ಕಾರ್ಪ್ ಬ್ಯಾಂಕ್‌ಗೆ ತಂತ್ರಜ್ಞಾನ ಪ್ರಶಸ್ತಿ

7

ಕಾರ್ಪ್ ಬ್ಯಾಂಕ್‌ಗೆ ತಂತ್ರಜ್ಞಾನ ಪ್ರಶಸ್ತಿ

Published:
Updated:
ಕಾರ್ಪ್ ಬ್ಯಾಂಕ್‌ಗೆ ತಂತ್ರಜ್ಞಾನ ಪ್ರಶಸ್ತಿ

ಬೆಂಗಳೂರು: ರಾಷ್ಟ್ರೀಕೃತ ಕಾರ್ಪೋರೇಷನ್ ಬ್ಯಾಂಕ್ ಆನ್‌ಲೈನ್ ಬ್ಯಾಂಕಿಂಗ್, ಹಣಕಾಸು ಸೇರ್ಪಡೆ, ತರಬೇತಿ ಮತ್ತು ಇ-ಕಲಿಕೆ ವಿಭಾಗದಲ್ಲಿ 2010ನೇ ಸಾಲಿನಲ್ಲಿ ತಂತ್ರಜ್ಞಾನ ಅಳವಡಿಕೆಗೆ ಸಂಬಂಧಿಸಿದಂತೆ ಪ್ರಶಸ್ತಿಗೆ ಭಾಜನವಾಗಿದೆ.

ಭಾರತೀಯ ಬ್ಯಾಂಕ್‌ಗಳ ಸಂಘವು (ಐಬಿಎ) ನೀಡುವ ಬ್ಯಾಂಕಿಂಗ್ ತಂತ್ರಜ್ಞಾನ  ಪ್ರಶಸ್ತಿಗೆ, ರಾಷ್ಟ್ರೀಕೃತ ಬ್ಯಾಂಕ್‌ಗಳ ಪೈಕಿ ಕಾರ್ಪೊರೇಷನ್ ಬ್ಯಾಂಕ್ ಮೂರು ವಿಭಾಗದಲ್ಲಿ ಪ್ರಶಸ್ತಿ ಪಡೆದುಕೊಂಡಿದೆ.  ನಗರ ಪ್ರದೇಶಗಳ ಬಡವರಿಗೆ ಬ್ಯಾಂಕಿಂಗ್ ಸೌಲಭ್ಯ ಕಲ್ಪಿಸಲು ಬ್ಯಾಂಕ್ ವಿನೂತನ ತಂತ್ರಜ್ಞಾನ ಅಳವಡಿಸಿಕೊಂಡಿದೆ. ಭಾರತ್ ಪೆಟ್ರೋಲಿಯಂನ ಆಯ್ದ ಪೆಟ್ರೋಲ್ ಬಂಕ್‌ಗಳಲ್ಲಿ ‘ಶಾಖೆರಹಿತ ಬ್ಯಾಂಕಿಂಗ್’ ಸೇವೆ ಒದಗಿಸಲಾಗುತ್ತಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry