ಕಾರ್ಯಪ್ಪಪ್ರತಿಮೆಗೆ ಅವಮಾನ: ವಿವಿಧೆಡೆ ಪ್ರತಿಭಟನೆ

7

ಕಾರ್ಯಪ್ಪಪ್ರತಿಮೆಗೆ ಅವಮಾನ: ವಿವಿಧೆಡೆ ಪ್ರತಿಭಟನೆ

Published:
Updated:
ಕಾರ್ಯಪ್ಪಪ್ರತಿಮೆಗೆ ಅವಮಾನ: ವಿವಿಧೆಡೆ ಪ್ರತಿಭಟನೆ

ಸೋಮವಾರಪೇಟೆ: ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಪ್ರತಿಮೆಗೆ ಮಡಿಕೇರಿಯಲ್ಲಿ ಕಿಡಿಗೇಡಿಗಳು ಮಂಗಳವಾರ ಅವಮಾನ ಎಸಗಿರುವ ಕೃತ್ಯವನ್ನು ಖಂಡಿಸಿ ಬುಧವಾರ ಪಟ್ಟಣದ ವಿವಿಧ ಸಂಘಟನೆಯವರು ಮೂರು ಗಂಟೆ ಕಾಲ ಬಂದ್ ಹಾಗು ಪ್ರತಿಭಟನಾ ಧರಣಿ ನಡೆಸಿದರು.ಮಧ್ಯಾಹ್ನ 2ರಿಂದ ಸಂಜೆ 5ರವರೆಗೆ ನಡೆದ ಬಂದ್‌ಗೆ ಪೂರ್ಣ ಬೆಂಬಲ ವ್ಯಕ್ತವಾಯಿತು. ಪ್ರತಿಭಟನಾಕಾರರು ನಗರದ ಪ್ರಮುಖ ಬೀದಿಯಲ್ಲಿ ಮೆರವಣಿಗೆ ನಡೆಸಿ ಕೃತ್ಯ ಖಂಡಿಸಿ ಆರೋಪಿಗಳನ್ನು ಬಂಧಿಸಿ ಗಡಿಪಾರು ಮಾಡುವಂತೆ ಒತ್ತಾಯಿಸಿದರು.ಕೊಡವ ಸಮಾಜದ ಅಧ್ಯಕ್ಷ ಎಂ.ಬಿ.ಅಭಿಮನ್ಯು ಕುಮಾರ್, ಮರ್ಚೆಂಟ್ಸ್ ಅಸೋಸಿಯೇಷನ್ ಅಧ್ಯಕ್ಷ ವಿಜೇತ, ಜಯಕರ್ನಾಟಕ ಸಂಘಟನೆಯ ಅಧ್ಯಕ್ಷ ಸುರೇಶ್ ಶೆಟ್ಟಿ, ವಾಹನ ಚಾಲಕರ ಸಂಘದ ಅಧ್ಯಕ್ಷ ರಮೇಶ್, ಆಟೋ ಚಾಲಕರ ಸಂಘದ ಅಧ್ಯಕ್ಷ ಉಮೇಶ್ ಇತರರು ಇದ್ದರು.ಮಾದಾಪುರದಲ್ಲಿ ಪ್ರತಿಭಟನೆ


ಮಡಿಕೇರಿ: ಕೆ.ಎಂ. ಕಾರ್ಯಪ್ಪ ಅವರ ಪ್ರತಿಮೆಗೆ ಅವಮಾನ ಮಾಡಿರುವುದನ್ನು ಖಂಡಿಸಿ ಮಾದಾಪುರದ ಕೆ.ಎಂ. ಕಾರ್ಯಪ್ಪ ಗ್ರಾಮೀಣಭಿವೃದ್ಧಿ ಯುವಕ ಸಂಘ ಬುಧವಾರ ಪ್ರತಿಭಟನೆ ನಡೆಸಿತು.ಮಾದಾಪುರದ ಚೇಂಬರ್ ಆಫ್ ಕಾಮರ್ಸ್‌ನ ರೋಹನ್ ಬೋಪಣ್ಣ, ಜಿಲ್ಲಾ ಪಂಚಾಯಿತಿ ಸದಸ್ಯ ಟಿ.ಪಿ. ಸಂದೇಶ್, ಗ್ರಾಮ ಪಂಚಾಯಿತಿ ಅಧ್ಯಕ್ಷ ಮತ್ತು ಸದಸ್ಯರು ಹಾಗೂ ಆಟೋ ಚಾಲಕರ ಸಂಘ, ಸಾರ್ವಜನಿಕರು ಸೇರಿದಂತೆ ಮಾನವ ಸರಪಳಿಮಾಡಿ ಘೋಷಣೆ ಕೂಗುತ್ತಾ ರಸ್ತೆತಡೆ ನಡೆಸಿದರು.ಈ ಘಟನೆಯನ್ನು ಖಂಡಿಸಿ ಸೋಮವಾರ ಪೇಟೆಯ ಎ.ಎಸ್.ಐ. ಅವರಿಗೆ ಈ ಕುರಿತು ಕೂಡಲೇ ಕ್ರಮ ಕೈಗೊಂಡು ಆರೋಪಿಗಳನ್ನು ಬಂಧಿಸಬೇಕು ಎಂದು ಮನವಿ ಪತ್ರ ಸಲ್ಲಿಸಿದರು.ಜೆಡಿಎಸ್ ಖಂಡನೆ: ಭಾರದ ಸರ್ವ ಶ್ರೇಷ್ಠ ಸೇನಾನಿ ಫೀ.ಮಾ. ಕಾರ್ಯಪ್ಪರವರ ಪ್ರತಿಮೆಗೆ ಅಗೌರವ ಸೂಚಿಸಿರುವುದನ್ನು ಖಂಡಿಸುವುದಾಗಿ ಎಂದು ಕೊಡಗು ಜಿಲ್ಲಾ ಜಾತ್ಯತೀತ ಜನತಾದಳದ ಅಧ್ಯಕ್ಷ ಎ.ಎಸ್. ಶಾಂತೂ ಅಪ್ಪಯ್ಯ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಕೊಡಗು ಜಿಲ್ಲೆ ಸಹೋದರತ್ವಕ್ಕೆ ಹೆಸರುವಾಸಿ. ಆದರೆ ಕೆಲವು ಕಿಡಿಗೇಡಿಗಳು ಸಮಾಜದಲ್ಲಿ ಕ್ಷೋಭೆಯುಂಟು ಮಾಡಲು ಇಂತಹ ಹೀನ ಕೃತ್ಯದಲ್ಲಿ ತೊಡಗಿದ್ದಾರೆ. ಇಂತಹ ಸಮಾಜಘಾತುಕರನ್ನು ಕೂಡಲೇ ಬಂಧಿಸಬೇಕೆಂದು ಅವರು ಒತ್ತಾಯಿಸಿದ್ದಾರೆ.ಪ್ರತಿಮೆ ಸ್ಥಳಾಂತರಕ್ಕೆ ಆಗ್ರಹ

ನಾಪೋಕ್ಲು: ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಪ್ರತಿಮೆಗೆ ಕಿಡಿಗೇಡಿಗಳು ಅವಮಾನ ಎಸಗಿರುವುದನ್ನು ಖಂಡಿಸಿ ಬುಧವಾರ ವಿವಿಧ ಸಂಘಟನೆ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಪಟ್ಟಣದಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟನೆ ಮಾಡಿದರು. ನಾಪೋಕ್ಲುವಿನಲ್ಲಿ ವರ್ತಕರು 10 ಗಂಟೆಯಿಂದ 1 ಗಂಟೆಯವರೆಗೆ ಅಂಗಡಿಮುಂಗಟ್ಟುಗಳನ್ನು ಮುಚ್ಚಿ ಪ್ರತಿಭಟನೆಗೆ ಬೆಂಬಲ ಸೂಚಿಸಿದರು. ಛೇಂಬರ್ ಆಫ್ ಕಾಮರ್ಸ್ ವತಿಯಿಂದ ನಡೆದ ಪ್ರತಿಭಟನೆಯಲ್ಲಿ ಕೊಡವ ಸಮಾಜ, ಮಾಜಿ ಸೈನಿಕರ ಸಂಘ, ಆಟೋ ಮಾಲೀಕ ಮತ್ತು ಚಾಲಕರ ಸಂಘ, ವಾಹನ ಮಾಲೀಕ ಮತ್ತು ಚಾಲಕರ ಸಂಘ, ಜಯಕರ್ನಾಟಕ ವೇದಿಕೆ, ವಿವಿಧ ಸಂಘಟನೆಗಳ ಕಾರ್ಯಕರ್ತರು ಪಾಲ್ಗೊಂಡಿದ್ದರು. ಇಲ್ಲಿನ ಗ್ರಾಮ ಪಂಚಾಯಿತಿ ಕಟ್ಟಡದ ಎದುರು ನಡೆದ ಬಹಿರಂಗ ಸಭೆಯಲ್ಲಿ ಸುದರ್ಶನ ವೃತ್ತದಲ್ಲಿರುವ ಕಾರ್ಯಪ್ಪ ಪ್ರತಿಮೆಗೆ ಭದ್ರತೆ ಕೊರತೆ ಇದ್ದು ಅದನ್ನು ರಾಜಾಸೀಟ್ ಬಳಿಗೆ ಸ್ಥಳಾಂತರ ಮಾಡುವುದರಿಂದ ರಕ್ಷಣೆ ಜೊತೆಗೆ ಹೆಚ್ಚಿನ ಗೌರವ ದೊರೆಯಲಿದೆ. ಜಿಲ್ಲಾಡಳಿತ ಕೂಡಲೇ ಈ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಲಾಯಿತು.ನಾಪೋಕ್ಲು ಕೊಡವ ಸಮಾಜದ ಅಧ್ಯಕ್ಷ ಮಣವಟ್ಟೀರ ಮಾಚಯ್ಯ, ನಿವೃತ್ತ ಶಿಕ್ಷಕ ಬಾದುಮಂಡ ಮುತ್ತಪ್ಪ ಲಯನ್ಸ್ ಪ್ರಾಂತೀಯ ಅಧ್ಯಕ್ಷ ಬಿದ್ದಾಟಂಡ ಬೆಳ್ಯಪ್ಪ, ಬಿದ್ದಾಟಂಡ ತಮ್ಮಯ್ಯ, ಮಾಜಿ ಸೈನಿಕರಾದ ಕಲಿಯಂಡ ಸಾಬು ಅಯ್ಯಣ್ಣ, ಕೊಂಡಿರ ಗಣೇಶ್, ನಾಪೋಕ್ಲು ಜಮಾಯತ್ ಅಧ್ಯಕ್ಷ ಅಬ್ದುಲ್ ರಹಿಮಾನ್, ಜೆ.ಡಿ. ಎಸ್. ಅಲ್ಪಸಂಖ್ಯಾತ ರಾಜ್ಯ ಪ್ರಧಾನ ಕಾರ್ಯದರ್ಶಿ ಮನ್ಸೂರ್ ಆಲಿ ಇತರರು ಪ್ರತಿಭಟನೆಯಲ್ಲಿದ್ದರು.ಮೂರ್ನಾಡು ರಸ್ತೆ ತಡೆ

ನಾಪೋಕ್ಲು: ಕಾರ್ಯಪ್ಪ ಅವರ ಪ್ರತಿಮೆಗೆ ಅವಮಾನ ಎಸಗಿರುವುದನ್ನು ಖಂಡಿಸಿ ಸಮೀಪದ ಮೂರ್ನಾಡು ಪಟ್ಟಣದಲ್ಲಿ ಸಾರ್ವಜನಿಕರು ಪ್ರತಿಭಟನಾ ಮೆರವಣಿಗೆ ನಡೆಸಿದರು.ಇಲ್ಲಿನ ಅಯ್ಯಪ್ಪ ದೇವಾಲಯದಿಂದ ಮೆರವಣಿಗೆ ನಡೆಸಿದ ವಿವಿಧ ಸಂಘಟನೆ ಕಾರ್ಯಕರ್ತರು ಪಟ್ಟಣದಲ್ಲಿ ಒಂದು ಗಂಟೆ ಕಾಲ ರಸ್ತೆ ತಡೆ ನಡೆಸಿ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ಮಾಡಿದರು. ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಪ್ರತಿಮೆಗೆ ಅವಮಾನ ಮಾಡಿರುವ ಆರೋಪಿಗಳನ್ನು ತಕ್ಷಣ ಬಂಧಿಸುವಂತೆ ಮೇಜರ್ ಬಿದ್ದಂಡ ನಂದ ಆಗ್ರಹಿಸಿದರು.ಮಡಿಕೇರಿ ತಾಲೂಕು ಕೃಷಿ ಉತ್ಪನ್ನ ಮಾರುಕಟ್ಟೆ ಅಧ್ಯಕ್ಷ ಬೆಲ್ಲು ಸೋಮಯ್ಯ ಕಸಾಪ ಮೂರ್ನಾಡು ಹೋಬಳಿ ಘಟಕದ ಅಧ್ಯಕ್ಷ ಮೇಚೀರ ಸುಭಾಷ್ ನಾಣಯ್ಯ, ಗ್ರಾ.ಪಂ ಅಧ್ಯಕ್ಷೆ ಮೀನಾಕ್ಷಿ ಕೇಶವ ಇತರರು ಇದ್ದರು.ಕುಶಾಲನಗರ, ಸುಂಟಿಕೊಪ್ಪದಲ್ಲಿ ಬಂದ್

ಕುಶಾಲನಗರ : ಕಾರ್ಯಪ್ಪ ಅವರ ಪ್ರತಿಮೆಗೆ ಅಪಮಾನ ಮಾಡಿರುವುದನ್ನು ಖಂಡಿಸಿ ಬುಧವಾರ ವಿವಿಧ ಸಂಘಟನೆಗಳ ವತಿಯಿಂದ ಕುಶಾಲನಗರ, ಸುಂಟಿಕೊಪ್ಪ ಪಟ್ಟಣದಲ್ಲಿ ಕೆಲಕಾಲ ಬಂದ್ ಆಚರಿಸಲಾಯಿತು.

ಕೊಡಗು ಜನಾಂದೋಲನ ವೇದಿಕೆ, ಮಾಜಿ ಸೈನಿಕರ ಸಂಘ ಸೇರಿದಂತೆ ಚೇಂಬರ್ ಆಫ್ ಕಾಮರ್ಸ್, ವಿವಿಧ ಸಂಘ ಸಂಸ್ಥೆಗಳ ವತಿಯಿಂದ ಈ ಘಟನೆಯನ್ನು ತೀವ್ರವಾಗಿ ಖಂಡಿಸಿ ಈ ಕೃತ್ಯ ನಡೆಸಿದವರನ್ನು ಪತ್ತೆಮಾಡಿ ತಕ್ಷಣ ಬಂಧಿಸಬೇಕು ಎಂದು ಒತ್ತಾಯಿಸಲಾಯಿತು. ಬೆಳಿಗ್ಗೆ 11 ರಿಂದ 1 ರವರೆಗೆ ನಡೆದ ಬಂದ್ ವೇಳೆ ಎಲ್ಲಾ ಅಂಗಡಿ ಮುಗ್ಗಟ್ಟುಗಳನ್ನು ಮುಚ್ಚಿ ಬಂದ್‌ಗೆ ಬೆಂಬಲ ವ್ಯಕ್ತಪಡಿಸಲಾಯಿತು.ಕುಶಾಲನಗರದಲ್ಲಿ   ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವತಿಯಿಂದ ಘಟನೆ ಯನ್ನು ಖಂಡಿಸಿ ಜಿ.ಎಲ್.ನಾಗರಾಜ್ ನೇತೃತ್ವದಲ್ಲಿ ಪಂಜಿನ ಮೆರವಣಿಗೆ ನಡೆಸಲಾಯಿತು.ಪ್ರತಿಮೆಗೆ ಅವಮಾನ: ಖಂಡನೆ


ಶನಿವಾರಸಂತೆ: ಮಡಿಕೇರಿಯಲ್ಲಿ ಫೀಲ್ಡ್ ಮಾರ್ಷಲ್ ಜನರಲ್ ಕಾರ್ಯಪ್ಪ ಪ್ರತಿಮೆಗೆ ಅವಮಾನ ಎಸಗಿರುವ ಕೃತ್ಯವನ್ನು ಖಂಡಿಸಿ ಗ್ರಾಮ ಪಂಚಾಯಿತಿ ಆಡಳಿತ ಮಂಡಳಿ, ನಿವೃತ್ತ ಸೈನಿಕರ ಸಂಘ, ವಾಣಿಜ್ಯೋದ್ಯಮಿಗಳ ಸಂಘ, ವಿದ್ಯಾರ್ಥಿಗಳು, ವಿವಿಧ ಸಂಘಟನೆಯವರು ಪಟ್ಟಣದಲ್ಲಿ ಬುಧವಾರ ಕಾರ್ಯಪ್ಪ ಅವರ ತೈಲಚಿತ್ರದೊಂದಿಗೆ ಜಾಥಾ ಮಾಡಿ ಪ್ರತಿಭಟನೆ ನಡೆಸಿದರು.ಪಟ್ಟಣದ 1ನೇ ವಿಭಾಗದಲ್ಲಿರುವ ಕಾರ್ಯಪ್ಪ ಜನಿಸಿದ ಮನೆಯಿಂದ                  (ಇಂದಿನ ಸಾರ್ವಜನಿಕ ಗ್ರಂಥಾಲಯ)ಅವರ ತೈಲಚಿತ್ರದೊಂದಿಗೆ ಹೊರಟ ಜಾಥಾಕ್ಕೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಎಸ್.ಎನ್.ರಘು ಚಾಲನೆ ನೀಡಿದರು. ಮುಖ್ಯರಸ್ತೆಯಲ್ಲಿ ಸಾಗಿದ ಜಾಥಾ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಲ್ಲಿ ಸಮಾವೇಶಗೊಂಡಿತು. ಪಂಚಾಯಿತಿ ಅಧ್ಯಕ್ಷ ಎಸ್.ಎನ್.ರಘು,ಭಾರತಿ ವಿದ್ಯಾಸಂಸ್ಥೆ ಪ್ರಾಂಶುಪಾಲ ಎಂ.ಆರ್.ನಿರಂಜನ್, ನಿವೃತ್ತ ಸೈನಿಕರ ಸಂಘದ ಅಧ್ಯಕ್ಷ ಧರ್ಮಪ್ಪ ಮಾತನಾಡಿದರು. ತಾಪಂ ಸದಸ್ಯರಾದ ಜೆ.ಆರ್.ಫಾಲಾಕ್ಷ, ಸವಿತಾ, ಕೊಡ್ಲಿಪೇಟೆ ವಾಣಿಜ್ಯೋದ್ಯಮಿಗಳ ಸಂಘದ ಅಧ್ಯಕ್ಷ ಯತೀಶ್‌ಕುಮಾರ್, ದುಂಡಳ್ಳಿ ಗ್ರಾಪಂ ಅಧ್ಯಕ್ಷ ಸಿ.ಬಿ.ಅಬ್ಬಾಸ್, ಪಂಚಾಯಿತಿ ಸದಸ್ಯರಾದ ಮಹ್ಮದ್‌ಗೌಸ್, ಮಂಜುನಾಥ್, ಸಹಕಾರ ಬ್ಯಾಂಕ್ ಅಧ್ಯಕ್ಷ ಶರತ್‌ಶೇಖರ್, ಎಸ್.ಆರ್.ರಾಜು, ಜೆಡಿಎಸ್ ಪ್ರಮುಖರಾದ ಆದಿಲ್‌ಪಾಶಾ, ಭಾಸ್ಕರ್, ಕುಶಾಲಪ್ಪ,ಆಟೋ ಚಾಲಕರ ಸಂಘದ ಪದಾಧಿಕಾರಿಗಳು , ವಿದ್ಯಾರ್ಥಿಗಳು ಇದ್ದರು. ಪಟ್ಟಣದಲ್ಲಿ ವರ್ತಕರು ಮಧ್ಯಾಹ್ನ12 ಗಂಟೆಯಿಂದ 2 ಗಂಟೆವರೆಗೆ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ಪ್ರತಿಭಟನೆಗೆ ಬೆಂಬಲ ಸೂಚಿಸಿದರು.ಪ್ರತಿಮೆಗೆ ಅವಮಾನ: ಪ್ರತಿಭಟನೆ

ಸಿದ್ದಾಪುರ: ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಪ್ರತಿಮೆಗೆ ಅವಮಾನ ಮಾಡಿದ ಆರೋಪಿಗಳ ವಿರುದ್ಧ ಕ್ರಮ ಕೈಗೂಳ್ಳುವಂತೆ ಆಗ್ರಹಿಸಿ ಸಿದ್ದಾಪುರ ಹಾಗೂ    ಅಮ್ಮತ್ತಿ ಸಮೀಪದ ಒಂಟಿಯಂಗಡಿಯಲ್ಲಿ ಬುಧವಾರ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು .ಸ್ದ್ದಿದಾಪುರದಲ್ಲಿ ನಗರ ಚೇಂಬರ್ ಆಫ್ ಕಾಮರ್ಸ್,ಕೊಡವ ಕಲ್ಚರಲ್ ಅಸೋಸಿಯೇಶನ್ ಹಾಗೂ ಸ್ಥಳೀಯ ಸಂಘ ಸಂಸ್ಥೆಗಳ ನೇತೃತ್ವದಲ್ಲಿ ಬೆಳ್ಳಿಗೆ 10ರಿಂದ 12ರವರೆಗೆ ಅಂಗಡಿಗಳನ್ನು ಮುಚ್ಚಲಾಗಿತ್ತು. ಚೇಂಬರ್ ಆಫ್ ಕಾಮರ್ಸ್‌ನ ಅಧ್ಯಕ್ಷ ಪಿ.ಯಂ.ರಾಜ್‌ಕುಮಾರ್, ಕಾರ್ಯಧರ್ಶಿ ಜೋಸಫ್ ಸಾಂ, ಬೆಳೆಗಾರರಾದ ಅಚ್ಚಯ್ಯ,ತಾ.ಪಂ.ಸದಸ್ಯ ಪಿ.ವಿ.ಜಾನ್ಸ್‌ನ್, ದೇವಣ್ಣೀರ ಸುಜಯ್, ಮನೋಹರ, ಕೆ.ಯಂ.ಜೆನೀಶ್, ಬಿಜೋಯ್, ಪದ್ಮನಾಭ, ಮಣಿಕಂಠನ್ ಇತರರು ಇದ್ದರು.ರಸ್ತೆ ತಡೆ:  ಕಾರ್ಯಪ್ಪ ಪ್ರತಿಮೆಗೆ ಅವಮಾನ ಎಸಗಿದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಅಮ್ಮತ್ತಿ ಸಮೀಪದ ಒಂಟಿಯಂಗಡಿಯಲ್ಲಿ ಒಂದು ಗಂಟೆ ಕಾಲ ರಸ್ತೆ ತಡೆ ನಡೆಯಿತು. ಕಣ್ಣಂಗಾಲ ಗ್ರಾ.ಪಂ. ಉಪಾಧ್ಯಕ್ಷ ಮಹೇಂದ್ರ ಪ್ರತಿಭಟನೆಯ ನೇತೃತ್ವ ವಹಿಸಿದ್ದರು. ಕೊಡವ ಸಂಸ್ಥೆ ಸದಸ್ಯರಾದ ಎಂ.ಜಿ.ಮೇದಪ್ಪ,ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ರೋಬಿನ್ ಚಿನ್ನಪ್ಪ ವಾಹನ ಚಾಲಕರ ಸಂಘದ ಸದಸ್ಯರು ಹಾಗೂ ಚಾಮುಂಡಿ ಯುವಕ ಸಂಘದ ಪದಾಧಿಕಾರಿಗಳು ಇದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry