ಪುರವಂತರು ತಮ್ಮ ಕಲೆಯನ್ನು ಪ್ರದರ್ಶನ ಮಾಡುತ್ತ ದೇಹಕ್ಕೆ ಶಸ್ತ್ರಗಳನ್ನು ಹಾಕಿಕೊಂಡು ನೆರೆದ ಸಾವಿರಾರು ಜನರನ್ನು ರೋಮಾಂಚನಗೊಳಿಸಿದರು.ಒಬ್ಬ ಪುರವಂತರು ಉದ್ದ ಮತ್ತು ದಪ್ಪನೆಯ ಸಲಾಕೆಯನ್ನು ತಮ್ಮ ತುಟಿಯ ಕೆಳ ಭಾಗದಿಂದ ಪೂರ್ತಿಯಾಗಿ ಹಾಕಿಕೊಂಡು ಹೊರ ತೆಗೆದು ನೆರೆದವರನ್ನು ಬೆರಗುಗೊಳಿಸಿದರು.ಸಂಜೆ ಪಾಲಕಿ ಉತ್ಸವ ನಗರದ ಪ್ರಮುಖ ಬೀದಿಗಳನ್ನು ಸಂಚರಿಸಿತು.

ಪ್ರತಿಕ್ರಿಯಿಸಿ (+)