ಸೋಮವಾರ, ಏಪ್ರಿಲ್ 19, 2021
25 °C

ಕಾರ್ಯನಿರ್ವಹಣಾಧಿಕಾರಿಗೆ ಘೇರಾವ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತುರುವೇಕೆರೆ: ತಾ.ಪಂ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ವಿ.ಟಿ.ವೆಂಕಟರಾಮಯ್ಯ ಅವರನ್ನು ಏಕಾಏಕಿ ಆ ಸ್ಥಾನದಿಂದ ಕಿತ್ತು ಹಾಕಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿ ದಲಿತ ಪ್ರಗತಿಪರ ಹೋರಾಟಗಳ ಒಕ್ಕೂಟದ ಪದಾಧಿಕಾರಿಗಳು ಮಂಗಳವಾರ ಇಒ ಹನುಮಂತಪ್ಪ ಅವರಿಗೆ ಘೇರಾವ್ ಮಾಡಿದ ಘಟನೆ ನಡೆಯಿತು.ಬೆಳಿಗ್ಗೆ ಇಒ ಕಚೇರಿ ಒಳ ನುಗ್ಗಿದ ಪ್ರತಿಭಟನಾಕಾರರು ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷರನ್ನು ಏಕಾಏಕಿ ಕಿತ್ತು ಬೇರೊಬ್ಬ ಮಹಿಳಾ ಸದಸ್ಯರನ್ನು ಅಧ್ಯಕ್ಷರನ್ನಾಗಿ ಮಾಡಲಾಗಿದೆ. ಹಾಲಿ ಅಧ್ಯಕ್ಷರು ರಾಜೀನಾಮೆ ನೀಡಿಲ್ಲ. ಸಾಮಾನ್ಯ ಸಭೆಯಲ್ಲಿ ಅವಿಶ್ವಾಸ ನಿರ್ಣಯವನ್ನೂ ಮಂಡಿಸಿಲ್ಲ.

 

ಕೆಲವು ಸದಸ್ಯರ ಜೊತೆ ಅಧಿಕಾರಿಗಳು ಕೈ ಜೋಡಿಸಿ ಸಂವಿಧಾನದತ್ತ ಅಧಿಕಾರ ಕಿತ್ತುಕೊಳ್ಳುವ ಮೂಲಕ ದಲಿತ ಮುಖಂಡರಿಗೆ ಅನ್ಯಾಯ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿ ವೆಂಕಟರಾಮಯ್ಯನವರನ್ನೇ ಸಾಮಾಜಿಕ ನ್ಯಾಯ ಸಮಿತಿಯ ಅಧ್ಯಕ್ಷರನ್ನಾಗಿ ಘೋಷಿಸುವವರೆಗೆ ಜಾಗ ಬಿಟ್ಟು ಕದಲುವುದಿಲ್ಲ  ಎಂದು ಪಟ್ಟು ಹಿಡಿದರು.ಇಒ ಹನುಮಂತಪ್ಪ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿ ಜುಲೈ 4ರಂದು ನಡೆದ ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷರ ಅಪ್ಪಣೆ ಮೇರೆಗೆ ಈ ವಿಷಯ ಚರ್ಚೆಗೆ ಬಂದಿತ್ತು. ತಾ.ಪಂ.ಅಧ್ಯಕ್ಷರೇ ವಿಷಯ ಪ್ರಸ್ತಾಪಿಸಿ ಬಹುಮತದ ಆಧಾರದ ಮೇಲೆ ಬೇರೊಬ್ಬರನ್ನು ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷರನ್ನಾಗಿ ಚುನಾಯಿಸಲು ಸೂಚಿಸಿದ್ದರು. ಆದರೆ ಈ ಕಲಾಪ ಸಭಾ ಕಾರ್ಯಸೂಚಿಯಲ್ಲಿ ಇರದ ಕಾರಣ ಹಾಗೂ ಅಧ್ಯಕ್ಷರ ಸಹಿ ಇಲ್ಲದ ಕಾರಣ ಅಧಿಕೃತವಾಗಿ ದಾಖಲಾಗಿಲ್ಲ ಎಂದು ಸ್ಪಷ್ಟಪಡಿಸಿದರು.ನಂತರ ಪ್ರತಿಭಟನಕಾರರು ಕಚೇರಿ ಮುಂದಿದ್ದ ಹೊಸ ಅಧ್ಯಕ್ಷರ  ನಾಮಫಲಕ ಕಿತ್ತೆಸೆದು ವೆಂಕಟರಾಮಯ್ಯ ನಾಮಫಲಕ ಹಾಕಿ ಪ್ರತಿಭಟನೆ ಅಂತ್ಯಗೊಳಿಸಿದರು. ದಲಿತ ಪ್ರಗತಿಪರ ಹೋರಾಟಗಳ ಒಕ್ಕೂಟದ ಗೌರವಾಧ್ಯಕ್ಷ ರಾಜಶೇಖರ್, ಅಧ್ಯಕ್ಷ ಚಿದಾನಂದ್, ಪದಾಧಿಕಾರಿಗಳಾದ ರೇವಣ್ಣ, ತಿಮ್ಮೇಶ್, ಉಮಾಪತಿ, ಡಾ.ಚಂದ್ರಯ್ಯ, ಮಾಯಸಂದ್ರ ಸುಬ್ರಹ್ಮಣ್ಯ, ರವಿಕುಮಾರ್ ಮತ್ತಿತರರು ಭಾಗವಹಿಸಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.