ಕಾರ್ಪೊರೇಷನ್ ಬ್ಯಾಂಕಿನಿಂದ 32ಕೋಟಿ ಠೇವಣಿ ಸಂಗ್ರಹ

7

ಕಾರ್ಪೊರೇಷನ್ ಬ್ಯಾಂಕಿನಿಂದ 32ಕೋಟಿ ಠೇವಣಿ ಸಂಗ್ರಹ

Published:
Updated:

ದೊಡ್ಡಬಳ್ಳಾಪುರ: ನಗರದಲ್ಲಿ ಸ್ಥಾಪನೆಯಾದ ಅತ್ಯಂತ ಹಳೆಯ ಬ್ಯಾಂಕ್ ಎನ್ನುವ ಕೀರ್ತಿ ಕಾರ್ಪೊರೇಷನ್ ಬ್ಯಾಂಕಿನದು ಎಂದು ಕಾರ್ಪೊರೇಷನ್ ಬ್ಯಾಂಕಿನ ಬೆಂಗಳೂರು ವಲಯ ಮಹಾಪ್ರಬಂಧಕ ಸಿ.ಜಿ.ಪಿಂಟೋ ಹೇಳಿದರು.ಇಲ್ಲಿನ ಗಾಂಧಿವೃತ್ತದ ಸಮೀಪದ ನೂತನ ಕಟ್ಟಡದಲ್ಲಿ ನಡೆದ ಕಾರ್ಪೊರೇಷನ್ ಬ್ಯಾಂಕಿನ ಶಾಖೆ ಪ್ರಾರಂಭೋತ್ಸವದಲ್ಲಿ ಮಾತನಾಡಿದರು.1945 ರಿಂದಲೂ ಗ್ರಾಹಕರ ಸೇವೆಯಲ್ಲಿ ಬ್ಯಾಂಕ್ ತೊಡಗಿದೆ. ನಗರ ಶಾಖೆ ಹೊಂದರಲ್ಲೇ 32 ಕೋಟಿ ರೂಗಳಷ್ಟು ಠೇವಣಿ ಹೊಂದಿದೆ. ನೂತನ ಕಟ್ಟಡದಲ್ಲಿ ಆರಂಭವಾಗಿರುವ ಬ್ಯಾಂಕ್ ಎಲ್ಲಾ ಆಧುನಿಕ ಸೌಲಭ್ಯಗಳನ್ನು ಹೊಂದಿದ್ದು ಮುಂದಿನ ದಿನಗಳಲ್ಲಿ ಮೊಬೈಲ್ ಬ್ಯಾಂಕಿಂಗ್ ಸೇವೆ ಸೇರಿದಂತೆ ಎಲ್ಲಾ ಸೌಲಭ್ಯಗಳನ್ನು ನೀಡಲಾಗುವುದು ಎಂದು ಹೇಳಿದರು.ಬ್ಯಾಂಕಿನ ನೂತನ ಕಟ್ಟಡದಲ್ಲಿನ ಶಾಖೆಯನ್ನು ದೇವರಾಜ ಅರಸು ವಿದ್ಯಾ ಸಂಸ್ಥೆ ಕಾರ್ಯದರ್ಶಿ ಜಿ.ಎಚ್.ನಾಗರಾಜ್ ಉದ್ಘಾಟಿಸಿದರು.ಆರ್‌ಎಲ್‌ಜೆಐಟಿ ಆಡಳಿತ ನಿರ್ದೇಶಕ ಜೆ.ನಾಗೇಂದ್ರಸ್ವಾಮಿ, ಜೆ.ರಾಜೇಂದ್ರ, ದೊಡ್ಡಬಳ್ಳಾಪುರ ಕಾರ್ಪೊರೇಷನ್ ಬ್ಯಾಂಕ್ ವ್ಯವಸ್ಥಾಪಕಿ ಗಾಯಿತ್ರಿ, ಕಾರ್ಪೊರೇಷನ್ ಬ್ಯಾಂಕ್ ಎಜಿಎಂ ರಂಗಸ್ವಾಮಿ ಇತರರು ಹಾಜರಿದ್ದರು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry