ಕಾರ್ಯವೈಖರಿಗೆ ಪಿಳ್ಳೈ ಮೆಚ್ಚುಗೆ

7

ಕಾರ್ಯವೈಖರಿಗೆ ಪಿಳ್ಳೈ ಮೆಚ್ಚುಗೆ

Published:
Updated:
ಕಾರ್ಯವೈಖರಿಗೆ ಪಿಳ್ಳೈ ಮೆಚ್ಚುಗೆ

ಬೆಂಗಳೂರು: ಕೇಂದ್ರ ಗೃಹ ಇಲಾಖೆ ಕಾರ್ಯದರ್ಶಿ ಜಿ.ಕೆ.ಪಿಳ್ಳೈ ಅವರು ನಗರದ ಸಂಚಾರ ನಿರ್ವಹಣಾ ಕೇಂದ್ರಕ್ಕೆ (ಟಿಎಂಸಿ) ಸೋಮವಾರ ಭೇಟಿ ನೀಡಿ ಮಾಹಿತಿ ಪಡೆದರು.

‘ಬೆಂಗಳೂರು ಪೊಲೀಸರು ಸಂಚಾರ ನಿರ್ವಹಣೆ ಹಾಗೂ ಇನ್ನಿತರ ಕಾರ್ಯಗಳಲ್ಲಿ ತಂತ್ರಜ್ಞಾನವನ್ನು ಅಳವಡಿಸಿಕೊಂಡಿದ್ದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದ ಕೇಂದ್ರ ಸರ್ಕಾರ ಚಿನ್ನದ ಪದಕ ನೀಡಿತ್ತು. ಈ ಬಗ್ಗೆ ಮಾಹಿತಿ ಪಡೆದಿದ್ದ ಪಿಳ್ಳೈ ಅವರು ಅದನ್ನು ಖುದ್ದಾಗಿ ನೋಡಲು ನಗರಕ್ಕೆ ಬಂದಿದ್ದರು’ ಎಂದು ನಗರ ಪೊಲೀಸ್ ಕಮಿಷನರ್ ಶಂಕರ್ ಬಿದರಿ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

 

‘ಬಿ-ಟ್ರಾಕ್ ಯೋಜನೆಯ ಜಾರಿ ಮತ್ತು ನಗರದ ಸಂಚಾರ ನಿರ್ವಹಣೆಯ ಬಗ್ಗೆ ಪಿಳ್ಳೈ ಅವರು ವಿಸ್ತೃತ ಮಾಹಿತಿ ಪಡೆದರು. ಇಲ್ಲಿನ ವ್ಯವಸ್ಥೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು ದೇಶದ ಎಲ್ಲ ಮೆಟ್ರೊ ಪಾಲಿಟಿನ್ ನಗರಗಳಲ್ಲಿ ಬೆಂಗಳೂರು ಮಾದರಿಯ ಸಂಚಾರ ವ್ಯವಸ್ಥೆಯನ್ನು ಜಾರಿಗೆ ತರುವಂತೆ ಸೂಚಿಸಲಾಗುತ್ತದೆ ಎಂದು ಪ್ರತಿಕ್ರಿಯಿಸಿದರು’ ಎಂದು ಬಿದರಿ ಹೇಳಿದರು.

 

‘ಇಂಧನ ಪೋಲಾಗುವುದನ್ನು ತಡೆಗಟ್ಟಲು ದೇಶದಲ್ಲೇ ಮೊದಲ ಬಾರಿಗೆ ನಗರದಲ್ಲಿ ಪೆಟ್ರೊ ಕಾರ್ಡ್ ವ್ಯವಸ್ಥೆ ಜಾರಿಗೆ ತರಲಾಗಿದೆ. ಭಾರತೀಯ ತೈಲ ನಿಗಮದ (ಐಓಸಿ) ಜತೆ ಒಪ್ಪಂದ ಮಾಡಿಕೊಂಡು ನಗರದ ಎಲ್ಲ ಐಓಸಿ ಬಂಕ್‌ಗಳಲ್ಲಿ ಪೊಲೀಸ್ ವಾಹನಗಳು ಇಂಧನ ತುಂಬಿಸಿಕೊಳ್ಳಲು ಪೆಟ್ರೊ ಕಾರ್ಡ್‌ನಿಂದ ಸಾಧ್ಯವಾಗಿದೆ. ಪೆಟ್ರೊ ಕಾರ್ಡ್ ಬಗ್ಗೆಯೂ ಪಿಳ್ಳೈ ಅವರಿಗೆ ಮಾಹಿತಿ ನೀಡಿದೆವು’ ಎಂದು ಅವರು ಹೇಳಿದರು.

 

ರಾಜ್ಯ ಪೊಲೀಸ್ ಮಹಾನಿರ್ದೇಶಕ ಡಾ.ಎಸ್.ಟಿ.ರಮೇಶ್, ಸಂಚಾರ ವಿಭಾಗದ ಹೆಚ್ಚುವರಿ ಪೊಲೀಸ್ ಕಮಿಷನರ್ ಪ್ರವೀಣ್‌ಸೂದ್, ಡಿಸಿಪಿ ವಿ.ರಾಮಯ್ಯ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry