ಭಾನುವಾರ, ಏಪ್ರಿಲ್ 18, 2021
33 °C

ಕಾರ್ಮಿಕರ ಪಾಲಿಗೆ ಹೊಸ ಬೆಳಕು

ಪ್ರಜಾವಾಣಿ ವಾರ್ತೆ/ ಕೆ.ಎನ್. ಶ್ರೀಹರ್ಷ Updated:

ಅಕ್ಷರ ಗಾತ್ರ : | |

ಭದ್ರಾವತಿ: ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಹಾಗೂ ಕೈಗಾರಿಕಾ ಮಂತ್ರಿ ಮುರುಗೇಶ್ ನಿರಾಣಿ ಎಂಪಿಎಂ, ವಿಐಎಸ್‌ಎಲ್ ಕಾರ್ಖಾನೆಗೆ ಈಚೆಗೆ ಭೇಟಿ ನೀಡಿದ್ದು, ಕಾರ್ಮಿಕರಲ್ಲಿ ಹೊಸ ಭರವಸೆ ಮೂಡಿಸಿದೆ.ಹಲವು ವರ್ಷಗಳಿಂದ ಆಧುನೀಕರಣ ಪಟ್ಟಿಯೊಂದಿಗೆ ಕಾದುಕುಳಿತ್ತಿದ್ದ ಎಂಪಿಎಂ ಪಾಲಿಗೆ ಒಂದಿಷ್ಟು ಭರವಸೆ ಮಾತುಗಳನ್ನು ಸ್ವತಃ ಸಚಿವದ್ವಯರು ಹೇಳಿದ್ದು ಸಭೆಯಲ್ಲಿದ್ದ ಕಾರ್ಮಿಕ ಮುಖಂಡರಿಗೆ, ಅಧಿಕಾರಿಗಳಿಗೆ ಒಂದಿಷ್ಟು ನೆಮ್ಮದಿ ತಂದಿದೆ ಎನ್ನಲಾಗಿದೆ.ಸಕ್ಕರೆ ವಿಭಾಗ ವಿಸ್ತರಣೆ ಸುಲಭ: ಹಾಲಿ ಎಂಪಿಎಂ ಸಕ್ಕರೆ ಘಟಕ ಪ್ರತಿದಿನ 2.5 ಸಾವಿರ ಟನ್ ಅರೆಯುವಿಕೆ ಸಾಮರ್ಥ್ಯ ಹೊಂದಿದ್ದು, ಅದನ್ನು 5ಸಾವಿರ ಟನ್‌ಗೆ ಹೆಚ್ಚು ಮಾಡುವ ಪ್ರಸ್ತಾವಕ್ಕೆ ಮುರುಗೇಶ್ ನಿರಾಣಿ ನೀಡಿದ ಭರವಸೆ ಮಾತುಗಳು ಅಧಿಕಾರಿಗಳು ಮೂಗಿನ ಮೇಲೆ ಬೆರಳಿಡುವಂತೆ ಮಾಡಿತು.ಈಗಾಗಲೇ, ಇರುವ ಯಂತ್ರಗಳು ಸುಸ್ಥಿಯಲ್ಲಿ, ಆಧುನಿಕತೆ ಹೊಂದಿದೆ. ಇದಕ್ಕೆ ಒಂದಿಷ್ಟು ವಿಸ್ತರಣೆ ಕಾರ್ಯ ಮಾಡಿದರೆ ಅರೆಯುವಿಕೆ ಪ್ರಮಾಣ ಹೆಚ್ಚಾಗುತ್ತದೆ. ಅದಕ್ಕಾಗಿ ಹೊಸ ಬಂಡವಾಳ ಹೂಡುವ ಅಗತ್ಯವಿಲ್ಲ ಎಂದು ನಿರಾಣಿ ಪ್ಲಾಂಟ್ ಭೇಟಿ ನಂತರ ವಿವರಿಸಿದರು.ಸದ್ಯಕ್ಕೆ ಅಂದಾಜು ್ಙ 40 ಕೋಟಿ ವಿಸ್ತರಣೆ ಕಾರ್ಯಕ್ಕೆ ವಿನಿಯೋಗಿಸಿದಲ್ಲಿ ಅರೆಯುವಿಕೆ ಪ್ರಮಾಣ, ವಿದ್ಯುತ್ ಹಾಗೂ ಇನ್ನಿತರ ಸಹ ಉತ್ಪನ್ನಗಳ ತಯಾರಿಕೆ ಸಹ ಹೆಚ್ಚಿಸಬಹುದು ಎಂದು ತಮ್ಮ ಅನುಭವನದ ಮಾತು ಹೇಳಿದರು.ಕಾಗದಕ್ಕೆ ಬೇಕಿದೆ ಅನುದಾನ: ಎಂಪಿಎಂ ಕಾಗದ ಕಾರ್ಖಾನೆ ಯಂತ್ರಗಳು ಸಾಕಷ್ಟು ಹಳೆಯದಾಗಿದ್ದು, ಇದರ ಬದಲಾವಣೆ ಅಗತ್ಯವಿದೆ. ಇದಕ್ಕಾಗಿ ಅಂದಾಜು ್ಙ 1,320 ಕೋಟಿ ವೆಚ್ಚದ ಆಧುನೀಕರಣ ಪ್ರಕ್ರಿಯೆ ನಡೆಯಬೇಕಿದೆ ಎಂಬುದು ಪ್ರಮುಖ ಬೇಡಿಕೆ.ಎಂಪಿಎಂ 24,000 ಹೆಕ್ಟೇರ್ ಅರಣ್ಯ ಭೂಮಿ ಹೊಂದಿದೆ. ಅಲ್ಲಿನ ಸುಮಾರು 70,000 ಟನ್ ಮರದ ಬಳಕೆಯಿಂದ ಕಾಗದ ಉತ್ಪಾದನೆ ನಡಸಿದ್ದು, ಹಳೇ ಯಂತ್ರಗಳಿಂದಾಗಿ ಉತ್ಪಾದನಾ ವೆಚ್ಚ ಹೆಚ್ಚಿದೆ ಅದಕ್ಕಾಗಿ ಆಧುನೀಕರಣ ಆವಶ್ಯವಿದೆ ಎಂಬುದು ಅಧಿಕಾರಿಗಳ ವಿವರಣೆ.ಈ ಕುರಿತು ಕನ್ಸಲ್ಟಿಂಗ್ ಏಜೆನ್ಸಿ ತಯಾರಿಸಿದ ವಿಡಿಯೊ ವೀಕ್ಷಿಸಿದ ಸಚಿವರು, ಕಾರ್ಖಾನೆ ಉತ್ಪಾದನೆ ಸಂಪೂರ್ಣ ಮರದಿಂದ ಅವಲಂಬಿತ ಆಗಿದೆ. ಇದರಲ್ಲಿ ಮಾಡಬೇಕಾದ ಬದಲಾವಣೆ, ಹೊಸ ತಂತ್ರಜ್ಞಾನ, ಹಾಲಿ ಸಿಗುವ ಸೌಲಭ್ಯಗಳ ಸಮರ್ಪಕ ಬಳಕೆ ಕುರಿತು ಚರ್ಚೆ ಮಾಡುವ ಅಗತ್ಯವಿದೆ ಎಂದರು.ಈ ಪ್ಲಾಂಟ್‌ನಲ್ಲಿ ಪವರ್ ಜನರೇಷನ್ ಹೆಚ್ಚು ಮಾಡುವ ಅವಕಾಶವಿದೆ. ಅದರೊಂದಿಗೆ ಎಥನಾಲ್ ಉತ್ಪಾದನೆಯತ್ತ ಸಹ ಕ್ರಮ ಜರುಗಿಸಿದಲ್ಲಿ ಸಂಕಷ್ಟ ನಿವಾರಣೆ ಸಾಧ್ಯವಿದೆ. ಈ ನಿಟ್ಟಿನಲ್ಲಿ ಪ್ರಯತ್ನ ಮಾಡಲು ವಿಶೇಷ ಸಭೆ ಅಗತ್ಯವಿದೆ ಎಂದರು.ಗಣಿ ನೀಡುವ ಭರವಸೆ: ವಿಐಎಸ್‌ಎಲ್ ಕಾರ್ಖಾನೆಗೆ ಭೇಟಿ ನೀಡಿದ್ದ ಸಚಿವದ್ವಯರಿಗೆ, ಮನವಿ ಮಾಡಿದ ಕಾರ್ಮಿಕ ಮುಖಂಡರು ಕಾರ್ಖಾನೆಗೆ ಈಗಾಗಲೇ ಗಣಿ ಮಂಜೂರಿ ಮಾಡಲು ಪ್ರದೇಶ ಗುರುತು ಮಾಡಿದ್ದು, ಅದರಲ್ಲಿ ಒತ್ತುವರಿ ಹೆಚ್ಚಾಗಿದೆ ಎಂದರು.ಇದರೊಂದಿಗೆ ರಮಣದುರ್ಗಾ ಪ್ರದೇಶದಲ್ಲಿ ಮತ್ತಷ್ಟು ಅದಿರು ಜಾಗ ನೀಡಿದಲ್ಲಿ ಅನುಕೂಲ ಆಗಲಿದೆ ಎಂದು ಮನವಿ ಮಾಡಿದರು.ಅದಕ್ಕೆ ಸ್ಪಂದಿಸಿದ ಸಚಿವರು ಸರ್ಕಾರ ಕಾನೂನು ಮಾನದಂಡದ ಪ್ರಕಾರ ಮಂಜೂರಾತಿ ಪ್ರಕ್ರಿಯೆ ನಡೆಸಿದೆ. ಅದರಲ್ಲೂ ಸರ್ಕಾರಿ ಸ್ವಾಮ್ಯದ ಕಾರ್ಖಾನೆ ಉಳಿಸಲು ಶ್ರಮಿಸುತ್ತಿದ್ದೇವೆ ಎಂದರು.ಈ ಎರಡು ಕಾರ್ಖಾನೆ ವಿಷಯಗಳ ಕುರಿತು ಬೆಂಗಳೂರಿನಲ್ಲಿ ನ. 22ರಂದು ಸಭೆ ನಡೆಸಲು ನಿರ್ಧರಿಸಿದ ಸಚಿವರು, ಇದಕ್ಕೆ ಶಾಸಕರು, ಸಂಸದರು, ಕೈಗಾರಿಕೆ, ಹಣಕಾಸು, ವಿಭಾಗದ ಕಾರ್ಯದರ್ಶಿಗಳನ್ನು ಆಹ್ವಾನಿಸುವ ಭರವಸೆ ನೀಡಿದರು.ಒಟ್ಟಿನಲ್ಲಿ ಹಲವು ದಶಕದ ಆಧುನೀಕರಣ ಹಾಗೂ ಗಣಿ ಪ್ರಸ್ತಾವದ ಬೇಡಿಕೆಗೆ ಸರ್ಕಾರ ದೃಢ ಮನಸ್ಸು ಮಾಡುವ ನಿರ್ಧಾರಕ್ಕೆ ಹೆಜ್ಜೆ ಇಟ್ಟಿರುವುದು ಇಲ್ಲಿನ ಕಾರ್ಮಿಕರು, ಅಧಿಕಾರಿಗಳು ಹಾಗೂ ನಾಗರಿಕರ ಪಾಲಿಗೆ ದೀಪಾವಳಿ ಬೆಳಕು ಹೊಸತನ ತುಂಬಿದೆ. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.