ಕಾರ್ಯನಿರ್ವಹಣೆಗೆ ಯೋಜನೆ ಅಡ್ಡಿ

7

ಕಾರ್ಯನಿರ್ವಹಣೆಗೆ ಯೋಜನೆ ಅಡ್ಡಿ

Published:
Updated:

ಗುಬ್ಬಿ: ಮಕ್ಕಳ ಸಮಸ್ಯೆಗಳಿಗೆ ಶಿಕ್ಷಣದ ಮೂಲಕ ಪರಿಹಾರ ಹೇಳುವ ಶಿಕ್ಷಕರ ಸುಗಮ ಕಾರ್ಯನಿರ್ವಹಣೆಗೆ ಅಕ್ಷರ ದಾಸೋಹದಂಥ ಯೋಜನೆಗಳು ಅಡ್ಡಿಯಾಗಿವೆ ಎಂದು ತುಮಕೂರು ಹಿರೇಮಠದ ಡಾ.ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯಪಟ್ಟರು.ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಗುರುವಾರ ನಡೆದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಕ್ಕಳ ಭವಿಷ್ಯ ತಿದ್ದುವ ಗುರುವಿಗೆ ಸರ್ಕಾರ ಕಾಲ ಕಾಲಕ್ಕೆ ತರುವ ಯೋಜನೆಗಳು ಹೊರೆಯಾಗುತ್ತಿವೆ. ಪೈಪೋಟಿ ಮೇಲೆ ಅಧಿಕಾರ ಹಿಡಿಯುತ್ತಿರುವ ಪಕ್ಷಗಳು ಅನ್ನಭಾಗ್ಯ, ಕ್ಷೀರಭಾಗ್ಯ ಇತರೆ ಯೋಜನೆಗಳನ್ನು ಜಾರಿಗೆ ತಂದಿದೆ. ಪಠ್ಯಪುಸ್ತಕಗಳನ್ನು ಓದಿ ಮಕ್ಕಳಿಗೆ ಪಾಠ ಹೇಳಬೇಕಾದ ಶಿಕ್ಷಕರು ಓದದೆ ತರಗತಿ ಒಳಗೆ ಅಪಹಾಸ್ಯಕ್ಕೆ ಒಳಗಾಗುತ್ತಿದ್ದಾರೆ ಎಂದರು.ಶಾಸಕ ಎಸ್.ಆರ್.ಶ್ರೀನಿವಾಸ್ ಮಾತನಾಡಿದರು. ಜಿ.ಪಂ. ಸದಸ್ಯರಾದ ಟಿ.ಆರ್.ಗೌರಮ್ಮ, ಪಿ.ಬಿ.ಚಂದ್ರಶೇಖರಬಾಬು, ತಾ.ಪಂ. ಅಧ್ಯಕ್ಷ ಕೆ.ಎನ್.ಬಾಲಕೃಷ್ಣ, ಉಪಾಧ್ಯಕ್ಷೆ ಚಿಕ್ಕಮ್ಮ, ಸ್ಥಾಯಿ ಸಮಿತಿ ಅಧ್ಯಕ್ಷ ತೀರ್ಥ ಪ್ರಸಾದ್, ಬಿಇಒ ಪಿ.ಬಿ.ಬಸವರಾಜು, ತಾಲ್ಲೂಕು ಕಾರ್ಯನಿರ್ವಹಣಾಧಿಕಾರಿ ಮಂಜುನಾಥ್, ಮುಖ್ಯ ಶಿಕ್ಷಕರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಎಚ್.ಕೆ.ಕರಿಯಪ್ಪ, ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಅಧ್ಯಕ್ಷ ರಾಜೇಶ್ ಇತರರು ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry