ಕಾರ್ಮಿಕರ ಪಾತ್ರ ಮಹತ್ವದ್ದು

7

ಕಾರ್ಮಿಕರ ಪಾತ್ರ ಮಹತ್ವದ್ದು

Published:
Updated:

ಪೀಣ್ಯ ದಾಸರಹಳ್ಳಿ: ಕೈಗಾರಿಕೋದ್ಯಮದ ಬೆಳವಣಿಗೆಯಲ್ಲಿ ಕಾರ್ಮಿಕರ ಪಾತ್ರ ಅಪಾರ. ಮಾಲೀಕರ ನಿರ್ಲಕ್ಷ್ಯ ಸಲ್ಲದು ಎಂದು ಸಾರಿಗೆ ಸಚಿವ ಆರ್.ಅಶೋಕ್ ಸಲಹೆ ಮಾಡಿದರು.ಬಿಜೆಪಿ ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಕಾರ್ಮಿಕ ಮೋರ್ಚಾ ವತಿಯಿಂದ ಹೆಸರಘಟ್ಟ ರಸ್ತೆಯ ತ್ರಿವೇಣಿ ಪಬ್ಲಿಕ್ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಕಾರ್ಮಿಕ ದಿನಾಚರಣೆ ಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಪೀಣ್ಯ ಕೈಗಾರಿಕಾ ಪ್ರದೇಶಕ್ಕೆ ಪ್ರತಿನಿತ್ಯ ಉದ್ಯೋಗವನ್ನರಿಸಿ ಜನ ಬರುತ್ತಾರೆ. ಅವರಿಗೆ ಕಾರ್ಮಿಕ ಸಂಘಗಳು ಸೂಕ್ತ ಸಲಹೆ  ನೀಡಬೇಕು ಎಂದರು.ವರ್ಷವಿಡೀ ದುಡಿದು ದಣಿಯುವ ಕಾರ್ಮಿಕರನ್ನು ಕಾರ್ಮಿಕ ದಿನಾಚರಣೆ ಸಂದರ್ಭದಲ್ಲಾದರೂ ಮಾಲೀಕರು ಗೌರವಿಸುವ ಕೆಲಸ ಮಾಡಿದಲ್ಲಿ ದುಡಿದ ಅವರ ಶ್ರಮಕ್ಕೆ ಗೌರವ ಸಿಕ್ಕಂತಾಗುತ್ತದೆ ಎಂದರು.ಶಾಸಕ ಎಸ್.ಮುನಿರಾಜು, ಬಿಜೆಪಿ ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಟಿ.ಎನ್.ಗಂಗರಾಜು, ಪಾಲಿಕೆ ಸದಸ್ಯರಾದ ಬಿ.ಆರ್. ಚಂದ್ರಶೇಖರ್, ಶಶಿ ಶಿವಕುಮಾರ್, ಎಚ್.ಎನ್.ಗಂಗಾಧರ್, ಮುಖಂಡರಾದ ಅಬ್ಬಿಗೆರೆ ಲೋಕೇಶ್ ತಮ್ಮಣ್ಣ, ಚಿಕ್ಕಬೈಲಪ್ಪ, ಇತರರು ಹಾಜರಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry