ಸೋಮವಾರ, ಜನವರಿ 20, 2020
20 °C

ಕಾರ್ಪ್‌ ಬ್ಯಾಂಕ್‌: ಷೇರು ಬಿಡುಗಡೆಗೆ ತೀರ್ಮಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: ಕಾರ್ಪೊರೇಶನ್ ಬ್ಯಾಂಕ್‌ನ ವಿಶೇಷ ಮಹಾಸಭೆ ಸೋಮವಾರ ಇಲ್ಲಿ ನಡೆದಿದ್ದು, ಪ್ರತಿ ಒಂದು ರೂ 10 ಮುಖಬೆಲೆಯ ರೂ 297.64 ಅಧಿಬೆಲೆಯ 1,46,27,486 ಷೇರುಗಳನ್ನು  ಬಿಡುಗಡೆಗೊಳಿಸಲು ಸರ್ವಾನುಮತದಿಂದ ತೀರ್ಮಾನಿ­ಸಲಾಯಿತು.ಕೇಂದ್ರ ಸರ್ಕಾರಕ್ಕೆ ನೀಡುವ ಈ ಷೇರಿನ ನೀಡಿಕೆ ಬೆಲೆ ರೂ 307.64ರಷ್ಟಿದ್ದು, ಈ ಮೂಲಕ ರೂ 450 ಕೋಟಿ ಸಂಗ್ರಹಿಸುವ ಗುರಿ ಇದೆ. ಅರ್ಹ ಸಾಂಸ್ಥಿಕ ಹೂಡಿಕೆದಾ­ರರ ಮೂಲಕ (ಕ್ಯೂಐಪಿ) ರೂ 1 ಸಾವಿರ ಕೋಟಿ ಸಂಗ್ರಹಿಸುವ ಗುರಿಯನ್ನೂ ಇಟ್ಟುಕೊಳ್ಳಲಾಗಿದೆ. ಬ್ಯಾಂಕ್‌ನ ಸಿಎಂಡಿ ಎಸ್‌.ಆರ್‌.ಬನ್ಸಲ್‌ ಅಧ್ಯಕ್ಷತೆಯಲ್ಲಿ ಈ ಸಭೆ ನಡೆಯಿತು.

ಪ್ರತಿಕ್ರಿಯಿಸಿ (+)