ಶುಕ್ರವಾರ, ಜೂನ್ 18, 2021
24 °C

ಕಾರ್ಯಪ್ಪ ಧ್ಯೇಯ ಅಳವಡಿಸಿಕೊಳ್ಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾರ್ಯಪ್ಪ ಧ್ಯೇಯ ಅಳವಡಿಸಿಕೊಳ್ಳಿ

 ಶನಿವಾರಸಂತೆ: ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪನವರ ಧ್ಯೇಯೋದ್ದೇಶಗಳನ್ನು ಅಳವಡಿಸಿಕೊಂಡಾಗ ಮಾತ್ರ ವ್ಯವಸ್ಥೆಯಲ್ಲಿ ಬದಲಾವಣೆ ಕಾಣಲು ಸಾಧ್ಯ ಎಂದು ವಿಧಾನಸಭಾಧ್ಯಕ್ಷ ಕೆ.ಜಿ. ಬೋಪಯ್ಯ ಅಭಿಪ್ರಾಯಪಟ್ಟರು.ಪಟ್ಟಣದ ಸರ್ಕಾರಿ ಮಾಧ್ಯಮಿಕ ಶಾಲಾ ಮತ್ತು ಭಾರತಿ ವಿದ್ಯಾಸಂಸ್ಥೆ  ಕ್ರೀಡಾಂಗಣದಲ್ಲಿ ಗ್ರಾಮ ಪಂಚಾಯಿತಿ, ಕಾರ್ಯಪ್ಪ ಸ್ಮರಣ ಸಮಿತಿ, ಮಾಜಿ ಸೈನಿಕರ ಸಂಘ, ಕಾರ್ಯಪ್ಪ ಅಭಿಮಾನಿ ಬಳಗವು ಶನಿವಾರ ಆಯೋಜಿಸಿದ್ದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಅವರ ನೆನಪು-ನಮನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಕಾರ್ಯಪ್ಪ ಅವರ ಹೆಸರಿನಿಂದ ಕೊಡಗನ್ನು ಗುರುತಿಸುವಂತಾಗಿದೆ. ಶನಿವಾರಸಂತೆಯಲ್ಲಿ ಅವರು ಹುಟ್ಟಿದ ಮನೆ ಗ್ರಂಥಾಲಯವಾಗಿದ್ದು, ಸ್ಮಾರಕವಾಗಿ ಅಭಿವೃದ್ಧಿ ಪಡಿಸಲು 4 ಲಕ್ಷ ರೂಪಾಯಿ ಅನುದಾನ ನೀಡಲಾಗುವುದು. ಕನ್ನಡ ಅಭಿವೃದ್ಧಿ ಪ್ರಾಧಿಕಾರದಿಂದ ಉತ್ತಮ ಗ್ರಂಥಗಳ ಕೊಡುಗೆ ನೀಡಲಾಗುವುದು.ಗ್ರಂಥಾಲಯದ ಮುಂದೆ ಕಾರ್ಯಪ್ಪ ಪ್ರತಿಮೆ ಸ್ಥಾಪನೆ ಬಗ್ಗೆ ಚಿಂತನೆ ನಡೆಸಲಾಗುವುದು. ಕೂಡಿಗೆಯಲ್ಲಿರುವ ಸೈನಿಕರ ಶಾಲೆಗೆ ಕಾರ್ಯಪ್ಪ ಅವರ ಹೆಸರನ್ನು ಇಡಲಾಗುವುದು ಎಂದು ಭರವಸೆ ನೀಡಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.