ಕಾರ್ಮಿಕರಿಗೆ ಸ್ವಾಸ್ಥ್ಯ ಬಿಮಾ ಯೋಜನೆ

7

ಕಾರ್ಮಿಕರಿಗೆ ಸ್ವಾಸ್ಥ್ಯ ಬಿಮಾ ಯೋಜನೆ

Published:
Updated:

ಗದಗ: ರಾಷ್ಟ್ರೀಯ ಸ್ವಾಸ್ಥ್ಯ ಭೀಮಾ ಯೋಜನೆ ಫಲಾನುಭವಿ ಕಾರ್ಮಿಕ ಕುಟುಂಬದ ಸದಸ್ಯರಿಗೆ ಆರೋಗ್ಯ ವಿಮೆ ಸೌಲಭ್ಯ ಒದಗಿಸಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಒಂದು ಉತ್ಕೃಷ್ಟ ಯೋಜನೆಯಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಜಂಟಿ ಸಹಯೋಗದಲ್ಲಿ ವಿಮಾ ಹಾಗೂ ಟಿಪಿಎ ಕಂಪೆನಿಗಳ ಮೂಲಕ ಉಚಿತ ಆರೋಗ್ಯ ವಿಮೆ ಸೌಲಭ್ಯ ಒದಗಿಸುವುದು ಇದರ ಉದ್ದೇಶವಾಗಿದೆ ಎಂದು ಜಿಲ್ಲಾ ಕಾರ್ಮಿಕ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಈ ಯೋಜನೆಯಲ್ಲಿ ಫಲಾನುಭವಿ ಕುಟುಂಬದ ಮುಖ್ಯಸ್ಥ  ಹೆಂಡತಿ, ಗಂಡ, ಮಕ್ಕಳು ಹಾಗೂ ಅವಲಂಬಿತರು ಸೇರಿದಂತೆ ಒಟ್ಟು 5 ಮಂದಿ ವರ್ಷಕ್ಕೆ 30 ಸಾವಿರವರೆಗೆ ಚಿಕಿತ್ಸಾ ವೆಚ್ಚವನ್ನು ನಿಗದಿತ ಆಸ್ಪತ್ರೆಗಳಲ್ಲಿ ಒಳರೋಗಿಯಾಗಿ ಉಚಿತವಾಗಿ ನಗದು ನೀಡದೆ ಪಡೆಯಬಹುದಾಗಿದೆ.ಯೋಜನೆಯಡಿ ಫಲಾನುಭವಿಗಳಾಗಿ ನೊಂದಾಯಿತರಾದವರು ಜಿಲ್ಲೆಯ ಗದುಗಿನ ಜಿಲ್ಲಾ ಆಸ್ಪತ್ರೆ, ಮುಳಗುಂದ ರಸ್ತೆಯಲ್ಲಿನ ಶೋಭಾ ಆಸ್ಪತ್ರೆ, ಕಸ್ತೂರಿ ಬಾ ಆಸ್ಪತ್ರೆ,  ಜಿಲ್ಲಾ ಕ್ರೀಡಾಂಗಣ ಹತ್ತಿರದ ಮಾರುತಿ ನೇತ್ರಾಲಯ, ರೋಣದ ಡಾ. ಮಲ್ಲಪ್ಪ ಮೆಟರ್ನಿಟಿ ನರ್ಸಿಂಗ್ ಹೋಮ್, ಲಕ್ಷ್ಮೇಶ್ವರದ ಸಮುದಾಯ ಆರೋಗ್ಯ ಕೇಂದ್ರ, ಗಜೇಂದ್ರಗಡದ ಸಮುದಾಯ ಆರೋಗ್ಯ ಕೇಂದ್ರ, ಶಿರಹಟ್ಟಿಯ ತಾಲ್ಲೂಕು ಆಸ್ಪತ್ರೆ, ರೋಣದ ತಾಲ್ಲೂಕು ಆಸ್ಪತ್ರೆ, ನರಗುಂದದ ತಾಲ್ಲೂಕು ಆಸ್ಪತ್ರೆ, ಮುಂಡರಗಿಯ ತಾಲ್ಲೂಕು ಆಸ್ಪತ್ರೆ, ಹುಲಕೋಟಿಯ ಕೆ.ಎಚ್. ಪಾಟೀಲ ಹಾಸ್ಪಿಟಲ್ ಮತ್ತು ರಿಸರ್ಚ್ ಸೆಂಟರ್, ರೋಣದ ರಾಜೀವಗಾಂಧಿ ಎಜುಕೇಷನ್ ಸೊಸೈಟಿ, ನರೇಗಲ್‌ನ ಅನಿಲ ಕಾಳೆ ಆಶೀರ್ವಾದ ನರ್ಸಿಂಗ್ ಹೋಮ್ ಆಸ್ಪತ್ರೆಗಳಲ್ಲಿ ಯೋಜನೆಯ ಆರೋಗ್ಯ ವಿಮೆಯ ಸೌಲಭ್ಯ ಪಡೆಯಬಹುದು.ಮಾಹಿತಿಗೆ ವೆಬ್‌ಸೈಟ್ ವಿಳಾಸ www.rsby.gov.nic.in  ಮೂಲಕ ಹಾಗೂ ಗದಗ ಜಿಲ್ಲಾ ಆಡಳಿತ ಭವನದ ಕೊಠಡಿ ಸಂಖ್ಯೆ 214 ರ ಜಿಲ್ಲಾ ಕಿಯೋಸಕ್ ಸೆಂಟರ್‌ನಲ್ಲಿ ಮಾಹಿತಿ ಪಡೆಯಬಹುದು.ಸನ್ಮಾನ

ರಾಣೆಬೆನ್ನೂರು:
ರೈತ ಮಹಿಳೆ ರಾಜೇಶ್ವರಿ ಪಾಟೀಲ ನಗರದ ಕರ್ನಾಟಕ ಸಂಘದ ಆಲೂರು ವೆಂಕಟರಾವ್ ರಂಗಮಂದಿರ ದಲ್ಲಿ ಏರ್ಪಡಿಸಿದ್ದ 75ನೆಯ ವರ್ಷದ ನಾಡಹಬ್ಬದ ಎರಡನೆ ದಿನ ಸನ್ಮಾನ ಸ್ವೀಕರಿಸಿ ಮಾತನಾಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry