ಶುಕ್ರವಾರ, ಫೆಬ್ರವರಿ 26, 2021
31 °C

ಕಾರ್ಮಿಕರಿಗಿಲ್ಲದ ಭದ್ರತೆ: ಕಳವಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾರ್ಮಿಕರಿಗಿಲ್ಲದ ಭದ್ರತೆ: ಕಳವಳ

ಶನಿವಾರಸಂತೆ: ಇಲ್ಲಿಯ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಲ್ಲಿ ನೂತನವಾಗಿ ನಿರ್ಮಿಸಲಾಗಿರುವ 40 ಅಡಿ ಎತ್ತರದ ಹೈಮಾಸ್ಟ್ ದೀಪ ಇನ್ನೂ ಉದ್ಘಾಟನೆಗೊಂಡಿಲ್ಲವಾದರೂ ಇತ್ತೀಚೆಗೆ ಆಕರ್ಷಣೆಯ ಕೇಂದ್ರ ಬಿಂದುವಾಗಿತ್ತು.ವೃತ್ತದಲ್ಲಿದ್ದ ಜನ ಬೆರಗಾಗಿ ದೀಪದ ತುದಿಯನ್ನೇ ನೋಡುತ್ತ ನಿಂತಿದ್ದರು. ಕಾರಣ ಕಾರ್ಮಿಕನೊಬ್ಬ ಯಾವುದೇ ರೀತಿಯ ರಕ್ಷಣಾ ಸಲಕರಣೆಗಳಿಲ್ಲದೇ ದೀಪದ ಕಂಬವನ್ನೇರಿ ತುದಿಯಲ್ಲಿ ಕುಳಿತು ದೀಪಗಳನ್ನು ಅಳವಡಿಸಿ, ಕೇಬಲ್ ಸಂಪರ್ಕ ಕಲ್ಪಿಸುವ ಕಾರ್ಯದಲ್ಲಿ ನಿರತನಾಗಿದ್ದ. ಆ ಕಾರ್ಮಿಕ ಕೆಳಗಿಳಿದು ಬರುವತನಕ ಜನ ಉಸಿರು ಬಿಗಿ ಹಿಡಿದು ನೋಡುತ್ತ ನಿಂತಿದ್ದರು. ಕಾರ್ಮಿಕನ ಜೀವ ರಕ್ಷಣೆಗೆ ಯಾವುದೇ ಮುಂಜಾಗೃತ ಕ್ರಮವೂ ಇಲ್ಲದಿರುವ ಬಗ್ಗೆ ಸಾರ್ವಜನಿಕರು ಕಳವಳ ವ್ಯಕ್ತಪಡಿಸಿದರು.ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ಅವರ ಅನುದಾನದಲ್ಲಿ ಸುಮಾರು 3 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಈ ಹೈಮಾಸ್ಟ್ ದೀಪಕ್ಕೆ ಮಂಗಳೂರಿನ ಸಂಪತ್ ಕುಮಾರ್ ಗುತ್ತಿಗೆದಾರರು. ಹೈಮಾಸ್ಟ್ ದೀಪ ಕಾರ್ಯಾರಂಭ ಮಾಡಲು ಗ್ರಾಮ ಪಂಚಾಯಿತಿ ವಿದ್ಯುತ್ ಇಲಾಖೆಗೆ ಠೇವಣಿ ಇಡಬೇಕಾಗಿದೆ. ಆನಂತರವಷ್ಟೆ ಹೈಮಾಸ್ಟ್ ಉದ್ಘಾಟನೆಗೊಳ್ಳಲಿದೆ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.