ಕಾರ್ಮಿಕ ಮುಷ್ಕರ; 6 ವಾರ ಜೈಲು

7

ಕಾರ್ಮಿಕ ಮುಷ್ಕರ; 6 ವಾರ ಜೈಲು

Published:
Updated:

ಸಿಂಗಪುರ (ಪಿಟಿಐ): ಚೀನಾ ಮೂಲದ ಬಸ್ ಚಾಲಕನೊಬ್ಬನಿಗೆ ಸಿಂಗಪುರ ಕೋರ್ಟ್ ಆರು ವಾರಗಳ ಕಾಲ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.ಬೊ ಫೆಂಗ್ ಶಾನ್ (38) ಎಂಬ ಕಾರ್ಮಿಕ ಮುಷ್ಕರದಲ್ಲಿ ಪ್ರಮುಖ ಪಾತ್ರ ವಹಿಸಿದ್ದಕ್ಕೆ ಕೋರ್ಟ್ ಆತನಿಗೆ ಈ ಶಿಕ್ಷೆ ವಿಧಿಸಿದೆ. ಕಳೆದ 26 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ನವೆಂಬರ್ 26ರಂದು ಎಸ್‌ಎಂಆರ್‌ಟಿ ಕಂಪೆನಿಯ ಕಾರ್ಮಿಕರು ಮುಷ್ಕರ ಹಮ್ಮಿಕೊಂಡಿದ್ದರು. ಮುಷ್ಕರ ವಾಪಸು ಪಡೆಯುವಂತೆ  ಕಂಪೆನಿ ಸೂಚಿಸಿದರೂ ಮರುದಿನವೂ ಮುಷ್ಕರ ಮುಂದುವರೆಸಿದ್ದರು.ಮುಷ್ಕರದಿಂದಾಗಿ ಸಾರಿಗೆ ಸಂಪರ್ಕಕ್ಕೆ ಅಡ್ಡಿಯಾಗಿದ್ದು, ಅಪಾರ ಪ್ರಮಾಣದ ನಷ್ಟ ಉಂಟಾಗಿದೆ ಎಂದು ಕೋರ್ಟ್ ಹೇಳಿದೆ. ಶಿಕ್ಷೆಗೆ ಗುರಿಯಾದ ವ್ಯಕ್ತಿ ಜೊತೆಯಲ್ಲಿದ್ದ ಚೀನಾ ಮೂಲದ ನಾಲ್ಕು ಕಾರ್ಮಿಕರನ್ನು ಬಂಧಿಸಿ ಸೆರೆಯಲ್ಲಿಡಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry