ಗುರುವಾರ , ಮೇ 19, 2022
20 °C

ಕಾರ್ಮಿಕರಿಗೆ ವೇತನ ವಂಚನೆ: ಧರಣಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪಾಂಡವಪುರ: ಕಾವೇರಿ ನೀರಾವರಿ ನಿಗಮದ ಎಂಜಿನಿಯರ್ ಶ್ರೀಕಂಠಪ್ಪ, ನೀರುಗಂಟಿ ನೌಕರರಿಗೆ ನೀಡುವ ವೇತನ ವಂಚಿಸಿದ್ದಾರೆ ಎಂದು ನೀರು ಗಂಟಿ ನೌಕರರು ಪಟ್ಟಣದ ವಿಶ್ವೇಶ್ವರಯ್ಯ ನಾಲಾ ಉಪವಿಭಾಗ ಎಂಜಿನಿಯರ್ ಕಚೇರಿಗೆ ಬೀಗ ಜಡಿದು ಮಂಗಳವಾರ ಪ್ರತಿಭಟಿಸಿದರು. ನೀರುಗಂಟಿ ನೌಕರರು ಪಟ್ಟಣ ದಲ್ಲಿರುವ ನಂ.3 ವಿ.ಸಿ ಉಪವಿಭಾಗ ಕಚೇರಿ ಮುಂದೆ ಜಮಾಯಿಸಿ ಕಚೇರಿಗೆ ಬೀಗ ಜಡಿದು ಧರಣಿ ನಡೆಸಿ ಎಂಜಿನಿಯರ್ ಶ್ರೀಕಂಠಪ್ಪ ವಿರುದ್ಧ ಘೋಷಣೆ ಕೂಗಿದರು.ವಿ.ಸಿ ಉಪವಿಭಾಗಕ್ಕೆ ಸೇರಿದಂತೆ 35 ಮಂದಿ ವಿ.ಸಿ, ಗಿರಿಜಾ ಹಾಗೂ ರಾಮಸ್ವಾಮಿ ನಾಲೆಗೆ ಸಂಬಂಧ ಪಟ್ಟಂತೆ ಹಲವಾರು ವರ್ಷಗಳಿಂದ ದಿನಗೂಲಿ ನೌಕರರಾಗಿ ಕರ್ತವ್ಯ ನಿರ್ವಹಿಸುತ್ತಿದ್ದೇವೆ. ಪ್ರತಿ ತಿಂಗಳು ಓರ್ವ ನೌಕರನಿಗೆ 4.250ಸಾವಿರೂ ನಿಗದಿಯಾಗಿದೆ. ಒಂದು ವರ್ಷದಿಂದ ಇಲ್ಲಿಯ ಎಂಜಿನಿಯರ್ ಶ್ರೀಕಂಠಪ್ಪ ಉದ್ದೇಶಪೂರ್ವಕವಾಗಿ 35ಮಂದಿ ನೀರುಗಂಟಿ ನೌಕರರಿಗೆ 1ಸಾವಿರರೂ ಕಡಿತಗೊಳಿಸಿ 3.250ರೂ ನೀಡು ತ್ತಿದ್ದಾರೆ ಎಂದು ಆರೋಪಿಸಿದರು.ಒಂದು ವರ್ಷದಿಂದ ನೌಕರರಿಗೆ ನೀಡಬೇಕಾದ ಸಂಬಳದಲ್ಲಿ 4ಲಕ್ಷ ರೂಗಳಿಗೂ ಮಿಗಿಲಾಗಿ ಹಣ ಗುಳುಂ ಮಾಡಿ ನಮಗೆ ವಂಚನೆ ಮಾಡಿದ್ದಾರೆ. ಕಷ್ಟಪಟ್ಟು ಕೆಲಸ ಮಾಡಿದ ನಮಗೆ ಸರಿಯಾದ ವೇತನ ನೀಡಿಲ್ಲ. ಹಲವು ಬಾರಿ ಮನವಿ ಮಾಡಿದರೂ, ಮನವಿಗೆ ಓಗೋಡದೆ ನಮ್ಮನ್ನು ನಿರ್ಲಕ್ಷಿಸಿದ್ದಾರೆ. ಆದ್ದರಿಂದ ಒಂದು ವರ್ಷದ ಬಾಕಿ ವೇತನ ನೀಡಬೇಕು. ಸರಿಯಾಗಿ ಸಂಪೂರ್ಣ ವೇತನ ನೀಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.ಮೂರು ಗಂಟೆಕಾಲ ಪ್ರತಿಭಟನೆ ನಡೆಸಿದ ನಂತರ ಶುಕ್ರವಾರ ರೈತರ ಸಹಕಾರದೊಂದಿಗೆ ಪ್ರತಿಭಟನೆ ನಡೆಸಲು ಸಾಮೂಹಿಕವಾಗಿ ತೀರ್ಮಾನಿಸಿ ಮಂಗಳವಾರದ ಪ್ರತಿಭಟನೆ ಹಿಂತೆಗೆದು ಕೊಂಡರು. ಪ್ರತಿಭಟನೆಯಲ್ಲಿ ಸಂಘದ ಜಿಲ್ಲಾ ಉಪಾಧ್ಯಕ್ಷ ಗಿರಿಗೌಡ, ಸಹ ಕಾರ್ಯದರ್ಶಿ ಬೋರೇಗೌಡ, ವೈರ ಮುಡಿ, ಕುಮಾರ್, ಕೆಂಪೇಗೌಡ, ರಾಮಕೃಷ್ಣ, ಹಾರೋಹಳ್ಳಿ ನಾರಾ ಯಣಗೌಡ ನೇತೃತ್ವ ವಹಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.