ಶುಕ್ರವಾರ, ಏಪ್ರಿಲ್ 16, 2021
31 °C

ಕಾರ್ಮಿಕರ ಗಲಭೆ ಪ್ರಕರಣ: ಸಿಬಿಐ ತನಿಖೆಗೆ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಾನೇಸರ (ಪಿಟಿಐ): ಮಾರುತಿ ಸುಜುಕಿ ಕಂಪೆನಿಯ `ಮಾನೇಸರ್ ಘಟಕ~ದಲ್ಲಿನ ಕಾರ್ಮಿಕ ಗಲಭೆಗೆ ಸಂಬಂಧಿಸಿದಂತೆ `ಸಿಬಿಐ~ ತನಿಖೆ ಅಗತ್ಯವಿದೆ ಎಂದು  ಸುತ್ತಲಿನ 100ಕ್ಕೂ ಹೆಚ್ಚು ಗ್ರಾಮಗಳ ಜನತೆ ಆಗ್ರಹಿಸಿದ್ದಾರೆ.ಇಲ್ಲಿಗೆ ಸಮೀಪದ ಡಾನ ಗ್ರಾಮದಲ್ಲಿ ಸೋಮವಾರ `ಮಹಾ ಪಂಚಾಯಿತಿ~ ನಡೆಸಿದ ಅಲಿಯಾರ್, ಕಸಾನ್, ಮಾನೇಸರ, ಕನ್ಕರೊಲ, ಬಂಗರೊಲ, ಮಹಮ್ಮದಪುರ, ಫಾರೂಕ್ ನಗರ ಮೊದಲಾದೆಡೆಯ ಗ್ರಾಮಸ್ಥರು ಸಭೆಯಲ್ಲಿ ಒಮ್ಮತದಿಂದ ಈ ನಿರ್ಧಾರ ಕೈಗೊಂಡರು.`ಗಲಭೆ ಕುರಿತು ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡದಲ್ಲಿ (ಎಸ್‌ಐಟಿ) ನಮಗೆ ನಂಬಿಕೆ ಇಲ್ಲ. ಒಟ್ಟಾರೆ ಪ್ರಕರಣದ ಕುರಿತು `ಸಿಬಿಐ~ ತನಿಖೆ ಆಗಬೇಕು~ ಎಂದು `ಮಹಾ ಪಂಚಾಯಿತಿ~ಯಲ್ಲಿ ಅಧ್ಯಕ್ಷತೆ ವಹಿಸಿದ್ದ  ಗುಡಗಾಂವ್ ಜಿಲ್ಲಾ ಪರಿಷತ್ ಮಾಜಿ ಅಧ್ಯಕ್ಷ ರಾವ್ ಅಭಯ್ ಯಾದವ್ ಒತ್ತಾಯಿಸಿದರು.`ಗಲಭೆಗೆ ಕಾರಣರಾದವರಿಗೆ ಶಿಕ್ಷೆ  ಆಗಬೇಕು. ಇದಕ್ಕೆ ಸಂಬಂಧಿಸಿದಂತೆ ಮಹಾ ಪಂಚಾಯಿತಿ ಆರು ಪ್ರಮುಖ ನಿರ್ಣಯಗಳನ್ನು ಕೈಗೊಂಡಿದೆ~ ಎಂದು ಯಾದವ್ ಹೇಳಿದರು. ಮಾರುತಿ ಕಾರ್ಮಿಕರ ಗಲಭೆ ಕುರಿತು ತನಿಖೆ ನಡೆಸಲು ಕಳೆದ ವಾರ ಹರಿಯಾಣ ಸರ್ಕಾರ ಸಹಾಯಕ ಪೊಲೀಸ್ ಆಯುಕ್ತ ರವೀಂದ್ರ ಥೋಮರ್ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ ರಚಿಸಿತ್ತು.ವಿಶೇಷ ಸರ್ಕಾರಿ ಅಭಿಯೋಜಕ: ಜತೆಗೆ ಕಾರ್ಮಿಕ ಗಲಭೆ ಪ್ರಕರಣದ ವಿಚಾರಣೆಗೆ ಖ್ಯಾತ ವಕೀಲರಾದ ಕೆ.ಪಿ.ಎಸ್ ತುಳಸಿ ಅವರನ್ನು ವಿಶೇಷ ಸರ್ಕಾರಿ ಅಭಿಯೋಜಕರನ್ನಾಗಿ ಸೋಮವಾರ ನೇಮಿಸಿದೆ.`ಸೂಕ್ತ ಭದ್ರತೆ ಇರಲಿಲ್ಲ~

ನವದೆಹಲಿ(ಪಿಟಿಐ):
`ಮಾನೇಸರ್ ಘಟಕದಲ್ಲಿ ಸೂಕ್ತ ಭದ್ರತಾ ವ್ಯವಸ್ಥೆ ಇದ್ದಿದ್ದರೆ ಜುಲೈ 18ರ ಘಟನೆ ನಡೆಯುತ್ತಿರಲಿಲ್ಲ~ ಎಂದು ಕಾರ್ಮಿಕ ಗಲಭೆಯಲ್ಲಿ ಹತರಾದ ಕಂಪೆನಿಯ ಮಾನವ ಸಂಪನ್ಮೂಲ ವಿಭಾಗದ ಪ್ರಧಾನ ವ್ಯವಸ್ಥಾಪಕ ಅವನೀಶ್ ಕುಮಾರ್ ದೇವ್ ಅವರ ಪತ್ನಿ ಸುಪರ್ಣಾ ಪ್ರಸಾದ್ ದೇವ್ ಅಭಿಪ್ರಾಯಪಟ್ಟಿದ್ದಾರೆ.`ಘಟಕದಲ್ಲಿರುವ ಜಾಗೃತ ದಳದ ಸಿಬ್ಬಂದಿಯಾಗಲೀ, ಸುರಕ್ಷತಾ ವಿಭಾಗದವರಾಗಲೀ ಗಲಭೆಯ ತೀವ್ರತೆಯನ್ನು ಮುಂಚಿತವಾಗಿ ಅರಿಯುವಲ್ಲಿ ವಿಫಲರಾಗಿದ್ದಾರೆ. ಇದು ತಮ್ಮ ಪತಿಯ ಹತ್ಯೆಗೆ ಹಾಗೂ   ನೂರಾರು ಮಂದಿ ಗಾಯಗೊಳ್ಳಲು ಕಾರಣವಾಯಿತು. ಘಟಕದೊಳಗೆ ಹಿರಿಯ ಅಧಿಕಾರಿಗಳಿಗೆ ಸೂಕ್ತ ಭದ್ರತೆಯೇ ಇರಲಿಲ್ಲ~ ಎಂದು ಅವರು ಕಣ್ಣೀರಧಾರೆ ನಡುವೆಯೇ ಸುದ್ದಿಗಾರರಿಗೆ ಸೋಮವಾರ ಪ್ರತಿಕ್ರಿಯಿಸಿದ್ದಾರೆ.ಸಿಐಎಸ್‌ಎಫ್ ನೆರವು ಚಿಂತನೆ

ನವದೆಹಲಿ(ಐಎಎನ್‌ಎಸ್):
ಕಾರ್ಮಿಕರ ಗಲಭೆಯ ತೀವ್ರತೆಗೆ ಬೆಚ್ಚಿಬಿದ್ದಿರುವ ಮಾರುತಿ ಸುಜುಕಿ ಇಂಡಿಯ ಕಂಪೆನಿ, ಈಗ ಸಿಬ್ಬಂದಿ ಸುರಕ್ಷತೆ ಮತ್ತು ಭದ್ರತಾ ವ್ಯವಸ್ಥೆಯತ್ತ ಗಮನ ಹರಿಸಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.