ಕಾರ್ನಾಡ್‌ಗೆ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯ ಡಾಕ್ಟರೇಟ್

7

ಕಾರ್ನಾಡ್‌ಗೆ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯ ಡಾಕ್ಟರೇಟ್

Published:
Updated:

ಬೆಂಗಳೂರು: ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ, ನಾಟಕಕಾರ ಗಿರೀಶ್ ಕಾರ್ನಾಡ್ ಅವರು ಅಮೆರಿಕದ ದಕ್ಷಿಣ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯ ನೀಡುವ ಗೌರವ ಡಾಕ್ಟರೇಟ್‌ಗೆ ಭಾಜನರಾಗಿದ್ದಾರೆ.ಕಾರ್ನಾಡ್ ಅವರು ಈ ಪುರಸ್ಕಾರ ಪಡೆಯುತ್ತಿರುವ ಮೊದಲ ರಂಗಕರ್ಮಿ. ದಕ್ಷಿಣ ಕ್ಯಾಲಿಫೋರ್ನಿಯಾ ವಿ.ವಿ.ಯ ಅಧ್ಯಕ್ಷ ಸಿ.ಎಲ್. ಮ್ಯಾಕ್ಸ್ ನಿಕಿಯಾಸ್ ಅವರು ಮುಂಬೈನಲ್ಲಿ ಸೋಮವಾರ ನಡೆದ ಸಭೆಯ ನಂತರ ಈ ವಿಷಯ ತಿಳಿಸಿದರು ಎಂದು ಪ್ರಕಟಣೆ ತಿಳಿಸಿದೆ.ದಕ್ಷಿಣ ಕ್ಯಾಲಿಫೋರ್ನಿಯಾ ವಿ.ವಿ.ಯ ಟ್ರಸ್ಟಿಯಾಗಿರುವ ಉದ್ಯಮಿ ರತನ್ ಟಾಟಾ ಅವರು ಈ ಸಭೆಯಲ್ಲಿ ಹಾಜರಿದ್ದರು. ‘ನಾಟಕಕಾರರಾಗಿ ನಿಮ್ಮ ಕೊಡುಗೆ ಮತ್ತು ಭಾರತದ ಆಧುನಿಕ ಸಾಹಿತ್ಯವನ್ನು ರೂಪಿಸುವಲ್ಲಿ ನೀವು ವಹಿಸಿದ ಪಾತ್ರವನ್ನು ಗೌರವಿಸುವ ಸಲುವಾಗಿ ನಿಮಗೆ ಗೌರವ ಡಾಕ್ಟರೇಟ್ ನೀಡಲಾಗುತ್ತಿದೆ’ ಎಂದು ನಿಕಿಯಾಸ್ ಅವರು ಕಾರ್ನಾಡ್ ಅವರಿಗೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ.‘ಚಿತ್ರ ನಿರ್ದೇಶಕರಾಗಿ, ನಟರಾಗಿ ಮತ್ತು ಬರಹಗಾರರಾಗಿ ನಿಮ್ಮ ಸಾಧನೆಯನ್ನು ಗುರುತಿಸಿ ಗೌರವ ಡಾಕ್ಟರೇಟ್ ನೀಡಲಾಗುತ್ತಿದೆ’ ಎಂದೂ ಪತ್ರದಲ್ಲಿ ಬರೆದಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry