ಸೋಮವಾರ, ಮೇ 17, 2021
21 °C

ಕಾರ್ಯವೈಖರಿ ಬದಲಿಸಿಕೊಳ್ಳಲು ಸಲಹೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ದೇಶದೆಲ್ಲೆಡೆ ಪೊಲೀಸ್ ಪಡೆಗಳು ಸಾರ್ವಜನಿಕ ಪ್ರತಿಭಟನೆಗಳನ್ನು ನಿರ್ವಹಿಸುವಾಗ ತಮ್ಮ ಕಾರ್ಯವೈಖರಿಯನ್ನು ಪುನರ್‌ವಿಮರ್ಶೆಗೆ ಒಳಪಡಿಸಿಕೊಳ್ಳಬೇಕು ಮತ್ತು ಕಲ್ಲು ತೂರಾಟ ಮತ್ತಿತರ ನಾಗರಿಕ ಗಲಭೆಗಳನ್ನು ನಿಯಂತ್ರಿಸುವಾಗ ಮಾರಣಾಂತಿಕವಲ್ಲದ ವಿಧಾನಗಳನ್ನು ಮಾತ್ರ ಪ್ರಯೋಗಿಸಬೇಕು ಎಂದು ಕೇಂದ್ರ ಗೃಹ ಸಚಿವ ಪಿ. ಚಿದಂಬರಂ ಸೂಚಿಸಿದರು.`ಭದ್ರತಾ ಪಡೆಗಳು ಆಗಾಗ ಎದುರಿಸುತ್ತಿರುವ ಸವಾಲುಗಳೆಂದರೆ, ನಾಗರಿಕ ಗಲಭೆಗಳನ್ನು ಹೇಗೆ ನಿರ್ವಹಣೆ ಮಾಡುವುದು ಮತ್ತು ಇದನ್ನು ನಿಯಂತ್ರಿಸಲು ಎಷ್ಟು ಪಡೆಗಳನ್ನು ಬಳಸಬೇಕು ಎಂಬುದಾಗಿದೆ~ ಎಂದು ಅವರು ತಿಳಿಸಿದರು.ಸಚಿವರು ಗುರುವಾರ ಇಲ್ಲಿ ದೇಶದ ಉನ್ನತ ಪೊಲೀಸ್ ಅಧಿಕಾರಿಗಳ ಸಭೆಯಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಕಳೆದ ವರ್ಷ ನಡೆದ ಕಲ್ಲು ತೂರಾಟ ಮತ್ತು ಹಿಂಸಾತ್ಮಕ ಗಲಭೆಯನ್ನು ಪ್ರಸ್ತಾಪಿಸಿ ಮಾತನಾಡಿದರು.

  

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.