ಕಾರ್ಮಿಕರಿಗೆ ಮುಕ್ತಿ

7

ಕಾರ್ಮಿಕರಿಗೆ ಮುಕ್ತಿ

Published:
Updated:
ಕಾರ್ಮಿಕರಿಗೆ ಮುಕ್ತಿ

ನೆಲಮಂಗಲ: ತಾಲ್ಲೂಕಿನ ಟಿ.ಬೇಗೂರು ಸಮೀಪದ ಅಲ್ಲಾರಳಸಂದ್ರದ ಖಾಸಗಿ ಇಟ್ಟಿಗೆ ಕಾರ್ಖಾನೆಯಲ್ಲಿ ಬಲವಂತದಿಂದ ಕೆಲಸ ಮಾಡಿಸಲಾಗುತ್ತಿದೆ ಎಂಬ ಬೆಂಗಳೂರಿನ ಸ್ವಯಂ ಸೇವಾ ಸಂಸ್ಥೆಯೊಂದರ ದೂರಿನ ಮೇರೆಗೆ ತಹಶೀಲ್ದಾರ್ ಅನೀಲ್‌ಕುಮಾರ್ ಕಾರ್ಖಾನೆ ಮೇಲೆ ದಾಳಿ ನಡೆಸಿ ಕಾರ್ಮಿಕರನ್ನು ಮುಕ್ತಗೊಳಿಸಿ ಸ್ವಯಂ ಸೇವಾ ಸಂಸ್ಥೆ ವಶಕ್ಕೆ  ಹಸ್ತಾಂತರಿಸಿದ್ದಾರೆ.ಒಡಿಶಾ ಮೂಲದ 6 ಕುಟುಂಬಗಳ 18 ಸದಸ್ಯರು ಇಟ್ಟಿಗೆ ಕಾರ್ಖಾನೆಯಲ್ಲಿ ಬೆಳಗ್ಗೆ 6ರಿಂದ ಸಂಜೆ 7ರವರೆಗೆ ಕಾರ್ಮಿಕರಾಗಿ ಕೆಲಸ ನಿರ್ವಹಿಸುತ್ತಿದ್ದರು. ಕಾರ್ಖಾನೆಯ ಮಾಲಿಕ ಮಧ್ಯವರ್ತಿಗೆ ರೂ.1.40 ಲಕ್ಷ ನೀಡಿ ಕಾರ್ಮಿಕರನ್ನು ಕರೆಸಿಕೊಂಡು ಬಲವಂತದಿಂದ ಕೆಲಸ ಮಾಡಿಸುತ್ತಿದ್ದಾರೆ ಎಂದು ಸ್ವಯಂ ಸೇವಾ ಸಂಸ್ಥೆಯವರು ದೂರಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry