ಕಾರ್ಪ್ ಬ್ಯಾಂಕ್: ರೂ 402 ಕೋಟಿ ಲಾಭ

7

ಕಾರ್ಪ್ ಬ್ಯಾಂಕ್: ರೂ 402 ಕೋಟಿ ಲಾಭ

Published:
Updated:

ಮಂಗಳೂರು:  ಸರ್ಕಾರಿ ಸ್ವಾಮ್ಯದ ಕಾರ್ಪೊರೇಷನ್ ಬ್ಯಾಂಕ್ ಡಿಸೆಂಬರ್ 31ಕ್ಕೆ ಕೊನೆಗೊಂಡ ಮೂರನೇ ತ್ರೈಮಾಸಿಕ ಅವಧಿಯಲ್ಲಿ ರೂ 402 ಕೋಟಿಗಳಷ್ಟು ನಿವ್ವಳ ಲಾಭ ಗಳಿಸಿದ್ದು, ಕಳೆದ ವರ್ಷದ ಇದೇ ಅವಧಿಯಲ್ಲಿ ಗಳಿಸಿದ ನಿವ್ವಳ ಲಾಭಕ್ಕಿಂತ (ರೂ382  ಕೋಟಿ) ಶೇ 5.2ರಷ್ಟು ಅಧಿಕವಾಗಿದೆ.ಪ್ರಸಕ್ತ ಹಣಕಾಸು ವರ್ಷದ 9 ತಿಂಗಳಲ್ಲಿ ಬ್ಯಾಂಕ್ ರೂ 1,155 ಕೋಟಿ ಗಳಷ್ಟು ನಿವ್ವಳ ಲಾಭ ಗಳಿಸಿದ್ದು, ಇದು ಕಳೆದ ವರ್ಷದ ಇದೇ ಅವಧಿಗಿಂತ (ರೂ 1068 ಕೋಟಿ) ಶೇ 8ರಷ್ಟು ಅಧಿಕವಾಗಿದೆ. ಈ ಅವಧಿಯಲ್ಲಿ ಬ್ಯಾಂಕ್ ರೂ 2,18,985 ಕೋಟಿಗಳಷ್ಟು ವ್ಯವಹಾರ ನಡೆಸಿದೆ. ಇದು  ಕಳೆದ ವರ್ಷದ ಇದೇ ಅವಧಿಗಿಂತ ಶೇ 28.5ರಷ್ಟು ಅಧಿಕವಾಗಿದೆ ಎಂದು ಬ್ಯಾಂಕ್‌ನ ಅಧ್ಯಕ್ಷ ಅಜಯ್ ಕುಮಾರ್ ಅವರು ಗುರುವಾರ ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಪ್ರಕಟಿಸಿದರು.ಬ್ಯಾಂಕ್‌ನ ಠೇವಣಿ ಕಳೆದ ಬಾರಿಯ ರೂ 98,526 ಕೋಟಿಗಳಿಂದ ರೂ 1,26,607 ಕೋಟಿಗಳಿಗೆ (ಶೇ 28.5) ಹೆಚ್ಚಳವಾಗಿದೆ. ಸಾಲ ನೀಡಿಕೆ ಪ್ರಮಾಣ ಕಳೆದ ಬಾರಿಯ ರೂ 71,924 ಕೋಟಿಗಳಿಂದ ರೂ 92,378 ಕೋಟಿ ಗಳಿಗೆ (ಶೇ 28.4) ತಲುಪಿದೆ.  ಸಾಲ-ಠೇವಣಿ ಅನುಪಾತ ಶೇ 73ರಷ್ಟಿದೆ. ಅನುತ್ಪಾದಕ ಆಸ್ತಿಯ ಪ್ರಮಾಣ ಶೇ 0.93ರಷ್ಟಿದೆ ಎಂದು  ವಿವರ ನೀಡಿದರು.ಬ್ಯಾಂಕ್ ಶಾಖೆಗಳ ಸಂಖ್ಯೆ 1431ಕ್ಕೆ ತಲುಪಿದ್ದರೆ, ಎಟಿಎಂಗಳ ಸಂಖ್ಯೆ 1262ಕ್ಕೆ ಏರಿದೆ. ಎಲ್ಲರನ್ನೂ ಬ್ಯಾಂಕಿಂಗ್ ತೆಕ್ಕೆಗೆ ತರುವ ಪ್ರಯತ್ನದ ಅಂಗವಾಗಿ ಸ್ಥಾಪಿಸಲಾಗಿರುವ ಗ್ರಾಮೀಣ ವಿಕಾಸ ಕೇಂದ್ರಗಳ ಸಂಖ್ಯೆ 2625ಕ್ಕೆ ಏರಿಕೆಯಾಗಿದೆ ಎಂದರು. ಬ್ಯಾಂಕ್‌ನ ಕಾರ್ಯನಿರ್ವಾಹಕ ನಿರ್ದೇಶಕ ಅಶ್ವಿನಿ ಕುಮಾರ್ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry