ಕಾರ್ಪ್ ಬ್ಯಾಂಕ್: ಶೇ 25ರಷ್ಟು ಲಾಭ

7

ಕಾರ್ಪ್ ಬ್ಯಾಂಕ್: ಶೇ 25ರಷ್ಟು ಲಾಭ

Published:
Updated:

ಬೆಂಗಳೂರು: ಕಳೆದ ವರ್ಷಕ್ಕೆ ಹೋಲಿಸಿದರೆ ಪ್ರಸಕ್ತ ಸಾಲಿನ ಮೂರನೆಯ ತ್ರೈಮಾಸಿಕ ಅವಧಿಯಲ್ಲಿ ಕಾರ್ಪೊರೇಷನ್ ಬ್ಯಾಂಕ್ ನಿವ್ವಳ ಲಾಭದಲ್ಲಿ ಶೇಕಡ 25.4ರಷ್ಟು ಪ್ರಗತಿ ದಾಖಲಿಸಿದೆ. ರೂ. 305 ಕೋಟಿ ಇದ್ದ ಬ್ಯಾಂಕಿನ ವರಮಾನ ್ಙ 382.42 ಕೋಟಿಗೆ ಏರಿದೆ ಎಂದು  ಬ್ಯಾಂಕಿನ ವ್ಯವಸ್ಥಾಪಕ  ನಿರ್ದೇಶಕ ರಾಮನಾಥ್ ಪ್ರದೀಪ್  ತಿಳಿಸಿದರು.ಬ್ಯಾಂಕಿನ ಮೂರನೆ ತ್ರೈಮಾಸಿಕ ಫಲಿತಾಂಶವನ್ನು ಪ್ರಕಟಿಸಿ ಮಾತನಾಡಿದ ಅವರು, ಡಿಸೆಂಬರ್ 2010ಕ್ಕೆ ಕೊನೆಗೊಂಡ ತ್ರೈಮಾಸಿಕ ಅವಧಿಯಲ್ಲಿ ಬ್ಯಾಂಕಿನ ನಿರ್ವಹಣಾ ಲಾಭ ಶೇ 37ರಷ್ಟು ಏರಿಕೆ ಕಂಡಿದೆ. ಇದು ರೂ.537.86ಕೋಟಿಯಿಂದ ರೂ.736.96 ಕೋಟಿಗೆ ಏರಿದೆ. ನಿವ್ವಳ  ತೆರಿಗೆ  ವರಮಾನ (ಎನ್‌ಐಐ)          ರೂ.842.39  ಕೋಟಿಗೆ ಏರುವ ಮೂಲಕ ಶೇ 40.53ರಷ್ಟು ಪ್ರಗತಿ ಕಂಡಿದೆ ಎಂದು ಹೇಳಿದರು. ಕಳೆದ ಮೂರು ತ್ರೈಮಾಸಿಕ ಅವಧಿಗಳಲ್ಲಿ  ಬ್ಯಾಂಕಿನ ನಿವ್ವಳ ಲಾಭ ರೂ. 857.92 ಕೋಟಿಯಿಂದ ರೂ.1067.94 ಕೋಟಿಗೆ ಏರುವ ಮೂಲಕ ವರ್ಷದಿಂದ ವರ್ಷಕ್ಕೆ ಶೇ 24.38ರಷ್ಟು ಪ್ರಗತಿ ದಾಖಲಿಸಿದೆ ಎಂದು ರಾಮನಾಥ್ ತಿಳಿಸಿದರು. ‘ಅತ್ಯುತ್ತಮ ಹಣಕಾಸು ಸಾಧನೆಗಾಗಿ ಬ್ಯಾಂಕಿಗೆ 2011ರ ‘ಸ್ಕಾಚ್’ ಹಣಕಾಸು ಪ್ರಶಸ್ತಿ ಲಭಿಸಿದೆ. ಕಳೆದ 12 ತಿಂಗಳಲ್ಲಿ 13,59,416 ಹೊಸ ಖಾತೆಗಳನ್ನು ಹೊಂದಲಾಗಿದೆ ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry