ಕಾರ್ಪೊರೇಟ್ ಪ್ರಭಾವ ನಿರೀಕ್ಷೆ

7

ಕಾರ್ಪೊರೇಟ್ ಪ್ರಭಾವ ನಿರೀಕ್ಷೆ

Published:
Updated:

ನವದೆಹಲಿ (ಪಿಟಿಐ): ಪ್ರಮುಖ ಕಾರ್ಪೊರೇಟ್ ಕಂಪೆನಿಗಳ ಎರಡನೆಯ ತ್ರೈಮಾಸಿಕ ಅವಧಿಯ (ಜುಲೈ-ಸೆಪ್ಟೆಂಬರ್) ಹಣಕಾಸು ಫಲಿತಾಂಶ  ಈ ವಾರ ಷೇರುಪೇಟೆಯ ಏರಿಳಿತ ನಿರ್ಧರಿಸಲಿದೆ ಎಂದು ಮಾರುಕಟ್ಟೆ ತಜ್ಞರು ವಿಶ್ಲೇಷಿಸಿದ್ದಾರೆ. ಹೀರೊ ಮೋಟೊ ಕಾರ್ಪ್, ಎಚ್‌ಯುಎಲ್, ಐಸಿಐಸಿಐ ಬ್ಯಾಂಕ್, ಎನ್‌ಟಿಪಿಸಿ, ಗೇಲ್ ಇಂಡಿಯಾ ಸೇರಿದಂತೆ ಹಲವು ಪ್ರಮುಖ ಕಂಪೆನಿಗಳ ಹಣಕಾಸು ಸಾಧನೆ ಈ ವಾರ ಪ್ರಕಟಗೊಳ್ಳಲಿವೆ. ಬುಧವಾರ ಷೇರು ಪೇಟೆಗೆ ರಜೆ ಇರುವುದರಿಂದ ವಾರದ ಆರಂಭದಲ್ಲೇ ಖರೀದಿ ಮತ್ತು ಮಾರಾಟದ ಒತ್ತಡ ಕಾಣಬಹುದು ಎಂದು ಬೊನಂಜ ಪೋರ್ಟ್ ಪೊಲಿಯೊ  ಸಂಸ್ಥೆಯ ಉಪಾಧ್ಯಕ್ಷ ರಾಕೇಶ್ ಗೋಯಲ್ ಅಭಿಪ್ರಾಯಪಟ್ಟಿದ್ದಾರೆ.ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಅ.30ರಂದು ಎರಡನೆಯ ತ್ರೈಮಾಸಿಕ ಅವಧಿಯ ಹಣಕಾಸು ಪರಾಮರ್ಶೆ ಪ್ರಕಟಿಸಲಿದ್ದು, ರೆಪೊ ಮತ್ತು ರಿವರ್ಸ್ ರೆಪೊ ದರ ತಗ್ಗಿಸುವ ಸಾಧ್ಯತೆ ಕಡಿಮೆ ಎಂದು ಮಾರುಕಟ್ಟೆ ತಜ್ಞರು ವಿಶ್ಲೇಷಿಸಿದ್ದಾರೆ. ಹಣದುಬ್ಬರ ದರ ಗರಿಷ್ಠ ಮಟ್ಟದಲ್ಲಿರುವುದರಿಂದ ಅಲ್ಪಾವಧಿ ಬಡ್ಡಿ ದರದಲ್ಲಿ ಯಥಾಸ್ಥಿತಿಯೇ ಮುಂದುವರೆಯಲಿದೆ ಎಂದು ಮೋರ್ಗನ್ ಸ್ಟ್ಯಾನ್ಲಿ ಸೇರಿದಂತೆ ಪ್ರಮುಖ ಹಣಕಾಸು ಸಂಸ್ಥೆಗಳು ಹೇಳಿವೆ.ಕಾರ್ಪೊರೇಟ್ ಫಲಿತಾಂಶ ಮತ್ತು `ಆರ್‌ಬಿಐ~ ನೀತಿ ಇನ್ನೆರಡು ವಾರಗಳ ಕಾಲ ಪೇಟೆಯ ಮೇಲೆ ಒತ್ತಡ ಹೇರಲಿವೆ ಎಂದು ಷೇರು ದಲ್ಲಾಳಿ ಸಂಸ್ಥೆ `ಐಐಎಫ್   ಎಲ್~ನ  ಮುಖ್ಯಸ್ಥ ಅಮರ್ ಅಂಬಾನಿ ಅಭಿಪ್ರಾಯಪಟ್ಟಿದ್ದಾರೆ.`ದಸರಾ  ಹಿನ್ನೆಲೆಯಲ್ಲಿ ಸೋಮವಾರ ಮತ್ತು ಮಂಗಳವಾರ ವಹಿವಾಟಿನಲ್ಲಿ ದಿಢೀರ್ ಬದಲಾವಣೆಗಳು ಕಂಡುಬರುವ ನಿರೀಕ್ಷೆ ಇದೆ. ಅಂತರರಾಷ್ಟ್ರೀಯ ಸಂಗತಿಗಳಿಗಿಂತಲೂ ದೇಶೀಯ ಬೆಳವಣಿಗೆಗಳು ಪ್ರಭಾವಿಯಾಗಿವೆ ಎಂದು ಮೋತಿಲಾಲ್ ಓಸ್ವಾಲ್ ಸೆಕ್ಯುರಿಟೀಸ್‌ನ ಉಪಾಧ್ಯಕ್ಷ ಶುಭಂ ಅಗರ್‌ವಾಲ್ ಹೇಳಿದ್ದಾರೆ.ಡಾಲರ್ ಎದುರು ರೂಪಾಯಿ ಮೌಲ್ಯ ಮತ್ತೆ ಇಳಿಕೆ ಕಾಣುತ್ತಿದೆ. ಕಳೆದ ಒಂದು ತಿಂಗಳಲ್ಲಿ 103 ಪೈಸೆಗಳಷ್ಟು ಕುಸಿದಿದ್ದು ಸದ್ಯ ರೂ53.84 ತಲುಪಿದೆ. ಇದು ವಿದೇಶಿ ಸಾಂಸ್ಥಿಕ ಹೂಡಿಕೆ (ಎಫ್‌ಐಐ) ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ ಎಂದು ಅವರು ವಿಶ್ಲೇಷಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry