ಕಾರ್ಯಗಾರ ತರಬೇತಿ ಶಿಬಿರ

7

ಕಾರ್ಯಗಾರ ತರಬೇತಿ ಶಿಬಿರ

Published:
Updated:

ಸಾಕರ್ ಸ್ಟಾರ್ಸ್‌

ಟಾಟಾ ಟಿ ಬ್ರಿಟನ್‌ನ ಅರ್ಸೆನಲ್ ಎಫ್‌ಸಿ ಸಹಯೋಗದಲ್ಲಿ ‘ಅರ್ಸೆನಲ್ ಟಾಟಾ ಟಿ ಜಾಗೊ ರೆ ಸಾಕರ್ ಸ್ಟಾರ್ಸ್‌’ ರಾಷ್ಟ್ರ ಮಟ್ಟದ ಫುಟ್‌ಬಾಲ್ ಪಂದ್ಯಾವಳಿಗಾಗಿ ತಂಡಗಳನ್ನು ಆರಿಸಲು ಗುರುವಾರ ಬೆಳಿಗ್ಗೆ 9 ಗಂಟೆಯಿಂದ ಸಂಜೆ 5 ರ ವರೆಗೆ ನಗರದ ಶಾಲಾ ತಂಡಗಳಿಗಾಗಿ ಪೂರ್ವಭಾವಿ ಪಂದ್ಯ ಏರ್ಪಡಿಸಿದೆ.

30ಕ್ಕೂ ಹೆಚ್ಚು ಶಾಲಾ ತಂಡಗಳು ಪಂದ್ಯಾವಳಿಯಲ್ಲಿ ಪಾಲ್ಗೊಳ್ಳಲಿವೆ.

ಸ್ಥಳ: ಸೇಂಟ್ ಜಾನ್ಸ್  ಕ್ರೀಡಾ ಸಂಕೀರ್ಣ, ಕೋರಮಂಗಲ.ವಿಚಾರ ಸಂಕಿರಣ

ಭಾರತೀಯ ಪರಿಸರ ಸ್ನೇಹಿ ಕಟ್ಟಡ ಮಂಡಳಿ (ಐಜಿಬಿಸಿ) ರಾಜ್ಯದಲ್ಲಿರುವ ವಾಸ್ತುಶಿಲ್ಪ ಹಾಗೂ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ವಿದ್ಯಾರ್ಥಿ ಮಾಹಿತಿ ಘಟಕ ತೆರೆಯಲು ಯೋಜಿಸಿದೆ. ಇದಕ್ಕೆ ಪೂರ್ವಭಾವಿಯಾಗಿ ವಾಸ್ತುಶಿಲ್ಪ ಮತ್ತು ಎಂಜಿನಿಯರಿಂಗ್ ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳಿಗಾಗಿ ಶನಿವಾರ ‘ಗ್ರೀನ್ ವೇವ್ಸ್’  ಉಚಿತ ವಿಚಾರ ಸಂಕಿರಣ ಆಯೋಜಿಸಿದೆ.

ಸ್ಥಳ: ಜೆ. ಎನ್. ಟಾಟಾ ಸಭಾಂಗಣ, ಭಾರತೀಯ ವಿಜ್ಞಾನ ಸಂಸ್ಥೆ, ಯಶವಂತಪುರ. ಮಾಹಿತಿಗೆ: www.igbc.in, 98864 14204.ಸಂಚಾರಿ ತಾರಾಲಯ

ನಿಕೆಲೊಡಾನ್ (ನಿಕ್) ಚಾನೆಲ್ ಮಕ್ಕಳ ವಾರಾಂತ್ಯದ ಮೋಜು ಹೆಚ್ಚಿಸಲು ಶನಿವಾರ ಮತ್ತು ಭಾನುವಾರ ನಕ್ಷತ್ರಗಳು, ಗ್ರಹಗಳ ವಿಸ್ಮಯಕಾರಿ ನೋಟವನ್ನು ಮಕ್ಕಳ ಮುಂದೆ ತರಲಿದೆ. ಇದಕ್ಕಾಗಿ ಗರುಡಾ ಮಾಲ್‌ನಲ್ಲಿ ಸಂಜೆ 5ರಿಂದ ಸಂಚಾರಿ ತಾರಾಲಯ ಪ್ರದರ್ಶಿಸುತ್ತಿದೆ. ಅಲ್ಲಿ ಮಕ್ಕಳನ್ನು ನಿಕ್ ಚಾನೆಲ್‌ನ ಜನಪ್ರಿಯ ಕಾರ್ಟೂನ್ ಪಾತ್ರಗಳು ರಂಜಿಸಲಿವೆ. ಅರ್ಜಿ ಫಾರಂ ಭರ್ತಿ ಮಾಡಿ, ಲಕ್ಕಿ ಡ್ರಾ ವಿಜೇತರಾದಲ್ಲಿ ನಾಸಾದ ‘ಯಂಗ್ ಆಸ್ಟ್ರಾನಾಟ್ಸ್ ಪ್ರೊಗ್ರಾಂ’ನಲ್ಲಿ ಪಾಲ್ಗೊಳ್ಳಬಹುದು.ನಾಸಾ ಭೇಟಿ, ನೈಜ ಗಗನಯಾತ್ರಿಯನ್ನು ಭೇಟಿಯಾಗುವ, ರಾಕೆಟ್ ನಿರ್ಮಿಸುವ ಹಾಗೂ ಉಡಾವಣೆ ಮಾಡುವ ಅವಕಾಶ ಇದರಿಂದ ಲಭ್ಯವಾಗಲಿದೆ.  ಅದಷ್ಟೇ ಅಲ್ಲ, ಸೂರ್ಯ, ಚಂದ್ರ, ಯಾವುದೇ ಗ್ರಹ ಅಥವಾ ಅನ್ಯಗ್ರಹ ಜೀವಿಯ ಉಡುಪು ಧರಿಸಿ ಬಂದ ಮಕ್ಕಳಿಗೆ ವಿಶೇಷ ಉಡುಗೊರೆಗಳಿವೆ.ಕಲಾ ಪ್ರದರ್ಶನ

ಉದ್ಯಮಿಗಳ ಕುಟುಂಬದಿಂದ ಬಂದಿರುವ ಕಲಾವಿದೆ ಮಾನಸಿ ಕಿರ್ಲೋಸ್ಕರ್, ಅಕ್ಷರ ಸಮುದಾಯ ಕೇಂದ್ರದ ನಿರಾಶ್ರಿತ ಮಕ್ಕಳಿಗೆ ಕಲಾ ತರಬೇತಿ ನೀಡುತ್ತಿದ್ದಾರೆ. ಈಗ ಆ ಮಕ್ಕಳು ರಚಿಸಿದ ಚಿತ್ರಗಳ ಪ್ರದರ್ಶನ ಮತ್ತು ಮಾರಾಟವನ್ನು ಗುರುವಾರ ಆಯೋಜಿಸಲಾಗಿದೆ.

ಸ್ಥಳ: ಕಿಂಕಿಣಿ ಆರ್ಟ್ ಗ್ಯಾಲರಿ, ಎಂಬೆಸಿ ಸ್ಕ್ವೇರ್, ಇನ್‌ಫೆಂಟ್ರಿ ರಸ್ತೆ. ಸಂಜೆ 5.30.ಬಂಜೆತನ ಶಿಬಿರ

ಬಂಜೆತನ ಚಿಕಿತ್ಸಾ ಕೇಂದ್ರ ‘ಶ್ಯೂರ್ ಫರ್ಟಿಲಿಟಿ’ ಶನಿವಾರ ಬೆಳಿಗ್ಗೆ 9 ರಿಂದ ಸಂಜೆ 5ರ ವರೆಗೆ ಒಂದು ದಿನದ ಉಚಿತ ಬಂಜೆತನ ಪರೀಕ್ಷಾ ಶಿಬಿರ ಆಯೋಜಿಸಿದೆ. ಆರು ತಿಂಗಳಿಗೂ ಹೆಚ್ಚು ಕಾಲ ಗರ್ಭಧಾರಣೆಗೆ ಪ್ರಯತ್ನಿಸಿ ವಿಫಲರಾಗಿರುವ ದಂಪತಿಗಳು, ಮಗು ಇದ್ದೂ ಎರಡನೇ ಮಗುವಿಗೆ ಗರ್ಭಧಾರಣೆಯಲ್ಲಿ ಸಮಸ್ಯೆಯಾಗಿರುವ ದಂಪತಿಗಳು, ಪದೇ ಪದೇ ಗರ್ಭಪಾತವಾಗಿರುವ ಸ್ತ್ರೀಯರು, ಬೇರೆ ಕಡೆ ಚಿಕಿತ್ಸೆ ಪಡೆದು ಸಫಲರಾಗದ ದಂಪತಿಗಳು ಇದರ ಪ್ರಯೋಜನ ಪಡೆಯಬಹುದು.

ಸ್ಥಳ: 250, 24ನೇ ಮೇನ್ (ನಂದಿನಿ ಹೋಟೆಲ್ ಎದುರು), ಬ್ರಿಗೇಡ್ ಮಿಲೇನಿಯಂ ರಸ್ತೆ, ಜೆಪಿ ನಗರ 5 ನೇ ಹಂತ. ಉಚಿತ ನೋಂದಣಿಗೆ: 4350 0123.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry