ಮಂಗಳವಾರ, ಜೂನ್ 22, 2021
27 °C

ಕಾರ್ಯಾಗಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕರ್ನಾಟಕ ಶಾಸ್ತ್ರೀಯ ಸಂಗೀತ ಸಂಯೋಜಕ ಪಾಪನಾಶನಂ ಶಿವನ್‌ ಅವರ ಕುರಿತ ಎರಡು ದಿನಗಳ ಕಾರ್ಯಾಗಾರ ಮಾರ್ಚ್‌ 8ರಿಂದ ಆರಂಭವಾಗಲಿದೆ. ಈ ಕಾರ್ಯಾಗಾರದಲ್ಲಿ ಪಾಲ್ಗೊಳ್ಳುವವರಿಗೆ 19ನೇ ಶತಮಾನದ ಪ್ರಸಿದ್ಧ ಸಂಗೀತಕಾರರಾದ ಪಾಪನಾಶನಂ ಶಿವನ್‌ ಅವರ ಕೆಲವೊಂದು ಪ್ರಸಿದ್ಧ ಕೀರ್ತಿ ಹಾಗೂ ಸಂಗೀತ ಸಂಯೋಜನೆಗಳ ಕಲಿಯುವ ಅವಕಾಶ ಸಿಗಲಿದೆ.ಸ್ಥಳ: ವರ್ಲ್ಡ್‌ ಮ್ಯೂಸಿಕ್‌ ಸೆಂಟರ್‌, ನಂ. 42, ಈಸ್ಟ್‌ ಪಾರ್ಕ್‌ ರಸ್ತೆ, 17 ಮಲ್ಲೇಶ್ವರ. ಸಮಯ: ಮಧ್ಯಾಹ್ನ 2ರಿಂದ ಸಂಜೆ 6.30. ಮಾಹಿತಿಗೆ: 2344 8400/ 98452 52320.

ವಿಚಾರ ಸಂಕಿರಣ

ಶಾಂಭವಿ ನೃತ್ಯ ಶಾಲೆ ಆಶ್ರಯದಲ್ಲಿ ‘ನಾಯಿಕಾ’ ವಿಚಾರ ಸಂಕಿರಣ ಆಯೋಜಿಸಲಾಗಿದೆ. ಶನಿವಾರ ಬೆಳಿಗ್ಗೆ 10ರಿಂದ ‘ಕೂಚಿಪುಡಿ ನೃತ್ಯ ಪ್ರಕಾರಕ್ಕೆ ಮಹಿಳೆಯರ ಕೊಡುಗೆ’ ವಿಷಯ ಕುರಿತು ಡಾ. ಯಾಮಿನಿ ಕೃಷ್ಣಮುರ್ತಿ, ಸುವರ್ಣ ಲತಾ, ಅನುರಾಧಾ ಜನೋಲ್ಗೊಡ್ಡ, ಆರ್‌.ಕೆ. ಉಷಾ, ಕೊತಪಲ್ಲಿ ಪದ್ಮಾ, ವೈಜಯಂತಿ ಕಾಶಿ ಮಾತನಾಡಲಿದ್ದಾರೆ. ಸಂಜೆ 5.30ರಿಂದ ಯಾಮಿನಿ ಕೃಷ್ಣಮುರ್ತಿ ಅವರ ಕುರಿತ ಚಲನಚಿತ್ರ ಪ್ರದರ್ಶನ.ರುಕ್ಮಿಣಿ ವಿಜಯಕುಮಾರ್‌ ಹಾಗೂ ಪ್ರತೀಕ್ಷಾ ಕಾಶಿ ಅವರಿಂದ ಭರತನಾಟ್ಯ ಹಾಗೂ ಕೂಚಿಪುಡಿಯ ಯುಗಳ ನೃತ್ಯ. ಪದ್ಮಶ್ರೀ ಹಾಗೂ ಶೊವನಾ ನಾರಾಯಣ ಅವರಿಂದ ಕಥಕ್‌ ಹಾಗೂ ಕೂಚಿಪುಡಿ ಏಕವ್ಯಕ್ತಿ ಹಾಗೂ ಯುಗಳ ನೃತ್ಯ. ಅನುರಾಧಾ ವಿಕ್ರಾಂತ್‌ ಹಾಗೂ ಶಮಾ ಕೃಷ್ಣ ಅವರಿಂದ ಭರತನಾಟ್ಯ ಹಾಗೂ ಕೂಚಿಪುಡಿ ಯುಗಳ ನೃತ್ಯ. ಯಾಮಿನಿ ಕೃಷ್ಣಮೂರ್ತಿ ಅವರಿಗೆ ‘ನಾಟ್ಯಶಾಸ್ತ್ರ’ ಪದವಿ ಪ್ರದಾನ. ಸಾನ್ನಿಧ್ಯ– ಗುರುಮಾತಾ ಅಮ್ಮ. ಅತಿಥಿ– ಆಶಿಶ್‌ ಮೋಹನ್‌ ಖೋಕರ್‌.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.