ಭಾನುವಾರ, ಮೇ 16, 2021
22 °C

ಕಾರ್ಮಿಕರ ಸಂಖ್ಯೆ ಹೆಚ್ಚಳಕ್ಕೆ ಚಿಂತನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: `ಕರ್ನಾಟಕ ವಿದ್ಯುತ್ ಕಾರ್ಖಾನೆಯ ಕಾರ್ಮಿಕ ಸಿಬ್ಬಂದಿಯ ಸಂಖ್ಯೆಯನ್ನು ಹೆಚ್ಚಿಸುವ ಕುರಿತು ಚಿಂತನೆ ನಡೆಸಲಾಗಿದೆ~ ಎಂದು ಕಾರ್ಖಾನೆಯ ಅಧ್ಯಕ್ಷ ಬಿ.ಪಿ.ವೆಂಕಟ ಮುನಿಯಪ್ಪ ತಿಳಿಸಿದರು.ಕರ್ನಾಟಕ ವಿದ್ಯುತ್ ಕಾರ್ಖಾನೆಯ 2011-12ರಲ್ಲಿ ನಡೆಸಿದ ವಹಿವಾಟು ಮತ್ತು ಲಾಭದ ಕುರಿತು ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಈ ವಿಷಯ ತಿಳಿಸಿದರು.ಸಂಸ್ಥೆಯಲ್ಲಿ 208 ಕಾರ್ಮಿಕರು ಕೇವಲ ಒಂದು ಪಾಳಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಪಾಳಿ ವಿಸ್ತರಣೆ ಮತ್ತು ಕಾರ್ಮಿಕ ಸಿಬ್ಬಂದಿಯ ಹೆಚ್ಚಳ ಮಾಡುವ ಕುರಿತು ಸರ್ಕಾರದೊಂದಿಗೆ ಈಗಾಗಲೇ ಚರ್ಚೆ ನಡೆಸಲಾಗಿದ್ದು, ಮುಂದಿನ ವರ್ಷದಿಂದ ಅನುಷ್ಠಾನಗೊಳ್ಳಲಿದೆ ಎಂದರು.ಪ್ರಸ್ತಕ ಸಾಲಿನಲ್ಲಿ 104.48 ಕೋಟಿ ರೂಪಾಯಿ ವಹಿವಾಟು ನಡೆದಿದ್ದು, 20,067ಕ್ಕೂ ಹೆಚ್ಚು ಪರಿವರ್ತಕಗಳನ್ನು ಉತ್ಪಾದಿಸುವ ಮೂಲಕ ಕವಿಕಾ ಇತಿಹಾಸದಲ್ಲೇ ಗರಿಷ್ಠ ವಹಿವಾಟು ಮತ್ತು ಉತ್ಪಾದನೆಯ ದಾಖಲೆಯನ್ನು ಸೃಷ್ಟಿಸಿದೆ. ಕಾರ್ಖಾನೆಯು 2001ನೇ ಸಾಲಿನಲ್ಲಿ ಹದಿನೇಳು ಸಾವಿರ ಪರಿವರ್ತಕ ಪರಿಕರಗಳನ್ನು ಉತ್ಪಾದಿಸಿತ್ತು. ಅದೇ ದೊಡ್ಡ ಮಟ್ಟದ ದಾಖಲೆಯಾಗಿತ್ತು. ಈಗ ಇದನ್ನು ಮೀರಿಸಿ ಉತ್ಪಾದನೆ ನಡೆದಿದೆ ಎಂದು ಹೇಳಿದರು.ಏಕಪಾಳಿ ವ್ಯವಸ್ಥೆಯನ್ನು ಎರಡು ಅಥವಾ ಮೂರು ಪಾಳಿಗಳಿಗೆ ವಿಸ್ತರಿಸಿ, ಆಧುನಿಕ ಸಲಕರಣೆಗಳ ಸಹಾಯದಿಂದ ಅಧಿಕ ಉತ್ಪಾದನೆ ಸಾಧಿಸಲು ಈ ಬಾರಿ ಯೋಜನೆ ನಡೆಸಲಾಗಿದೆ ಎಂದ ಅವರು, ಕಳೆದ ಸಾಲಿಗೆ ಹೋಲಿಸಿದರೆ ಲಾಭಂಶ ಹೆಚ್ಚಾಗಿದೆ.ಲಾಭಾಂಶವು ಕಾರ್ಮಿಕರ ಸಂಬಳ ಮತ್ತು ಇತರೆ ಖರ್ಚುಗಳಿಗೆ ಸರಿ ದೂಗುತ್ತಿ ರುವುದ ರಿಂದ ಹೆಚ್ಚಿನ ಉಳಿತಾಯ ಸಾಧ್ಯವಾ ಗುತ್ತಿಲ್ಲ. ಆದರೆ ಕಾರ್ಖಾನೆ ನಷ್ಟದಲ್ಲಿ ಇಲ್ಲ ಎಂದು ಸ್ಪಷ್ಟಪಡಿಸಿದರು.ವಿದ್ಯುತ್ ಸರಬರಾಜು ಕಂಪೆನಿಗಳಿಂದ ವಿತರಕ ಪರಿವರ್ತಕಗಳ ಬೇಡಿಕೆ ಹೆಚ್ಚಾಗಿದ್ದು, ಬೇಡಿಕೆಗೆ ಅನುಗುಣವಾಗಿ ಉತ್ಪಾದನೆ ಪೂರೈಸಲು ಆಧುನಿಕ ಯಂತ್ರೋಪಕರ ಣಗಳನ್ನು ಖರೀದಿಸಲಾಗುವುದು. ಉತ್ಪಾದನೆಯನ್ನು ಶೇ 30ರಿಂದ 35ರಷ್ಟು ಹೆಚ್ಚಿಸಲು ಸ್ವಯಂಚಾಲಿತ ವೈಂಡಿಂಗ್ ಮೆಷಿನ್ ಖರೀದಿಸಲು ಟೆಂಡರ್ ಕರೆಯಲಾಗುವುದು ಎಂದು ಹೇಳಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.